fbpx
ಸಮಾಚಾರ

ಕನ್ನಡಿಗರ ಹೆಮ್ಮೆಯ ವೀರವನಿತೆಯರನ್ನು ತೀರಾ ಕೆಳಮಟ್ಟದಲ್ಲಿ ಅವಮಾನ ಮಾಡಿದ ಪ್ರತಾಪ್ ಸಿಂಹ ಬೆಂಬಲಿಗರು.

ಕನ್ನಡಿಗರ ಹೆಮ್ಮೆಯ ವೀರವನಿತೆಯರನ್ನು ತೀರಾ ಕೆಳಮಟ್ಟದಲ್ಲಿ ಅವಮಾನ ಮಾಡಿದ ಪ್ರತಾಪ್ ಸಿಂಹ ಬೆಂಬಲಿಗರು.

 

 

 

ಮೈಸೂರು ಹಾಗೂ ಕೊಡಗು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಬೆಂಬಲಿಗರು ಕನ್ನಡಿಗರ ಹೆಮ್ಮೆಯ ವೀರವನಿತೆರನ್ನು ಅವಹೇಳನ ಮಾಡಿ ತೀರಾ ಕೆಳಮಟ್ಟದಲ್ಲಿ ಅವಮಾನ ಮಾಡಿದ್ದಾರೆ. ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಫೇಸ್ಬುಕ್ ಪೇಜ್’ಗಳಲ್ಲಿ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರಿಗೆ ಭಾರೀ ಅವಮಾನ ಮಾಡುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆ.

 

 

ಪದ್ಮಾವತಿ ಚಿತ್ರವನ್ನು ಕನ್ನಡ ಚಿತ್ರರಂಗ ಬೆಂಬಲಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಈ ನಡೆಯನ್ನು ವಿರೋಧಿಸಿ ಫೇಸ್’ಬುಕ್’ನಲ್ಲಿ ಪೋಸ್ಟ್ ಹಾಕಲಾಗಿದ್ದು “ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಭಂದವನ್ನು ಹೊಂದಿದ್ದಳು ಒನಕೆ ಓಬವ್ವ ಹೈದರಾಲಿಯ ಜೊತೆ ಮಂಚ ಹಂಚಿಕೊಂಡಿದ್ದಳು,” ಎಂದು ಹೇಳಿ ಬಳಿಕ, ಕೋಪ ಬಂತಲ್ವಾ? ಎಂದು‌ ಪೋಸ್ಟ್ ಮಾಡಿರುವ ಪ್ರತಾಪ್ ಬೆಂಬಲಿಗರು, ಹಾಗಿದ್ರೆ ಇಂಥ ಕಥೆಗಳ ವಿರುದ್ದ ಕನ್ನಡ ಚಿತ್ರರಂಗಕ್ಕೆ ಕೋಪ ಬರ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.

 

 

ಉದಾಹರಣ ಕೊಡೋ ಭರದಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದು ನಾಡಿನ ವೀರ ಮಹಿಳೆಯರನ್ನ ಅವಮಾನಿಸಿದ ‘ಐ ಸಪೋರ್ಟ್‌ ಪ್ರತಾಪ್‌ ಸಿಂಹ’ , ‘ಐ ಸಪ್ಪೋರ್ಟ್ ಬಿಜೆಪಿ’, ‘ನರೇಂದ್ರ ಮೋದಿ ಫ್ಯಾನ್ಸ್ ಫ್ರಮ್ ಕರುನಾಡು’,’ಪ್ರತಾಪ್ ಸಿಂಹ ಫಾರ್ ಸಿಎಂ’ ಎಂಬ ಫೇಸ್ಬುಕ್ ಪೇಜ್’ಗಳನ್ನು ಈ ಕೂಡಲೇ ಡಿಲೀಟ್ ಮಾಡಲೇಬೇಕು ಈ ರೀತಿ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top