ಆರೋಗ್ಯ

ಬಾಣಂತಿ ತಾಯಿಯರು ಎದೆ ಹಾಲು ಜಾಸ್ತಿ ಮಾಡ್ಕೊಳ್ಳೋಕೆ ದೇಹದ ಈ ಭಾಗಗಳನ್ನು ದಿನಾ ಒತ್ತಿಕೊಂಡರೆ ಸಾಕು ಮಗುವಿಗೆ ಬೇಕಾದಷ್ಟು ಹಾಲು ಉಣಿಸಬಹುದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಾಣಂತಿ ತಾಯಿಯರು ಎದೆ ಹಾಲು ಜಾಸ್ತಿ ಮಾಡ್ಕೊಳ್ಳೋಕೆ ದೇಹದ ಈ ಭಾಗಗಳನ್ನು ದಿನಾ ಒತ್ತಿ

 

ತಾಯಿಹಾಲು ಪರಿಶುದ್ಧವಾಗಿರುತ್ತದೆ. ಮಗುವಿಗೆ ಬೇಕಾದಂತೆ ಸಮಶೀತೋಷ್ಣವಾಗಿರುತ್ತದೆ. ಬೇಕೆಂದಾಗ ಸಿಗುತ್ತದೆ. ಹಾಲು ಕುಡಿಸುವಿಕೆ ತಾಯಿ–ಮಗುವಿನ ಮಧುರ ಬಾಂಧವ್ಯ ಹೆಚ್ಚಿಸುತ್ತದೆ. ಮೊಲೆಹಾಲು ಮಗುವಿನ ವಯಸ್ಸಿಗೆ ತಕ್ಕಂತೆ ಒದಗುವುದರಿಂದ ಅದು ಆದರ್ಶವಾದ ಆಹಾರವಾಗಿದೆ. ಈ ಹಾಲು ಎಳೆಯ ಕಂದನಿಗೆ ಸೂಕ್ತ ಆಹಾರವಾಗಿದ್ದು ಅಗತ್ಯವಾದ ಪೌಷ್ಟಿಕತೆಯನ್ನು ಪೂರೈಸುತ್ತದೆ. ಅದರಲ್ಲಿನ ಖನಿಜ ಲವಣಗಳು (ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ) ಶಿಶುವಿನ ಬೆಳವಣಿಗೆಯ ಆವಶ್ಯಕತೆಗಳನ್ನು ಪೂರೈಸಬಲ್ಲವು.

ಲ್ಯಾಕ್ಟಿಕ್ ಆಮ್ಲದ ಸಹಾಯದಿಂದ ಮಗು, ಮೂಳೆಗಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಲವಣಗಳನ್ನು ಹೀರಿಕೊಳ್ಳುತ್ತದೆ.

 

ತಾಯಿ ಹಾಲಿನಲ್ಲಿ ಅಲರ್ಜಿ ನಿರೋಧಕ ಶಕ್ತಿ ಸಹ ಇರುತ್ತದೆ. ಇದು ಹಸುಗೂಸುಗಳ ಗಜಕರ್ಣ ಆಹಾರದ ಅಲರ್ಜಿಗಳ ಹಾವಳಿಯನ್ನು ಹತ್ತಿಕ್ಕುವುದು.
ತಾಯಿ ಹಾಲಿನಲ್ಲಿರುವ ಕೊಬ್ಬಿನಲ್ಲಿ ಲಿನೋಲಿಯಿಕ್ ಮೇದೋಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು, ಸುಲಭವಾಗಿ ಹೀರಲ್ಪಡುತ್ತದೆ; ಅದು ಮೆದುಳಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಎದೆ ಹಾಲಿನೊಳಗೆ ನೀರಿನಲ್ಲಿ ಕರಗುವ ಸಿ ಮತ್ತು ಬಿ ಸಂಕೀರ್ಣ ಜೀವಸತ್ವಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಶೇಷವಾದ ಡಿ ಜೀವಸತ್ವ ಇರುತ್ತದೆ. ಇವು ಮಗುವಿನ ಸಾಮಾನ್ಯ ಬೆಳವಣಿಗೆಗೆ ಸಹಾಯಕಾರಿ.

