fbpx
ಮನೋರಂಜನೆ

ಯಾವಾಗ್ಲೂ ನೀಟಾಗಿ ಶೇವ್ ಮಾಡ್ತಿದ್ದ ಅಪ್ಪು ಇದ್ದಕ್ಕಿದ್ದಂತೆ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟು ರಟಾಯ್ತು.

ಯಾವಾಗ್ಲೂ ನೀಟಾಗಿ ಶೇವ್ ಮಾಡ್ತಿದ್ದ ಅಪ್ಪು ಇದ್ದಕ್ಕಿದ್ದಂತೆ ಗಡ್ಡ ಬಿಟ್ಟಿರುವುದರ ಹಿಂದಿನ ಗುಟ್ಟು ರಟಾಯ್ತು.

 

 

ತಮ್ಮ ಚಿತ್ರಗಳಲ್ಲಾಗಲಿ ಅಥವಾ ನಿಜ ಜೀವನದಲ್ಲಾಗಲಿ ಯಾವಾಗಲೂ ನೀಟಾಗಿ ಶೇವ್ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗ ಇದ್ದಕ್ಕಿದ್ದ ಹಾಗಿ ದಾಡಿ ಬೆಳೆಸುತ್ತಿದ್ದಾರೆ ಅಲ್ಲದೆ ಕೊಂಚ ದಪ್ಪ ಕೂಡ ಆಗಿದ್ದಾರೆ. ಈ ಹೊಸ ಲುಕ್‌ನಿಂದಾಗಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಫ್ಯಾಮಿಲಿ ಪವರ್ ಶೋನಲ್ಲೂ ಕೂಡ ಗಡ್ಡ ಮತ್ತು ಚಿಗರು ಮೀಸೆಯಿಂದ ಮಿಂಚುತ್ತಿದ್ದಾರೆ.

 

 

ಕಳೆದ ಹದಿನೈದು ವರ್ಷಗಳಿಂದ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಪ್ಪು ಒಂದೆರೆಡು ಚಿತ್ರಗಳಲ್ಲಿನ ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಗಡ್ಡ ಮೀಸೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಸಡನ್ನಾಗಿ ಪುನೀತ್ ಅವರು ಈ ಗೆಟಪ್ ತಾಳಿರುವುದು ತಮ್ಮ ಸಿನಿಮಾಗಾಗಿ. ಹೌದು ಅಪ್ಪು ಅಂಜನೀಪುತ್ರದ ನಂತರ ಶಶಾಂಕ್ ನಿರ್ದೇಶನದಲ್ಲಿ ಆಕ್ಟ್ ಮಾಡ್ತಿದ್ದಾರೆ ಆ ಸಿನಿಮಾಗಾಗಿ ಗಡ್ಡ ಮೀಸೆ ಜೊತೆ ಸ್ವಲ್ಪ ದಪ್ಪವಾಗಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ವಿಶೇಷ ಅಂದ್ರೆ ಚಿತ್ರದ ಪಾತ್ರಕ್ಕಾಗಿ ಅಪ್ಪು ಸಿಕ್ಸ್ ಪ್ಯಾಕ್ಸ್ ಕೂಡ ಮಾಡ್ತಿದ್ದಾರಂತೆ.

 

 

“ನಮ್ಮ ಚಿತ್ರಕ್ಕಾಗಿ ಪುನೀತ್‌ ತಯಾರಿ ನಡೆಸುತ್ತಿದ್ದಾರೆ. ಅವರು ಮಾಡಲಿರುವ ಪಾತ್ರವು ತುಂಬಾ ವಿಭಿನ್ನವಾಗಿದ್ದು ಈವರೆಗೂ ಕಾಣಿಸಿಕೊಳ್ಳದ ಪಾತ್ರವನ್ನು ಮಾಡುತ್ತಿದ್ದಾರೆ.ಹಾಗಾಗಿ ಅವರ ಪಾತ್ರ ಈ ರೀತಿಯೇ ಇರಬೇಕು ಎಂಬ ಕಲ್ಪನೆಯಿದೆ ಹಾಗೆಯೇ ಅವರು ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಆದರೆ ಆ ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ. ಫಸ್ಟ್‌ಲುಕ್‌ ರಿಲೀಸ್‌ ಮಾಡುವ ತನಕ ಕಾಯಲೇಬೇಕು” ಎಂದು ನಿರ್ದೇಶಕ ಶಶಾಂಕ್ ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top