ಸಮಾಚಾರ

ನಾಡಗೀತೆಯನ್ನೇ ತಪ್ಪು ತಪ್ಪಾಗಿ ಹಾಡಿದ ಸಿ.ಎಂ ಸಿದ್ದರಾಮಯ್ಯ.

ನಾಡಗೀತೆಯನ್ನೇ ತಪ್ಪು ತಪ್ಪಾಗಿ ಹಾಡಿದ ಸಿ.ಎಂ ಸಿದ್ದರಾಮಯ್ಯ.

 

 

ಮೈಸೂರಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯನವರು ತಮ್ಮ ಭಾಷಣದ ವೇಳೆಯಲ್ಲಿ  ನಾಡಗೀತೆಯನ್ನು ಉದಾಹರಣೆ ಕೊಡಲು ಹೋಗಿ ತಪ್ಪು ತಪ್ಪಾಗಿ ಹಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಭಾಷಣ ಮಾಡುತ್ತಿದ್ದಾಗ ಐಕ್ಯತೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಕುವೆಂಪು ರವರು ರಚಿಸಿರುವ ನಾಡಗೀತೆಯನ್ನು “ರಸಿಕರ ಕಣ್ಗಳ ಸೆಳೆಯುವ ನೋಟ” ಎನ್ನುವ ಬದಲಾಗಿ ನಾಲಿಗೆ ತಪ್ಪಿ “ಸರ್ವಜನಾಂಗದ ಕಣ್ಗಳ ಸೆಳೆಯುವ ನೋಟ” ತಪ್ಪಾಗಿ ಹಾಡಿದರು.

 

 

ನಂತರ “ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರ ಉದ್ಯಾನ” ಎಂಬ ಸಾಲನ್ನೂ ಕೂಡ ಪದಗಳನ್ನು ಅದಲು ಬದಲು ಮಾಡಿ “ಹಿಂದೂ ಕ್ರೈಸ್ತ ಮುಸಲ್ಮಾನ, ಜೈನ ಪಾರಸಿಕರ ಉದ್ಯಾನ” ಎಂದು ಹಾಡಿದರು. ಬಿಜೆಪಿಯವರ ಕಳೆಯಲು ಹೋಗಿ ನಾಡಗೀತೆಯನ್ನೇ ತಪ್ಪು ತಪ್ಪಾಗಿ ಹಾಡಿದ ಸಿ.ಎಂ ಸಿದ್ದರಾಮಯ್ಯನವರು ನಾಡಗೀತೆಯನ್ನು ತಪ್ಪಾಗಿ ಹಾಡುತ್ತಿದ್ದಾಗ ಅವರ ಬೆಂಬಲಿಗರು ಚಪ್ಪಾಳೆ, ಶಿಳ್ಳೆ ಹಾಕುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top