ಆರೋಗ್ಯ

ಗರ್ಭಿಣಿಯರಿಗೆ ಹುಳಿ ಹುಣಸೆ ಹಣ್ಣು ತಿನ್ನಬೇಕು ಅಂತ ಯಾಕೆ ಅನಿಸುತ್ತದೆ ಗೊತ್ತಾ ? ಹಾಗೆ ಹುಣಸೆ ಹಣ್ಣು ತಿಂದರೆ ಏನು ಲಾಭ ಗೊತ್ತಾ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗರ್ಭಿಣಿ ಹೆಣ್ಣುಮಕ್ಕಳು ಹುಣಸೆ ಹಣ್ಣು ತಿನ್ನುವುದರಿಂದ ಆಗುವ ಲಾಭಗಳು:

 

ಹೆಣ್ಣುಮಕ್ಕಳು ಅವರು ಗರ್ಭಧರಿಸಿದ ಮೇಲೆ ಜಾಸ್ತಿ ಹುಣಸೆ ಹಣ್ಣು ತಿನ್ನಬೇಕು ಅಂತ ಬಯಕೆ ಉಂಟಾಗುತ್ತದೆ.ಆ ಸಮಯದಲ್ಲಿ ಹುಣಸೆ ಹಣ್ಣು ತಿನ್ನುವುದರಿಂದ ಆಗುವ ಉಪಯೋಗ ಮತ್ತು ಲಾಭಗಳನ್ನೂ ಕೇಳಿದ್ರೆ ನೀವು ಆಶ್ಚರ್ಯಪಡ್ತಿರಾ .

 

 

ಗರ್ಭಿಣಿ ಹೆಣ್ಣುಮಕ್ಕಳು ಹುಣಸೆ ಹಣ್ಣು ತಿನ್ನುವುದು ಅವರ ಆರೋಗ್ಯದ ದೃಷ್ಠಿಯಿಂದ ಕೂಡ ತುಂಬಾ ಒಳ್ಳೆಯದು.ಹುಣಸೆ ಹಣ್ಣಿನಲ್ಲಿ ತುಂಬಾ ಔಷದಿಯ ಗುಣಗಳಿವೆ .
ಹೆಣ್ಣುಮಕ್ಕಳು ಗರ್ಭಧರಿಸಿದ ಮೇಲೆ ವಾಕರಿಕೆ ,ಸುಸ್ತು ಮತ್ತು ವಾಂತಿ ಬರುವಂತೆ ಆಗುವುದು ಸರ್ವೇಸಾಮಾನ್ಯ , ಹೊಟ್ಟೆ ತೊಳಸಿ , ವಾಂತಿ ಬಂದ ಹಾಗೆ ಆಗುತ್ತದೆ , ಆಗ ನಾಲಿಗೆ ರುಚಿಕೆಟ್ಟು ಹುಳಿ ತಿನ್ನಬೇಕು ಅನಿಸುತ್ತದೆ

ಈ ಮೇಲಿನ ಸಮಸ್ಯೆಯಿಂದ ಹೊರಬರಲು ಹುಣಸೆ ಹಣ್ಣು ರಾಮಬಾಣವಾಗಿ ಪರಿಣಾಮ ಬೀರುತ್ತದೆ.

 

 

ಮತ್ತು ಗರ್ಭಿಣಿ ಹೆಣ್ಣು ಮಕ್ಕಳಿಗೆ ಮಲಬದ್ದತೆ ಸಮಸ್ಯೆ ಕೂಡ ಸಾಮಾನ್ಯ ಇದಕ್ಕೆ ಕಾರಣ ಬೆಳೆಯುವ ಗರ್ಭಾಶಯದ ಕರುಳುಗಳ ಮೇಲೆ ಒತ್ತಡ ಬೀಳುತ್ತದೆ .
ಹುಣಸೆ ಹಣ್ಣು ತಿನ್ನುವುದರಿಂದ ಮಲಬದ್ದತೆ ಮತ್ತು ಇತರ ಜೀರ್ಣಕ್ರಿಯೆಗೆ ಸಂಭಂದ ಪಟ್ಟ ಸಮಸ್ಯೆ ಯಿಂದ ಹೊರಬರಬಹುದು ಮತ್ತು ಹುಣಸೆಹಣ್ಣಿನಲ್ಲಿರುವ ಪೊಟಾಷಿಯಂ, ಸೋಡಿಯಂ, ಐರನ್ ಮತ್ತು ಇತರೇ ಪೌಷ್ಟಿಕಾಂಶಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯಕಾರಿ.

ವಿಪರೀತ ತಲೆನೋವು ಕಂಡುಬಂದ ಸಂದರ್ಭದಲ್ಲಿ ಹುಣಸೆ ಹಣ್ಣಿನ ರಸವನ್ನು ಹಿಂಡಿ ನೆತ್ತಿಗೆ ಹಾಕಿದರೆ ಕೆಲ ಹೊತ್ತಿನ ಬಳಿಕ ನೋವು ಉಪಶಮನವಾಗುತ್ತದೆ.ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ. ತಿಂದ ವಸ್ತು ಸರಿಯಾಗಿ ಜೀರ್ಣವಾಗದಿದ್ದರೆ ಹುಣಸೆ ಹಣ್ಣಿನ ರಸವನ್ನು ನೀರಿನ ಜೊತೆ ಕಲಸಿ ಕುಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ.

 

ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಆಮ್ಲಜನಕದ ಪೂರೈಕೆಯು ಲಭ್ಯವಾಗುತ್ತದೆ

ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

 

 

ಹುಣಸೆ ಹಣ್ಣು ಎಂಬುದು ಒಂದು ಆಲ್ಫಾ-ಅಮೈಲೇಸ್ ಇನ್‌ಹಿಬಿಟರ್-ಆಗಿದೆ. ಇದು ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಆ ಮೂಲಕ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆತ್ತದೆ.

 

ಹುಣಸೆಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಗರ್ಭಿಣಿಯರ ಆರೋಗ್ಯವನ್ನು ಹೆಚ್ಚಿಸುತ್ತದೆ. ವಿಟಮಿನ್ ‘ಸಿ’ ಅಧಿಕ ಮೊತ್ತದಲ್ಲಿ ಗರ್ಭಿಣಿಯರ ಆರೋಗ್ಯವನ್ನು ಎಲ್ಲಾ ವಿಧದಲ್ಲೂ ಕಾಪಾಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top