fbpx
ದೇವರು

ಡಿಸೆಂಬರ್ 1 ತಾರೀಖು ಹನುಮ ಜಯಂತಿ ಈ ದಿನ ಬಹಳಷ್ಟು ವಿಶೇಷತೆಗಳಿಂದ ಇದ್ದು ಈ ಎರಡು ನಕ್ಷತ್ರಗಳಿಗೆ ಶುಭವಾಗಲಿದೆ ಹಾಗೆ ಈ ಮಂತ್ರಗಳನ್ನು ಪಠಿಸಿದರೆ ಸರ್ವ ದರಿದ್ರಗಳು ನಿವಾರಣೆಯಾಗುತ್ತದೆ

ಡಿಸೆಂಬರ್ ಒಂದನೇ ತಾರೀಖು ಹನುಮ ಜಯಂತಿ.

 

ಡಿಸೆಂಬರ್ ಒಂದನೇ ತಾರೀಖಿನಂದು ಶುಕ್ಲ ಪಕ್ಷದ ಮಾರ್ಗಶಿರ ಮಾಸದ ದ್ವಾದಶಿ ಮತ್ತು ತ್ರಯೋದಶಿಯ ದಿನ ಶುಕ್ರವಾರ ಅಶ್ವಿನಿ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಮತ್ತು ಭರಣಿ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಇರುವ ಈ ಶುಭ ಶುಕ್ರವಾರದ ದಿನವೇ ಹನುಮಂತನ ಜಯಂತಿಯೂ ಬಂದಿರುವುದರಿಂದ ಈ ದಿನ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ.

 

 

ಹನುಮಂತನನ್ನು ಮಹಾವೀರ, ಶಿವನ ಹನ್ನೊಂದನೇಯ  ರುದ್ರ ಅವತಾರವೆಂದು ಪುರಾಣಗಳು ಹೇಳುತ್ತವೆ. ಹನುಮಂತನನ್ನು ಬ್ರಹ್ಮಚಾರಿ ಎಂದು ಸಹ ಕರೆಯುತ್ತಾರೆ. ರಾಮನ ಭಕ್ತನಾದ ಕಾರಣ ಅವನಲ್ಲಿ ವಿಷ್ಣುವಿನ ತತ್ವವಿದೆ.

ಆಂಜನೇಯನನ್ನು ಜನನ ಕೆಲವು ಪಂಚಾಂಗಗಳ  ಪ್ರಕಾರ ಆಶ್ವಯುಜ ಕೃಷ್ಣ ಪಕ್ಷದ  ಚತುರ್ದಶಿಯ ದಿನ ಹನುಮಂತನ ಜನ್ಮ ತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯ ದಿನ ಹನುಮಂತನ ಜನ್ಮ ತಿಥಿಯಾಗಿದೆ ಎಂದು ಹೇಳುತ್ತಾರೆ.

ಆದರೆ ಕರ್ನಾಟಕದಲ್ಲಿ ಚೈತ್ರ ಹುಣ್ಣಿಮೆಯಂದು ಹನುಮಂತನ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನ ಭಕ್ತ ಲೋಕವು ರಾಮ ನಾಮ ಸ್ಮರಣೆಯಿಂದ ತುಂಬಿರುತ್ತದೆ .ಹನುಮಂತ ದೇವನ ಜಯಂತಿಯ೦ದು  ಹನುಮಂತನ ತತ್ತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ.

ಈ ದಿನ “ ಶ್ರೀ ಹನುಮತೇ ನಮಃ”  ಎಂದು ನಾಮಜಪ ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಕ್ತಿ ಮತ್ತು  ಶ್ರದ್ಧೆಯಿಂದ ಮಾಡುವುದರಿಂದ ಹನುಮಂತ ತತ್ತ್ವದ ಲಾಭವೂ ಹೆಚ್ಚು ದೊರೆಯಲು ಸಹಾಯವಾಗುತ್ತದೆ.

 

 

ಶನಿಯ ಪ್ರಭಾವ ಹೆಚ್ಚಾಗಿ ಇರುವವರು ಹನುಮಂತನ ಜಯಂತಿಯ ದಿನದಂದು ಆಂಜನೇಯನನ್ನು ಪೂಜಿಸಲು ತುಂಬಾ ಒಳ್ಳೆಯ ದಿನವಾಗಿದೆ. ಹನುಮಂತ ಜಯಂತಿಯಂದು ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರೆ ಒಳ್ಳೆಯದು. ಹಾಗೂ ಶನಿ ಗ್ರಹದ  ದೋಷದಿಂದ ಬಳಲುತ್ತಿರುವವರು ಎಳ್ಳೆಣ್ಣೆಯ ದೀಪವನ್ನು ಆಂಜನೇಯನ ದೇವಸ್ಥಾನದಲ್ಲಿ ಹಚ್ಚಿದರೆ ಅವರ ಕಷ್ಟಗಳು ಮತ್ತು ದೋಷಗಳು ದೂರವಾಗುತ್ತದೆ.

