ಆರೋಗ್ಯ

ಸುವರ್ಣ ಗಡ್ಡೆ ಇದರ ವಾಸನೆ ಅಷ್ಟು ಚೆನ್ನಾಗಿಲ್ಲ ಅಂತ ಮೂಗು ಮುರಿಯೋ ಬದಲು ಇದರ ಬೆಟ್ಟದಷ್ಟು ಉಪಯೋಗ ತಿಳ್ಕೊಳ್ಳಿ ಆಮೇಲೆ ನೀವೇ ಬಳಸೋಕೆ ಶುರು ಮಾಡ್ತೀರಾ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 

ಸುವರ್ಣ ಗಡ್ಡೆ

 

ಸುಣ್ಣದ ವಾಸನೆ ಎಂದು ಅಷ್ಟೊಂದು ಜನರಿಗೆ ಇಷ್ಟವಾಗದ ಈ ಗಡ್ಡೆ ಹೆಸರೇ ಹೇಳಿದಂತೆ ಚಿನ್ನದ ಗಡ್ಡೆಯೇ ಸರಿ , ದೊಡ್ಡ ಆಕಾರದ ಈ ಗಡ್ಡೆ ಆರೋಗ್ಯದ ವಿಷ್ಯದಲ್ಲಿ ಅದ್ಬುತವನ್ನೇ ಮಾಡುತ್ತೆ ಅಂದರೆ ನಂಬಲೇ ಬೇಕು ಯಾಕೆ ಅಂತೀರಾ ಮುಂದೆ ಓದಿ ..

 

 

ಇನ್ನೊಂದು ವಿಷಯವನ್ನು ಚೆನ್ನಾಗಿ ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಈ ಗಡ್ಡೆ ಬಳಸುವಾಗ ಚೆನ್ನಾಗಿ ಕತ್ತರಿಸಿ ನೀರಿನಲ್ಲಿ ಬೇಯಿಸಿ ಆ ನೀರನ್ನು ಚೆಲ್ಲಿದ ಮೇಲೆ ಬಳಸುವುದು ಉತ್ತಮ ಹಾಗೆಯೇ ನೀರು ಚೆಲ್ಲಿದ ಮೇಲೆ ಮತ್ತೆ ಸುಣ್ಣದ ವಾಸನೆ ಉಳಿದಿದ್ದರೆ ಆ ನೀರಿನ್ನು ಚೆಲ್ಲಿ ಬಿಡಿ .

ಹಾಗೆಯೇ ಇನ್ನೊಂದು ವಿಷ್ಯ ಯಾವುದಾದರೂ ಚರ್ಮ ವ್ಯಾಧಿಯಿಂದ ಬಳಲುತ್ತಿದ್ದರೆ ಈ ಗಡ್ಡೆ ಉಪಯೋಗಿಸುವುದು ನಿಷಿದ್ಧ.

 

ಮೂಲವ್ಯಾಧಿ ಅಥವಾ ಪೈಲ್ಸ್

 

ಈ ಸಮಸ್ಯೆಯಿಂದ ಬಳಲುವವರು ಪಲ್ಯ ಅಥವಾ ಇತರೆ ಆಹಾರದ ರೂಪದಲ್ಲಿ ಸೇವಿಸುತ್ತಾ ಬರಬೇಕು. ತಿಂಗಳು ಪೂರಾ ಮಜ್ಜಿಗೆ ಹಾಗೂ ಗಡ್ಡೆ ಬಳಸಿದರೆ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

 

ಕ್ಯಾನ್ಸರ್​ ತಡೆಯುತ್ತದೆ 

 

 

ಸುವರ್ಣ ಗೆಡ್ಡೆಯಲ್ಲಿ ವಿಟಮಿನ್ ಬಿ-6 ಹೊಂದಿರುವ ಡೈಸೋಜೆನಿಕ್ ಎನ್ನುವ ಆಮ್ಲ ಇದ್ದು, ಕ್ಯಾನ್ಸರ್​ನ್ನು ನಿಯಂತ್ರಿಸಲು ಸಹಕಾರಿ.

 

ಹೊಟ್ಟೆ ಸಂಬಂಧಿ ರೋಗಗಳು 

 

 

ಸುವರ್ಣಗಡ್ಡೆಯು ನಾರಿನಾಂಶವನ್ನು ಹೇರಳವಾಗಿದ್ದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ , ಆಮಶಂಕೆ ಭೇದಿ ,ಅಜೀರ್ಣ, ಮೂತ್ರ ಕಟ್ಟುವಿಕೆ ತಡೆಯುತ್ತದೆ .

 

ಕೊಲೆಸ್ಟ್ರಾಲ್ ಅಥವಾ ಸಕ್ಕರೆ ಖಾಯಿಲೆ

ಸುವರ್ಣಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಬೋಹೈಡ್ರೇಟ್ ಇದ್ದು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಇದರಲ್ಲಿನ ಸಕ್ಕರೆ ಅಂಶವು ನಿಧಾನವಾಗಿ ಬಿಡುಗಡೆಯಾಗುವುದರಿಂದ ದೇಹದಲ್ಲಿ ಸಕ್ಕರೆ ಅಂಶವು ಹೆಚ್ಚಾಗದು, ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ. ಬೊಜ್ಜು ಬರುವುದಿಲ್ಲ. ಹೃದಯಕ್ಕೂ ಒತ್ತಡ ಕಡಿಮೆ ಮಾಡುತ್ತದೆ.

ಆನೆಕಾಲು ರೋಗ ತಡೆಯುತ್ತದೆ

 

 

ಆನೆಕಾಲು ರೋಗಕ್ಕೆ ಸುವರ್ಣಗಡ್ಡೆ ರಾಮಬಾಣ ಇದಕ್ಕೆ ಸ್ವಲ್ಪ ತುಪ್ಪ, ಜೇನುತುಪ್ಪ ಹಾಕಿ ಕಲಸಿಕೊಂಡು. ಕಾಲುಗಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ವಚ್ಛ ಮಾಡಿಕೊಳ್ಳಬೇಕು

 

ಚೇಳು ಕಡಿತಕ್ಕೆ ಔಷಧ

 

 

ಸುವರ್ಣ ಗೆಡ್ಡೆಯನ್ನು ಬೇಯಿಸಿ ಚೇಳು ಕಚ್ಚಿರುವ ಜಾಗಕ್ಕೆ ಲೇಪಿಸಿದರೆ ವಿಷ ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top