ಭವಿಷ್ಯ

ಡಿಸೆಂಬರ್ 1 :ನಿತ್ಯಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ೦೧ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೨೯
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ದ್ವಾದಶೀ
ನಕ್ಷತ್ರ : ಅಶ್ವಿನಿ
ಯೋಗ : ವರಿಯಾನ್
ಪ್ರಥಮ ಕರಣ : ಬಾಲವ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೬ – ೧೨:೩೧
ಅಮೃತಕಾಲ : ೦೭:೪೮ – ೦೯:೧೭

ರಾಹು ಕಾಲ: ೧೦:೪೩ – ೧೨:೦೮
ಗುಳಿಕ ಕಾಲ: ೦೭:೫೪ – ೦೯:೧೯
ಯಮಗಂಡ: ೧೪:೫೮ – ೧೬:೨೨

 

ಮೇಷ (Mesha)

ನೂತನ ಕಾರ್ಯ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ. ಮಾನಸಿಕ ನಿರಾಳತೆ, ಮಿತ್ರರ ಸಹಕಾರ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ಆರ್ಥಿಕ ಸಬಲತೆ ಮನಸ್ಸಿಗೆ ಖುಷಿ ನೀಡುವುದು.

 

ವೃಷಭ (Vrushabha)

ಕ್ಷಣ ಕ್ಷೇತ್ರದಲ್ಲಿ ನಿಮಗೆ ಮಾರ್ಗದರ್ಶಕರಾಗಿ ಉತ್ತಮರು ದೊರೆಯುವರು. ನಿಮ್ಮ ಸಂಶೋಧನಾ ದಾರಿ ಸುಗಮವಾಗುವುದು. ಗುರುಬಲವಿದ್ದು ತೂರಿಕೊಳ್ಳುವುದು ಒಳ್ಳೆಯದು.

 

ಮಿಥುನ (Mithuna)

ಮನೆಯ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ. ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಸಿಟ್ಟಿನ ಭರದಲ್ಲಿ ಕೊಯ್ದಕೊಂಡ ಮೂಗನ್ನು ಜೋಡಿಸಲು ಆಗುವುದಿಲ್ಲ. ಈದಿನ ಹೆಚ್ಚಿನ ತಾಳ್ಮೆ ಅಗತ್ಯ.

 

ಕರ್ಕ (Karka)

ಹಿರಿಯರು ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಗುರುವಿನ ಅವಕೃಪೆಯು ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ಈ ಸಂದರ್ಭದಲ್ಲಿ ಹಿರಿಯರೊಡನೆ ಕೋಪತಾಪ ಪ್ರದರ್ಶಿಸುವುದು ಒಳ್ಳೆಯದಲ್ಲ. ತಾಳ್ಮೆಯಿಂದ ಇರಿ.

 

ಸಿಂಹ (Simha)

ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ ಎನ್ನುವಂತಹ ಪರಿಸ್ಥಿತಿ. ಇದುವರೆಗೂ ನಿಮ್ಮ ಸುತ್ತಲಿದ್ದ ಜನರು ಕ್ರಮೇಣ ಕಡಿಮೆ ಆಗುತ್ತಿರುವರು. ಕಾರಣ ನಿಮ್ಮ ಆರ್ಥಿಕ ಸ್ಥಿತಿ  ಕಡಿಮೆ ಆಗುವುದು.

 

ಕನ್ಯಾರಾಶಿ (Kanya)

ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ. ಗ್ರಾಹಕರು ನಿಮ್ಮ ಕರ್ತವ್ಯ ನಿಷ್ಠೆಯನ್ನು ಕೊಂಡಾಡುವರು. ಹಾಗಾಗಿ ಇನ್ನು ಹೆಚ್ಚು ಕೆಲಸದಲ್ಲಿ ತಲ್ಲೀನರಾಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

 

ತುಲಾ (Tula)

ವಾಣಿಜ್ಯ ರಂಗದವರಿಗೆ ಲಾಭ. ಗೆಳೆಯರಿಂದ ಸಹಾಯ ಸಾಧ್ಯತೆ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ನಿಷ್ಠುರತೆಯು ಇತರರಿಗೆ ಮುಜುಗರ, ಕಿರಿಕಿರಿಯನ್ನುಂಟು ಮಾಡುವುದು.

 

ವೃಶ್ಚಿಕ (Vrushchika)

ಕೋರ್ಟು ಕಚೇರಿ ಕೆಲಸಗಳಲ್ಲಿ ಗೆಲುವು ಕಂಡು ಬರುವುದು. ಸಹೋದ್ಯೋಗಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಕೊಂಡಾಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಧನು ರಾಶಿ (Dhanu)

ಇಂದು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿನ ನಿಮ್ಮ ಪ್ರಯತ್ನಗಳು ಕೈಗೂಡುವವು. ಮಕ್ಕಳ ಪ್ರಗತಿಯು ನಿಮ್ಮ ಮನಸ್ಸಿಗೆ ಸಂತೋಷಗೊಳಿಸುವುದು.

 

ಮಕರ (Makara)

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಕೊಡದಿರುವುದು ಒಳ್ಳೆಯದು. ಸಂವಹನ ಕಲೆಯಲ್ಲಿ ಚುರುಕಾಗುವಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಗುರುವಿನ ಸ್ತೋತ್ರ ಪಠಿಸಿ.

 

ಕುಂಭರಾಶಿ (Kumbha)

ಕಷ್ಟ, ನಷ್ಟ ತಾತ್ಕಾಲಿಕ, ಕೋಪಕ್ಕೆ ಕಡಿವಾಣ ಹಾಕಿ. ನಂಬಿದವರಿಂದಲೇ ಮೋಸ ಹೋಗುವ ಸಂದರ್ಭ. ಹಣದ ವಿಷಯದಲ್ಲಿ ಜಾಗೃತರಾಗಿರಿ. ಗುರು ಹಿರಿಯರೊಡನೆ ವಾದ ಬೇಡ. ಅವರ ಮಾತನ್ನು ಗೌರವಿಸಿ ಒಳಿತಾಗುವುದು.

 

ಮೀನರಾಶಿ (Meena)

ಅನಗತ್ಯ ವಾದ ವಿವಾದಗಳಿಂದ ದೂರ ಇರುವುದು ಒಳ್ಳೆಯದು. ಹಣ ಹೂಡಿಕೆಯ ವಿಷಯದಲ್ಲಿ ಸಕಾಲಿಕ ನೆರವು ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top