ದೇವರು

ವಾಸ್ತು ಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಹಾಗೇನಾದ್ರೂ ಇಟ್ಟರೆ ಮಹಾಪಾಪ ಅನುಭವಿಸಬೇಕಾಗುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಾಸ್ತು ಶಾಸ್ತ್ರದ ಪ್ರಕಾರ ಈ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು.

 

ಈ ಐದು ವಸ್ತುಗಳನ್ನು ಯಾವ ಪರಿಸ್ಥಿತಿಯಲ್ಲೂ  ಸಹ ನೆಲದ ಮೇಲೆ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.ಒಂದು ವೇಳೆ ನೆಲದ ಮೇಲೆ ಇಟ್ಟರೆ ಎಲ್ಲ ಅಶುಭವೇ ಉಂಟಾಗುತ್ತದೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

 

 

ನಮ್ಮ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಪೂಜೆಗೆ ಬಳಸುವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಅದು ಪೂಜೆಗೆ ಅರ್ಹ ಅಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಾಗೆಯೇ ಅದರ ಜೊತೆಗೆ ಈ ಐದು ವಸ್ತುಗಳನ್ನು ಯಾವ ಕಾರಣಕ್ಕೂ ನೆಲದ ಮೇಲೆ ಇಡಬಾರದು ಎಂದು ಹಿಂದೂ ಧರ್ಮ ಹೇಳುತ್ತಿದೆ.

 ಶಿವಲಿಂಗ.

 

 

ಶಿವಲಿಂಗವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹೀಗೆ ಇಟ್ಟರೆ ತುಂಬಾ ಸಮಸ್ಯೆಗಳು ಎದುರಾಗುತ್ತವೆ. ಯಾವಾಗಲೂ ಶಿವಲಿಂಗವನ್ನು ಮಣೆಯ ಮೇಲೆಯೇ ಇಡಬೇಕು.

 ದೀಪ.

 

ದೇವರ ಮುಂದೆ ನಾವು ಹಚ್ಚುವ ದೀಪಗಳನ್ನು  ಯಾವುದೇ ಪರಿಸ್ಥಿತಿಯಲ್ಲೂ ನೆಲದ ಮೇಲೆ ಇಡಬಾರದು.  ದೀಪಗಳನ್ನು ಯಾವಾಗಲೂ ಸ್ವಚ್ಛವಾದ ವಸ್ತ್ರದಲ್ಲಿ ಇಡಬೇಕು. ಒಂದು ವೇಳೆ ನೆಲದ ಮೇಲೆ ದೀಪ ಇಟ್ಟರೆ ಅದು ದೇವರನ್ನು ಅವಮಾನ ಮಾಡಿದಂತೆ ಆಗುತ್ತದೆ.

ಜನಿವಾರ.

 

 

ತುಂಬಾ ಹಿಂದೂಗಳಲ್ಲಿ ಜನಿವಾರ ಧರಿಸುವ ಆಚಾರವಿದೆ. ಆದರೆ ಜನಿವಾರವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ನೆಲದ ಮೇಲೆ ಮಾತ್ರ ಇಡಬಾರದು. ತಂದೆ ತಾಯಿ ಗುರುಗಳ  ಪ್ರತಿರೂಪವಾದ ಈ ಜನಿವಾರವನ್ನು ನೆಲದ ಮೇಲೆ ಇಟ್ಟರೆ ಅವರನ್ನು ಅವಮಾನಿಸಿದಂತೆ ಆಗುತ್ತದೆ.

 ಶಂಖ.

 

 

ಶಂಕುವಿನಲ್ಲಿ ಸಾಕ್ಷಾತ್  ಮಹಾಲಕ್ಷ್ಮಿ ದೇವಿ ಮತ್ತು ಮಹಾವಿಷ್ಣು ದೇವನು ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶಂಖವನ್ನು ನೆಲದ ಮೇಲೆ ಇಟ್ಟರೆ ಆರ್ಥಿಕ ಸಮಸ್ಯೆಗಳು ಇದರಿಂದಾಗಿಯೇ  ಎದುರಾಗುತ್ತವೆ.

ಬಂಗಾರ.

 

 

ಬಂಗಾರವನ್ನು ಸಾಕ್ಷಾತ್  ಶ್ರೀ ಮಹಾಲಕ್ಷ್ಮಿ ದೇವಿಯ ಸ್ವರೂಪವಾಗಿ   ಭಾವಿಸುತ್ತೇವೆ. ಅಂತಹ ಬಂಗಾರವನ್ನು ನೆಲದ ಮೇಲೆ ಇಟ್ಟರೆ ಮಹಾಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.ಆದ್ದರಿಂದ  ಧನನಷ್ಟ’ ಆರ್ಥಿಕ ಸಮಸ್ಯೆಗಳು ಸಹ ಬರುತ್ತವೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top