ದೇವರು

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮದು ಪ್ರೇಮ ವಿವಾಹವೇ ಅಥವಾ ವ್ಯವಸ್ಥಿತವಾಗಿ ಕೂಡಿ ಮಾಡಿಸಿದ ವಿವಾಹವೇ ಎಂಬುದನ್ನು ನೀವು ನಿಮ್ಮ ಜನ್ಮ ದಿನಾಂಕವನ್ನು ನೋಡಿ ತಿಳಿಯಬಹುದು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮದು ಪ್ರೇಮ ವಿವಾಹವೇ ಅಥವಾ ವ್ಯವಸ್ಥಿತವಾಗಿ ಕೂಡಿ ಮಾಡಿಸಿದ ವಿವಾಹವೇ ಎಂಬುದನ್ನು ನೀವು ನಿಮ್ಮ ಜನ್ಮ ದಿನಾಂಕವನ್ನು ನೋಡಿ ತಿಳಿಯಬಹುದು.

 

 

ಸಂಖ್ಯಾಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು  ಕಂಡು ಹಿಡಿಯಬಹುದು. ವ್ಯಕ್ತಿಗಳ ಜನ್ಮ ದಿನಾಂಕ ಆಧರಿಸಿ ಅವರದ್ದು ಪ್ರೇಮ ವಿವಾಹವೇ ಅಥವಾ ವ್ಯವಸ್ಥಿತವಾಗಿ ಹಿರಿಯರು ನೋಡಿ ಮಾಡಿಸಿದ ವಿವಾಹವೇ ಎಂಬುದನ್ನು ತಿಳಿಯಬಹುದಾಗಿದೆ.

 

 ಸಂಖ್ಯೆ ಒಂದು.(1,10,19,28)

 

ಸಂಖ್ಯೆ ಒಂದನ್ನು ಸೂರ್ಯಗ್ರಹ ಎಂದು ಹೇಳಲಾಗಿದೆ.ಒಂದನೇ ಸಂಖ್ಯೆಯವರು ತುಂಬಾ ನಾಚಿಕೆ ಸ್ವಭಾವದವರಾಗಿರುತ್ತಾರೆ. ಇವರು ಯಾವತ್ತೂ  ತಮ್ಮ ಪ್ರೀತಿಯನ್ನು ತಿಳಿಸುವುದಿಲ್ಲ. ಇದರಿಂದಾಗಿ ಪ್ರೇಮ ವಿವಾಹವಾಗುವ ಸಾಧ್ಯತೆಗಳು ಕಡಿಮೆ ಇದ್ದು, ಇವರು ಪ್ರೇಮಿಗಳಿಂದ ದೂರವೇ ಉಳಿಯುತ್ತಾರೆ.

 

ಸಂಖ್ಯೆ ಎರಡು.(2,11,20,29)

ಸಂಖ್ಯೆ ಎರಡು ಎಂದರೆ ಚಂದ್ರ ಗ್ರಹ ಎಂದು ಹೇಳಲಾಗಿದೆ. ಇವರಿಗೆ ತುಂಬಾ ನಿಧಾನವಾಗಿ ಪ್ರೀತಿ ಉಂಟಾಗುತ್ತದೆ. ಒಂದು ವೇಳೆ ಪ್ರೀತಿಯಲ್ಲಿ ಗಂಭೀರವಾಗಿ ಬಿದ್ದರೆ ಪ್ರೇಮ ವಿವಾಹವಾಗುವುದು ಖಂಡಿತಾ ಖಚಿತವಾಗಿದೆ .

 

ಸಂಖ್ಯೆ ಮೂರು.(3,12,21,30 )

 

 

ಮೂರನೇ ಸಂಖ್ಯೆ ಎಂದರೆ ಗುರು ಗ್ರಹ. ಈ ಸಂಖ್ಯೆಯವರು ಪ್ರೇಮ ವಿವಾಹದಲ್ಲಿ ಹೆಚ್ಚಾಗಿ ಸಫಲರಾಗುತ್ತಾರೆ. ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇದೆ. ನಂತರ ಅವರು ತಮ್ಮ ಪ್ರೀತಿಯನ್ನು ಮದುವೆಯವರೆಗೂ ಸಹ ತೆಗೆದುಕೊಂಡು ಹೋಗುತ್ತಾರೆ. ಇವರ ವೈವಾಹಿಕ ಜೀವನವೂ ಸಹ ಸಫಲವಾಗಿರುತ್ತದೆ.

