ದೇವರು

ದೇವಸ್ತಾನದ ಹತ್ತಿರ ಮನೆಗಳು  ಯಾಕೆ ಇರಬಾರದು ? ಒಂದು ವೇಳೆ ಹಾಗೆ ಇದ್ದರೆ ಯಾವ ನಿಯಮಗಳನ್ನು ಅನುಸರಿಸಬೇಕು ಧಾರ್ಮಿಕ ಶಾಸ್ತ್ರಗಳು ಇದರ ಬಗ್ಗೆ ಏನು ಹೇಳುತ್ತವೆ ?  

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದೇವಸ್ತಾನದ ಹತ್ತಿರ ಮನೆಗಳು  ಯಾಕೆ ಇರಬಾರದು ? .ಒಂದು ವೇಳೆ ಹಾಗೆ ಇದ್ದರೆ ಯಾವ ಯಾವ ನಿಯಮಗಳನ್ನು ಅನುಸರಿಸಬೇಕು ?  ಎಂದು ತಿಳಿದುಕೊಳ್ಳಿ.

ದೇವಸ್ಥಾನ ಒಂದು ಪವಿತ್ರವಾದ ಧಾರ್ಮಿಕ ಸ್ಥಳ ಅಂತಹ ಸ್ಥಳದ ಪಕ್ಕದಲ್ಲಿ ಮನೆಗಳು ಇರಬಾರದು ಯಾರು ವಾಸ ಮಾಡಬಾರದು ಎಂದು ನಮ್ಮ ಪೂರ್ವಿಕರು ಹಿರಿಯರು  ಹೇಳುತ್ತಾರೆ ,ಯಾಕೆ ? ಎಂದು ಬನ್ನಿ ತಿಳಿಯೋಣ.

 

 

 

ದೇವಾಲಯದ ಗೋಪುರದ ನೆರಳು ಮನೆಯ ಮೇಲೆ ಬೀಳದಂತೆ ಮನೆಯನ್ನು ನಿರ್ಮಿಸಿಕೊಳ್ಳಬೇಕು.ದೇವಾಲಯ ಅತ್ಯಂತ ಶಕ್ತಿಯುತವಾದದ್ದು.ಆ ಶಕ್ತಿ ದೇವಸ್ಥಾನದ ಸುತ್ತಮುತ್ತಲಿರುವ ಪರಿಸರವನ್ನು ಪ್ರಭಾವಕ್ಕೆ ಒಳಪಡಿಸುತ್ತದೆ. ಅದು ಮನೆಯಲ್ಲಿರುವ ಶಾಂತಿಯನ್ನು ಹೋಗಲಾಡಿಸುತ್ತೇವೆ. ಆದ್ದರಿಂದಲೇ ಪುರಾತನ ದೇವಸ್ಥಾನದಲ್ಲಿನ ಸುತ್ತ ಮುತ್ತ ಒಂದಕ್ಕಿಂತ ಹೆಚ್ಚು ಕಾಂಪೌಂಡ್ ಗೋಡೆಗಳನ್ನು  ನಿರ್ಮಿಸಲಾಗುತ್ತಿತ್ತು.ಒಂದು ವೇಳೆ ದೇವಾಲಯದ ಸುತ್ತಮುತ್ತ ಮನೆಯನ್ನು ನಿರ್ಮಿಸಿಕೊಂಡರೆ ಯಾವ ಪರಿಣಾಮಗಳು ಬೀರುತ್ತವೆ ಎಂದು ಇಂದು ನಾವು ತಿಳಿದುಕೊಳ್ಳೋಣ.

 

 

ಪ್ರಪಂಚ ಎಷ್ಟೋ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ.ಆದರೆ ಮನುಷ್ಯರಿಗೆ ಪ್ರಶಾಂತತೆ  ಮಾತ್ರ ಇಲ್ಲದಂತೆ ಆಗಿದೆ ಆದ್ದರಿಂದ ಮನಸ್ಸಿನ ಪ್ರಶಾಂತತೆ ಗೋಸ್ಕರ ಮನುಷ್ಯರು ದೇವಸ್ಥಾನಕ್ಕೆ ಹೋಗುತ್ತಾರೆ.ಅದಕ್ಕಾಗಿಯೇ ಕೆಲವು ಮಂದಿ ದೇವಸ್ಥಾನದ ಸಮೀಪದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳುತ್ತಾರೆ.ಆದರೆ ಕೆಲವು ಪ್ರಾಚೀನ ಮತ್ತು ಪುರಾತನ ಗ್ರಂಥಗಳ ಪ್ರಕಾರ ದೇವಸ್ಥಾನಕ್ಕೆ ತುಂಬಾ ಹತ್ತಿರವಾಗಿ  ಮನೆಯನ್ನು ನಿರ್ಮಿಸಿದರೆ ಕೆಟ್ಟ ಪರಿಣಾಮಗಳನ್ನು ಕಾಣಬೇಕಾಗುತ್ತದೆ.