ಹನುಮಂತನಿಗೆ ತುಂಬಾ ಇಷ್ಟವಾದ ಗುಲಾಬಿ, ತುಳಸಿ ಹಾರ ಮತ್ತು ವೀಳ್ಯದೆಲೆಯ ಹಾರವನ್ನು ಹನುಮಂತನಿಗೆ ಸಮರ್ಪಿಸಿದರೆ ಕಷ್ಟಗಳು ದೂರವಾಗುತ್ತವೆ ಎಂದು ಪುರಾಣಗಳು ಹೇಳುತ್ತವೆ.

ದುಷ್ಟ ಶಕ್ತಿಗಳನ್ನು ನಾಶ ಮಾಡುವ ಸಾಮರ್ಥ್ಯ ಹನುಮಂತ ದೇವರಿಗೆ ಇದೆ. ಆದ್ದರಿಂದ ಈ ದಿನ ಪೂಜೆ ಮಾಡಿ ಹನುಮಂತನ ಅನುಗ್ರಹವನ್ನು ಪಡೆಯಬಹುದು.

ಈ ದಿನ ಸುಂದರ ಕಾಂಡ, ಹನುಮಾನ್ ದಂಡಕ ,ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಹನುಮಂತನ ದೇವರ ಅನುಗ್ರಹಕ್ಕೆ ಮತ್ತು ಆಶೀರ್ವಾದಕ್ಕೆ ಪಾತ್ರರಾಗಬಹುದು. ಸಮಯವಿಲ್ಲದೆ ಇರುವವರು ಈ ದಿನ ಶ್ರೀರಾಮ ನಾಮ ಜಪವನ್ನು ಮಾಡಿದರೂ ಸಹ ಒಳ್ಳೆಯದು.

 

 

ಈ ದಿನ ದೇವಸ್ಥಾನದಲ್ಲಿ ಸಿಂಧೂರ, ಲಾಡು ಬೂ೦ದಿಯನ್ನು ದೇವರಿಗೆ ಸಮರ್ಪಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ.

ಈ ದಿನ ಈ ಮಂತ್ರಗಳನ್ನು ಪಠಿಸಿದರೆ ಒಳ್ಳೆಯದು.

ಶ್ರೀ ಆಂಜನೇಯ ಗಾಯತ್ರಿ ಮಂತ್ರ

“ ಓಂ ಆಂಜನೇಯ ವಿದ್ಮಹೇ ವಾಯುಪುತ್ರಾಯ್ ಧೀಮಹಿ ತನ್ನೋ ಹನುಮಾನ್ ಪ್ರಚೋದಯಾತ್”

ಇಪ್ಪತ್ತೊಂದು ಬಾರಿ

“ಓಂ ಶ್ರೀ ಹನುಮತೆ ನಮಃ”

ಎಂದು ಜಪಿಸಬೇಕು.

 

“ ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮಾದಮ್  ವರಿಷ್ಠ0 ವಾತಾತ್ಮಜಂ ವಾನರ ಯುದ್ಧ ಮುಖ್ಯಂ ಶ್ರೀ ರಾಮ ದೂತಮ್ ಶರಣಂ ಪ್ರಪತ್ಯೆ”

ಹನುಮಂತನು ಶ್ರೀರಾಮನ ಭಕ್ತನಾಗಿರುವುದರಿಂದ ಈ ಮಂತ್ರವನ್ನು ನೀವು ಪಠಿಸಬೇಕು .

 “ಶ್ರೀ ರಾಮ ರಾಮ ರಾಮೇತಿ ರಮೆ ರಮೆ ಮನೋರಮೆ ಸಹಸ್ರ ನಾಮ ತಾತಾತ್ಲುಯಂ ರಾಮನಾಮ ವರೋನಮೆ”

ಎಲ್ಲರೂ ಹನುಮಂತನನ್ನು ಭಕ್ತಿ ಭಾವದಿಂದ, ಶ್ರದ್ಧೆಯಿಂದ ಪೂಜಿಸಿ ಹನುಮಂತನ ಕೃಪೆಗೆ ಪಾತ್ರರಾಗಿ.

ಶ್ರೀ ರಾಮ ಜಯ ರಾಮ ಜಯ ಜಯ ರಾಮ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top