 

 ಸಂಖ್ಯೆ ನಾಲ್ಕು.(4,13,22,31)

 

 

ಈ ಸಂಖ್ಯೆಯನ್ನು ರಾಹು ಎಂದು ಹೇಳಲಾಗುತ್ತದೆ. ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ. ಅಂದರೆ ಇವರು ಯಾವತ್ತೂ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಆದರೆ ತಮ್ಮ ಸ್ವಭಾವ ಬದಲಾವಣೆ ಮಾಡಿದರೆ ಉತ್ತಮ ಪ್ರೇಮಿಯಾಗಬಹುದು.

 

ಸಂಖ್ಯೆ ಐದು. (5,14,23)

 

ಸಂಖ್ಯೆ ಐದನ್ನು ಬುಧಗ್ರಹ ಎಂದು ಹೇಳಲಾಗಿದೆ. ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲು ನೋಡುತ್ತಾರೆ. ಇವರ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಾರೆ. ಇವರ ಜಾತಕ ಅಥವಾ ಜನ್ಮ ಕುಂಡಲಿಯಲ್ಲಿ ಯಶಸ್ವಿ ವೈವಾಹಿಕ ಜೀವನ ಅಥವಾ ಪ್ರೇಮ ವಿವಾಹದ ಯೋಗ ಇದ್ದೇ ಇರುತ್ತದೆ.

 

 ಸಂಖ್ಯೆ ಆರು.(6,15,24)

ಆರನೇ ಸಂಖ್ಯೆಯನ್ನು ಶುಕ್ರ ಗ್ರಹ ಎಂದು ಹೇಳಲಾಗುತ್ತದೆ. ಇವರು ಪ್ರೇಮ ವಿವಾಹವಾಗುವುದು ಖಚಿತ. ಇವರು ಒಂದಕ್ಕಿಂತ ಹೆಚ್ಚು ಪ್ರೇಮ, ಪ್ರೀತಿ ಸಂಬಂಧವನ್ನು ಹೊಂದುತ್ತಾರೆ. ಆದ್ದರಿಂದ ಕೆಲವೊಮ್ಮೆ ಸೂಕ್ತ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ. ಈ ಸಂಖ್ಯೆಯವರಲ್ಲಿ ಎಂಬತ್ತು ಶೇಕಡಾ ಜನರದ್ದು ಪ್ರೇಮ ವಿವಾಹವಾಗುತ್ತದೆ.

 

 ಸಂಖ್ಯೆ ಏಳು .(7,16,25)

ಏಳನೇ ಸಂಖ್ಯೆ ಎಂದರೆ ಕೇತು ಗ್ರಹ ಎಂದು ಹೇಳಲಾಗಿದೆ. ಇವರು ಸಂಕುಚಿತ ಮನೋಭಾವವನ್ನು ಹೊಂದಿರುತ್ತಾರೆ. ಇವರು ತಮ್ಮ ಘನತೆಗೆ ತಕ್ಕಂತೆ ಪ್ರೇಮ ವಿವಾಹವಾಗಲು ಬಯಸುತ್ತಾರೆ.

 ಸಂಖ್ಯೆ ಎಂಟು.(8,17,26)

 

 

ಸಂಖ್ಯೆ ಎಂಟು ಎಂದರೆ ಶನಿಗ್ರಹ. ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ಒಂದು ವೇಳೆ ಪ್ರೀತಿ ಮಾಡಿದರೆ ಖ೦ಡಿತವಾಗಿಯೂ ಅವರನ್ನು ಬಿಟ್ಟು ಹೋಗುವುದಿಲ್ಲ. ಬದುಕಿರುವವರೆಗೂ ಸಹ ತಮ್ಮ ಪ್ರೀತಿಯನ್ನು ನಿಭಾಯಿಸಿಕೊಂಡು ಹೋಗುತ್ತಾರೆ.

 

 ಸಂಖ್ಯೆ ಒಂಬತ್ತು.(9,18,27)

 

 

ಒಂಬತ್ತು ಎಂದರೆ ಕುಜ ಗ್ರಹ ಎಂದು ಹೇಳಲಾಗಿದೆ. ಮಂಗಳ ಗ್ರಹ ಪ್ರಧಾನವಾದ ವ್ಯಕ್ತಿ ಯಾವುದೇ ರೀತಿಯ ವಿವಾದದಲ್ಲಿ ಬೀಳಲು ಇಷ್ಟಪಡುವುದಿಲ್ಲ. ಪ್ರೇಮದಲ್ಲಿ ವಿವಾದಗಳು ಇರುತ್ತವೆ. ಆದರೆ ಈ ಜನರು ಪ್ರೀತಿಗೆ ಸಂಬಂಧಿಸಿದಂತೆ ಉದಾಸೀನವಾಗಿಯೇ ಇರುತ್ತಾರೆ. ಆದರೆ ಹೆಚ್ಚು ಭಯ ಪಡುತ್ತಾರೆ. ಇವರ ಪ್ರೇಮ ವಿವಾಹ ನಡೆಯುವುದು ಕಷ್ಟ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top