ಪುರಾಣ ಗ್ರಂಥಗಳ ಪ್ರಕಾರ  ದೇವಸ್ಥಾನದಲ್ಲಿರುವ ದ್ವಜ ಸ್ಥಂಭದ ನೆರಳು ಮನೆಯ ಮೇಲೆ ಬೀಳಬಾರದು ಎನ್ನುವ   ಸೂತ್ರ ಇದೆ.ವಾಸ್ತು ಶಾಸ್ತ್ರದಲ್ಲಿ ಇದರ ಬಗ್ಗೆ ಹೆಚ್ಚಿನ ವಿವರಗಳು ಇವೆ.

 

 

ಮಹಾಶಿವ,ಗ್ರಾಮ ದೇವತೆ,ಹೆಣ್ಣು ದೇವತೆಗಳ ದೇವಸ್ಥಾನದ ಎದುರುಗಡೆ ಮನೆಯನ್ನು ನಿರ್ಮಿಸಬಾರಸು .ಹಾಗೇ  ಇಂತಹ ಪರಿಸ್ಥಿತಿಯಲ್ಲಿ ಮನೆಯನ್ನು ಕಟ್ಟಬೇಕೆಂದರೆ  ಕನಿಷ್ಠ ಪಕ್ಷ 100 ಅಡಿ ದೂರವಾದರೂ ಇರುವಂತೆ ನೋಡಿಕೊಂಡು ಮನೆಯನ್ನು ಕಟ್ಟಬಹುದು.

ಎಷ್ಟೋ ದೇವಸ್ಥಾನದ ಹಿಂದೆ ಮನೆಯನ್ನು ಕಟ್ಟಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.ಹಾಗೆ ದೇವಸ್ಥಾನದ ಹಿಂದೆ ಮನೆಯನ್ನು ನಿರ್ಮಿಸಲೇಬೇಕು ಬೇರೆ ದಾರಿಯೇ ಇಲ್ಲ ಎಂದಾದರೆ ಕನಿಷ್ಠ ಪಕ್ಷ 20 ಅಡಿ ದೂರವಾದರೂ ಇರುವಂತೆ ನೋಡಿಕೊಂಡು ಮನೆಯನ್ನು ಕಟ್ಟಬಹುದು.

 

 

ಹೆಣ್ಣು ದೇವತೆಗಳು ದೇವಸ್ಥಾನ,ಶಕ್ತಿ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮನೆಯನ್ನು ನಿರ್ಮಿಸಬಾರದು. ಇಂತಹ ಪರಿಸ್ಥಿತಿಯಲ್ಲಿ ಮನೆಯನ್ನು ಅಲ್ಲಿಯೇ ಕಟ್ಟಲೇಬೇಕು ಬೇರೆ ಸ್ಥಳ ಇಲ್ಲ ಎಂದರೆ ಕನಿಷ್ಠ ಪಕ್ಷ 120 ಅಡಿ ದೂರವಾದರೂ ದೂರ ಇರುವಂತೆ ನೋಡಿ ಮನೆಯನ್ನು ನಿರ್ಮಿಸಿಕೊಳ್ಳಿ.

ಈಗಾಗಲೇ ಒಂದು ವೇಳೆ ತಿಳಿಯದೇ ಮನೆಯನ್ನು ನಿರ್ಮಿಸಿಕೊಂಡಿದ್ದೇವೆ ಏನು ಮಾಡಲು ಆಗುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ನೀವಿದ್ದರೆ ಮನೆಯ  ಮುಂದೆ ಹೆಚ್ಚಿನ  ಸಂಖ್ಯೆಯಲ್ಲಿ ಗಿಡ ಮರಗಳನ್ನು ಬೆಳೆಸಿದರೆ ಅದರ ನಕಾರಾತ್ಮಕ  ಪ್ರಭಾವ ಸ್ವಲ್ಪವಾದರೂ ಕಡಿಮೆ ಆಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top