ಮಗುವು ಜನಿಸಿದ ನಂತರ ಕೆಲವು ಬಾಣಂತಿಯರಿಗೆ ಎದೆಯ ಹಾಲು ಉತ್ಪತ್ತಿ ತುಂಬಾ ಕಡಿಮೆ ಇರುತ್ತದೆ ಅಥವಾ ಇನ್ನೂ ಕೆಲವರಿಗೆ ಉತ್ಪತ್ತಿಯೇ ಆಗುವುದಿಲ್ಲ.ಹೀಗಿರುವಾಗ ಮಗುವಿಗೆ ಹಾಲು ಒದಗಿಸುವುದು ಬಹಳ ಕಷ್ಟವಾಗಿಬಿಡುತ್ತದೆ.ಅಂತವರು ಆಸ್ಪತ್ರೆಗೆ ಹೋಗಿ ಅನೇಕ ಔಷಧಿಗಳನ್ನು ಸೇವಿಸುತ್ತಾರೆ.ಇವೆಲ್ಲಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಎದೆ ಹಾಲನ್ನು ಉತ್ಪತ್ತಿ ಮಾಡಬಹುದಾದಂತಹ ಸುಲಭ ಉಪಾಯಗಳು ಇಲ್ಲಿವೆ ನೋಡಿ ಬಾಣಂತಿಯರು ತಮ್ಮ ದೇಹದ ಈ ಪಾಯಿಂಟ್ ಒತ್ತಿಕೊಂಡರೆ ಎದೆ ಹಾಲು ಹೆಚ್ಚಿಸಿಕೊಳ್ಳಬಹುದು.

 

ಬನ್ನಿ ಇಂತಹ ಪಾಯಿಂಟ್ ಗಳು ಯಾವುವು ಇದರ ವಿಶೇಷತೆಗಳು ಏನು ತಿಳಿದುಕೊಳ್ಳೋಣ

 

CV17 -ಇದು ಎದೆಯ ಮಧ್ಯ ಭಾಗದಲ್ಲಿ ಇರುತ್ತದೆ ಈ ಬಿಂದುವನ್ನು ಒಂದು ನಿಮಿಷ ವೃತ್ತಾಕಾರವಾಗಿ ಒತ್ತಿಕೊಳ್ಳುತ್ತಾ ಇರಬೇಕು .

 

 

ST36 – ಮೊಣ ಕಾಲಿನ ಕೆಳಗೆ ಈ ಬಿಂದು ಇದ್ದು ಈ ಬಿಂದುವನ್ನು 60 ಬಾರಿ ಒಮ್ಮೆಗೆ ಒತ್ತಿಕೊಳ್ಳುತ್ತಾ ಇರಬೇಕು ಹೀಗೆ ಎರಡರಿಂದ ಮೂರು ಬಾರಿ ಮುಂದುವರಿಸಿ .

 

 

SI 1: ಕಿರು ಬೆರಳಿನ ತುದಿಯಲ್ಲಿ ಈ ಬಿಂದು ಇದ್ದು ಪ್ರೊಲ್ಯಾಕ್ಟಿನ್ ಮಟ್ಟವನ್ನು ಸುಧಾರಿಸಲು ಹಾಗು ಹಾಲು ಸರಬರಾಜು ಉತ್ತಮಗೊಳಿಸಿ ಹಾಲುಣಿಸುವಿಕೆಯನ್ನು ಹೆಚ್ಚಿಸುತ್ತದೆ .

GB 21: ಬೆನ್ನುಮೂಳೆಯ ಮತ್ತು ಭುಜದ ನಡುವಿನ ಮಧ್ಯದಲ್ಲಿ, ಭುಜದ ಮೇಲಿನ ಎತ್ತರದ ಭಾಗದಲ್ಲಿ ಈ ಬಿಂದು ಇದ್ದು ಹಾಲು ಸರಬರಾಜು ಉತ್ತೇಜಿಸಲು ಸಹಾಯ ಮಾಡುತ್ತದೆ.
ಕನಿಷ್ಠ ಪಕ್ಷ 15 ಬಾರಿ ದಿನಕ್ಕೆ ಮೂರು ಸರತಿ ಈ ಬಿಂದುವನ್ನು ಒತ್ತಿಕೊಳ್ಳಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top