ಆರೋಗ್ಯ

ಚಳಿಗಾಲದ ಸರ್ವೇ ಸಾಮಾನ್ಯ ಸಮಸ್ಯೆ ಕೆಮ್ಮು ಫಟ್ ಅಂತ ಹೋಗ್ಬೇಕಾದ್ರೆ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗೋ ಈ ಪದಾರ್ಥ ಬಳಸ್ಕೊಳ್ಳಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 

ಮಳೆಗಾಲ, ಚಳಿಗಾಲದಲ್ಲಿ ಬರುವ ಕೆಮ್ಮು ನೆಗಡಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲೂ ಸಹ ಇವುಗಳಿ೦ದ ಸ೦ಪೂರ್ಣ ಮುಕ್ತಿಯೇನಿಲ್ಲ. ಅವುಗಳಿಗೆ ಇಲ್ಲಿವೆ
ಕೆಲವು ಸುಲಭ ಮನೆಮದ್ದುಗಳು:

ತುಳಸಿ

 

 

 

ನೀರಿಗೆ ತುಳಸಿ ಹಾಗೂ ಶುಂಠಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಒಂದು ಚಿಟಿಕಿ ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ.

ತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ಒಂದು ಹನಿಯಷ್ಟು ಜೇನುತುಪ್ಪು ಬೆರಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ.

 

ಶುಂಠಿ ಕಷಾಯ

ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ.  ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.

 


ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

 

ಅರಿಷಿಣ

 

ಅರಿಷಿಣ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿ. ಕುದಿಯುವ ನೀರಿಗೆ ಅರಿಷಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮ ಹಾಗೂ ಶೀತ ನಿವಾರಣೆ ಆಗುತ್ತದೆ.

 

ಜೇನು

 

1/4 ಕಪ್ ನೀರಿಗೆ ಎರಡು ಚಮಚ ಜೇನು .ಲಿಂಬೆ ರಸ ,ದಾಲ್ಚಿನ್ನಿ ಚಕ್ಕೆ ಹಾಗೂ ಒಂದು ನೀಲಗಿರಿ ಎಲೆ ಸೇರಿಸಿ ಸೇವಿಸಿ ಕೆಮ್ಮು ನಿವಾರಣೆ ಆಗುತ್ತದೆ.

 

ದಾಲ್ಚಿನ್ನಿ ಚೂರ್ಣ

ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು ೧ ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.

 

ಕಾಳುಮೆಣಸಿನಪುಡಿ

 

 

ಹಸುವಿನ ಹಾಲಿಗೆ ಕಾಳುಮೆಣಸಿನಪುಡಿ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top