ದೇವರು

ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಿದರೆ ಅನಾರೋಗ್ಯ ಮತ್ತು ನಕಾರಾತ್ಮಕ ದುಷ್ಟ ಶಕ್ತಿಗಳಿಂದ ದೂರವಿರಬಹುದು .

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಪಠಿಸಿದರೆ ಅನಾರೋಗ್ಯ ಮತ್ತು ದುಷ್ಟ ಶಕ್ತಿಗಳಿಂದ ದೂರವಿರಬಹುದು .

 

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ಭೇದವಿಲ್ಲದೆ ಸ್ತ್ರೀಯರು, ಪುರುಷರು ಎನ್ನದೆ ದೇವರಿಗೆ ಪೂಜೆಯನ್ನು ಮಾಡಬಹುದು. ಆದರೆ ಆಂಜನೇಯ ಸ್ವಾಮಿಗೆ ಮಾತ್ರ ಸ್ತ್ರೀಯರು ಪೂಜೆ ಮಾಡುವಾಗ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಲೇಬೇಕು .

ಮುಖ್ಯವಾಗಿ ಕನ್ಯೆಯಾಗಿರುವ ಸ್ತ್ರೀಯರು ಅಂದರೆ ಮದುವೆಯಾಗದೆ ಇರುವ ಸ್ತ್ರೀಯರು ಮಾತ್ರ ಯಾವುದೇ ಕಾರಣಕ್ಕೂ ಯಾವ ಪರಿಸ್ಥಿತಿಯಲ್ಲಿಯೂ ಸಹ ಆಂಜನೇಯ ಸ್ವಾಮಿಯ ವಿಗ್ರಹವನ್ನು ಮುಟ್ಟಬಾರದು ಎಂದು ಪುರಾಣಗಳು ಹೇಳುತ್ತವೆ .

ಸ್ತ್ರೀಯರು ಆಂಜನೇಯ ಸ್ವಾಮಿಗೆ ಷೋಡಶೋಪಚಾರ ಪೂಜೆಯನ್ನು ಸ್ವಯಂ ತಾವೇ ಯಾವುದೇ ಕಾರಣಕ್ಕೂ ಮಾಡಬಾರದು.

ಯಾವಾಗಲೂ ರಾಮ-ಸೀತಾ ಸಮೇತರಾಗಿರುವ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಬೇಕು .

 

 

ರಾಮ ಮತ್ತು ಹನುಮನ ಸ್ತೋತ್ರಗಳು ಕೀರ್ತನೆ ,ಭಜನೆಯನ್ನು, ಮಂತ್ರಗಳನ್ನು ಪಠಿಸಬಹುದು.

ಶನೈಶ್ಚರನ ಪ್ರಭಾವದಿಂದ ಬಳಲುತ್ತಿರುವವರು ಪ್ರತಿ ಶನಿವಾರ ಮತ್ತು ಮಂಗಳವಾರ ದಿನಗಳಲ್ಲಿ ವಿಶೇಷವಾಗಿ ಹನುಮಾನ್ ಚಾಲೀಸವನ್ನು ಪಠಿಸಿದರೆ ಸಕಲ ದೋಷಗಳಿಂದ ಮುಕ್ತಿ ಪಡೆಯಬಹುದು ಹಾಗು ಎಲ್ಲ ಕಷ್ಟಗಳಿಂದಲೂ ಹನುಮಂತನು ನಿವಾರಣೆಯನ್ನು ಮಾಡುತ್ತಾನೆ .

ಹನುಮಾನ್ ಚಾಲೀಸಾ ಮತ್ತು ಹನುಮಾನ್ ದಂಡಕವನ್ನು ಪ್ರತಿನಿತ್ಯ ಪಠಿಸುವುದರಿಂದ ತುಂಬಾ ಯಶಸ್ಸನ್ನು ಜೀವನದಲ್ಲಿ ನೀವು ಕಾಣಬಹುದು. ಆದರೆ ಪಠಿಸಲು ಸಾಧ್ಯವಾಗದೇ ಇರುವವರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಈ ಮಂತ್ರವನ್ನು ಕೇಳಿಸಿಕೊಂಡರೆ ಅನಾರೋಗ್ಯದಿಂದ ಚೇತರಿಸಿಕೊಳ್ಳಬಹುದು.

 

 

ಹನುಮಾನ್ ಚಾಲೀಸದ ಈ ಸಾಲುಗಳನ್ನು ಪಠಿಸಿದರೆ ನೀವು ಅನಾರೋಗ್ಯದಿಂದ  ಚೇತರಿಸಿಕೊಂಡು ನೀವು ಆರೋಗ್ಯದಿಂದ ಇರುವಿರಿ.

“ನಾಸೈ ರೋಗ ಹರೈ ಸಬ್  ಪೀರ ಜಪತ ನಿರಂತರ ಹನುಮತ್  ಬಲ್ ವೀರ”

ಈ ಮಂತ್ರವನ್ನು ಪದೇ ಪದೇ ಜಪಿಸುವುದರಿಂದ  ಎಲ್ಲಾ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಹಾಗೆಯೇ ನೀವು ಭಯದಿಂದ ಇರುವಾಗ ಕೆಟ್ಟ ಕನಸುಗಳು ಅಧಿಕವಾಗಿ  ನಿಮಗೆ ನಿದ್ರೆಯಲ್ಲಿ ಬರುತ್ತಾ ಇದ್ದರೆ ಈ ಸಾಲುಗಳನ್ನು ಪಠಿಸಬೇಕು.

 

 

“ಭೂತ ಪಿಶಾಚ ನಿಕಟ ನಹಿ ಆವೈ ಮಹಾವೀರ ಜಬ್ ನಾಮ   ಸುನಾವೈ”

ಹನುಮಾನ್ ಚಾಲೀಸಾದ ಈ ಸಾಲುಗಳನ್ನು ಅಧಿಕವಾಗಿ ಜಪಿಸುವುದರಿಂದ ಎಂತಹ ದುಷ್ಟಶಕ್ತಿಗಳು ಸಹ  ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಎಲ್ಲ ರೀತಿಯಲ್ಲೂ ತುಂಬ ಒಳ್ಳೆಯದಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top