ತಿಂಡಿ ತೀರ್ಥ

ಪನ್ನೀರ್  ಪ್ರೀಯರಿಗೆ  ರುಚಿ ರಿಚಿಯಾದ ಪನ್ನೀರ್ ಗ್ರೇವಿ  ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪನ್ನೀರ್  ಪ್ರೀಯರಿಗೆ  ರುಚಿ ರಿಚಿಯಾದ ಪನ್ನೀರ್ ಗ್ರೇವಿ  ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು

*ಪನ್ನೀರ್ 100 ಗ್ರಾಂ, ಮೊಸರು ಕಾಲು ಕಪ್, ಈರುಳ್ಳಿ 1, ಟೊಮೆಟೊ 2, ಹಸಿ ಮೆಣಸಿನಕಾಯಿ 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ,  ಅರಿಶಿಣ ಪುಡಿ ಅರ್ಧ ಚಮಚ, ಕೊತ್ತಂಬರಿ ಪುಡಿ ಅರ್ಧ ಚಮಚ, ಕರಿ ಮೆಣಸಿನ ಪುಡಿ ಅರ್ಧ ಚಮಚ, ಗರಂ ಮಸಾಲ ಅರ್ಧ ಚಮಚ, ಖಾರದ ಪುಡಿ ಅರ್ಧ ಚಮಚ, ಕರಿ ಬೇವಿನ ಎಲೆ, ರುಚಿಗೆ ತಕ್ಕ ಉಪ್ಪು, ಎಣ್ಣೆ 2 ಚಮಚ, ನೀರು 1 ಕಪ್, ಮಣ್ಣಿನ ಮಡಕೆ, ಸ್ವಲ್ಪ ಕೊತ್ತಂಬರಿ ಸೊಪ್ಪು,

Image result for paneer pasanda

ತಯಾರಿಸುವ ವಿಧಾನ:

* ಮಣ್ಣಿನ ಮಡಿಕೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ 2-3 ನಿಮಿಷ ಫ್ರೈ ಮಾಡಿ. ನಂತರ ಪನ್ನಿರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.

* ಮಡಕೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಅದಕ್ಕೆ ಕರಿಬೇವಿನ ಎಲೆ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಹಸಿ ಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ ಸೇರಿಸಿ.

* ನಂತರ ಚೆನ್ನಾಗಿ ಕದಡಿದ ಮೊಸರು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ಸ್ವಲ್ಪ ನೀರು ಹಾಕಿ ಗ್ರೇವಿಯನ್ನು ಕುದಿಸಿ.

* ಈಗ ಫ್ರೈ ಮಾಡಿದ ಪನ್ನೀರ್ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಗ್ರೇವಿ ರೆಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top