fbpx
ಸಮಾಚಾರ

ಓಬವ್ವ,ಚನ್ನಮ್ಮ ವಿರುದ್ಧ ಕೀಳು ಪೋಸ್ಟ್‌ ಮಾಡಿ ತಲೆಮರೆಸಿಕೊಂಡ postcardkannada.com ಸಂಪಾದಕ.

ಓಬವ್ವ,ಚನ್ನಮ್ಮ ವಿರುದ್ಧ ಕೀಳು ಪೋಸ್ಟ್‌ ಮಾಡಿ ತಲೆಮರೆಸಿಕೊಂಡ postcardkannada.com ಸಂಪಾದಕ.

 

 

ದೇಶಾದ್ಯಂತ ಭಾರಿ ವಿವಾದವನ್ನು ಹುಟ್ಟಿಹಾಕಿರುವ ‘ಪದ್ಮಾವತಿ’ ಚಿತ್ರವನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ಬೆಂಬಲಿಗ ಫೇಸ್ಬುಕ್ ಪುಟಗಳು ಮಹಾ ಎಡವಟ್ಟು ಮಾಡಿಕೊಂಡಿವೆ . ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಬಿಜೆಪಿ ಪಕ್ಷದ ಬೆಂಬಲಿಗರ ಫೇಸ್ಬುಕ್ ಪೇಜ್’ಗಳಲ್ಲಿ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಕೀಳು ಮಟ್ಟದಲ್ಲಿ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆ..

 

 

ಪದ್ಮಾವತಿ ಚಿತ್ರವನ್ನು ಕನ್ನಡ ಚಿತ್ರರಂಗ ಬೆಂಬಲಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಈ ನಡೆಯನ್ನು ವಿರೋಧಿಸಿ postcardkannada.com ಅಂತರ್ಜಾಲ ತಾಣದವರು ತಮ್ಮ ವೆಬ್’ಸೈಟ್ ನಲ್ಲಿ ಪ್ರಕಟಿಸಿಕೊಂಡಿದ್ದ ಪೋಸ್ಟ್ ಅನ್ನು ಮೈಸೂರು ಹಾಗೂ ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಬೆಂಬಲಿಗರು ತಮ್ಮ ಫೇಸ್ ಬುಕ್ ಪೇಜ್ ಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಕನ್ನಡಿಗರ ಹೆಮ್ಮೆಯ ವೀರವನಿತೆರನ್ನು ತೀರಾ ಕೆಳಮಟ್ಟದಲ್ಲಿ ಅವಹೇಳನ ಮಾಡಿದ್ದಾರೆ. ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ , ಡಮರುಗ’ ಎಂಬ ಫೇಸ್’ಬುಕ್ ಪೇಜ್ ಗಳಲ್ಲಿ ಪೋಸ್ಟ್ ಹಾಕಲಾಗಿದ್ದು “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಭಂದವನ್ನು ಹೊಂದಿದ್ದಳು ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು,” ಎಂದು ಹೇಳಿ ಬಳಿಕ, ಕೋಪ ಬಂತಲ್ವಾ? ಎಂದು‌ ಪೋಸ್ಟ್ ಮಾಡಿರುವ ಪ್ರತಾಪ್ ಬೆಂಬಲಿಗರು, ಹಾಗಿದ್ರೆ ಇಂಥ ಕಥೆಗಳ ವಿರುದ್ದ ಕನ್ನಡ ಚಿತ್ರರಂಗಕ್ಕೆ ಕೋಪ ಬರ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.

 

 

ಉದಾಹರಣೆ ಕೊಡೋ ಭರದಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದು ನಾಡಿನ ವೀರ ಮಹಿಳೆಯರನ್ನ ಅವಮಾನಿಸಿದ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಫೇಸ್ಬುಕ್ ಪೇಜ್’ಗಳನ್ನು ಈ ಕೂಡಲೇ ಡಿಲೀಟ್ ಮಾಡಲೇಬೇಕು ಈ ರೀತಿ ಪೋಸ್ಟ್ ಮಾಡಿದ postcardkannada.comನ ಸಂಪಾದಕ, ಲೇಖಕ ಇದಕ್ಕೆ ಸಂಭಂದ ಪಟ್ಟ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸುತ್ತಿದ್ದು ವೆಬ್ ಸೈಟ್ ವಿರುದ್ಧ ಪೊಲೀಸ್ ಕಂಪ್ಲೇಟ್ ಕೂಡ ಕೊಡಲಾಗಿದೆ.

 

ಸದಾ ಬಿಜೆಪಿಯ ಸುದ್ದಿಗಳನ್ನೇ ಪ್ರಕಟಿಸುವ ಬಿಜೆಪಿಯ ಕೃಪಾ ಪೋಷಿತ ವೆಬ್ ಸೈಟ್ ಆಗಿರುವ postcardkannada.com ಅಂತರ್ಜಾಲ ತಾಣ ಈ ಕೀಳು ಸುದ್ದಿಯನ್ನು ಪ್ರಕಟಿಸಿದೆ. ನನಗೂ ಇದಕ್ಕೂ ಸಂಭಂದನೇ ಇಲ್ಲ ಅನ್ನೋ ಪ್ರತಾಪ್ ಸಿಂಹ ಅವರೇ ಒಮ್ಮೆ ಆ postcard kannada ವೆಬ್ ಸೈಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಂಕಣವನ್ನು ಬರೆದಿದ್ದರು. ಇದರ ಸಂಪಾದಕನ್ನು ಹುಡುಕಿಕೊಂಡು ಕನ್ನಡ ಪರ ಹೋರಾಟಗಾರರು ಹೋದಾಗ ಆತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ..ತಪ್ಪು ಮಾಡಿ ಈಗ ತಲೆ ಮರೆಸಿಕೊಂಡಿರುವ ಆತನನ್ನು ಪೊಲೀಸರಿಗೆ ಒಪ್ಪಿಸಲು ಕನ್ನಡಪರ ಹೋರಾಟಗಾರರು ತೀವ್ರವಾಗಿ ಹುಡುಕುತ್ತಿದ್ದಾರೆ.

 

ಕೃಪೆ: ವಿಶ್ವವಾಣಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top