ದೇವರು

ಅಯ್ಯಪ್ಪ ದೇವನ ವ್ರತ ಮಾಡುವವರು ಈ ಏಳು ನಿಯಮಗಳನ್ನು ಭಕ್ತಿ ಶ್ರದ್ಧೆಗಳಿಂದ ತಪ್ಪದೇ ಪಾಲಿಸಲೇಬೇಕು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಯ್ಯಪ್ಪ ದೇವನ ವ್ರತ ಮಾಡುವವರು ಈ ಏಳು ನಿಯಮಗಳನ್ನು ತಪ್ಪದೇ ಪಾಲಿಸಲೇಬೇಕು.

 

 

ಅಯ್ಯಪ್ಪ ದೇವನ ವ್ರತ ಮಾಡುವುದೆಂದರೆ ಅದೊಂದು ದೈವಿಕವಾದ ಅನುಭವ. ಸನಾತನ ಧರ್ಮದ ಪ್ರಕಾರ ಮನುಷ್ಯ ಭಗವಂತನಲ್ಲಿ ವ್ಯಕ್ತವಾಗಲು ರಾಜ ಯೋಗ, ಭಕ್ತಿ ಯೋಗ, ಕರ್ಮ ಯೋಗ, ಜ್ಞಾನ ಯೋಗದ ಮಾರ್ಗಗಳಿವೆ. ಅಯ್ಯಪ್ಪ ದೇವರ ವ್ರತ ಮಾಡುವವರು ಭಕ್ತಿಯೋಗದ ಮೂಲಕ ದೈವ ಸ್ವರೂಪದ ಅನುಭವ ಪಡೆಯುತ್ತಾರೆ.

 

 ಅಯ್ಯಪ್ಪ ದೇವನ ವ್ರತದ 41  ದಿನಗಳು ಆಚರಣೆ 

 

ಅಯ್ಯಪ್ಪ ಭಕ್ತರು ಶಬರಿ ಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುವ ಮೊದಲು ನಲವತ್ತೊಂದು ದಿನಗಳ ಕಠಿಣ ವ್ರತಾಚರಣೆ ಮಾಡುತ್ತಾರೆ. ಒಂದು ಶಿಸ್ತು ಬದ್ಧವಾದ ಜೀವನ ನಡೆಸುತ್ತಾರೆ. ಅದಕ್ಕಾಗಿ ಈ ನಿಯಮಗಳನ್ನು ಅಳವಡಿಸಿಕೊಳ್ಳುತ್ತಾರೆ.

 

ವ್ರತ ಮಾಡುತ್ತಿರುವವರು ಬೆಳಗ್ಗೆ ಮತ್ತು ಸಂಜೆ ಸ್ನಾನ ಮಾಡಿ ಪ್ರಾರ್ಥಿಸಬೇಕು.

ಸಸ್ಯಹಾರಿಗಳಾಗಬೇಕು.

ಸಿನಿಮಾ ಮತ್ತಿತರ ಪ್ರಲೋಭನಕಾರಿ ಮನರಂಜನೆಗಳಿಂದ ದೂರವಿದ್ದು ಸದಾ ಅಯ್ಯಪ್ಪ ದೇವರನ್ನು ನೆನೆಯುತ್ತಾ ಇರಬೇಕು.

ಈ ವ್ರತ ಮಾಡುವವರು ಯಾವುದೇ ರೀತಿಯ ಕಿರುಕುಳ ಕೆಲಸ ಮಾಡುವುದಾಗಲಿ, ಆಲೋಚಿಸುವುದಾಗಿ ಮಾಡಬಾರದು.

 

ಪಾದರಕ್ಷೆಗಳನ್ನು ಬಳಸದೆ ಇದ್ದರೆ ಒಳ್ಳೆಯದು.

ಸಮೀಪದ ಅಯ್ಯಪ್ಪ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಬೇಕು.

ಮೊದಲ ಬಾರಿ ಮಾಲೆ ಹಾಕುವವರು ಕಪ್ಪು ಬಟ್ಟೆ ಧರಿಸಬೇಕು. ಗುರು ಸ್ವಾಮಿಗಳು ಕಾವಿ ಪಂಚೆ ಧರಿಸಬಹುದು.

 

 ಈ ವ್ರತದ ನಿಯಮಗಳು ಭಕ್ತನ ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಸುವುದು

 

 

ಅಯ್ಯಪ್ಪ ದೇವರ ವ್ರತ ನಿಯಮಗಳು ಹಾಗೂ ಪ್ರಾಮುಖ್ಯತೆ, ಮಾಂಸಾಹಾರ, ಧೂಮಪಾನ ಮದ್ಯ ಇವುಗಳ ವರ್ಜ್ಯ. ಈ ನಿಯಮಗಳನ್ನು ಪಾಲಿಸಿದರೆ ಮನುಷ್ಯನ ದೇಹದ ಆರೋಗ್ಯ ವೃದ್ಧಿಯಾಗುವುದು. ಜೊತೆಗೆ ಒಳ್ಳೆಯ ಚಿಂತನೆಗಳನ್ನು, ನಮ್ಮ ಆರೋಗ್ಯವನ್ನು ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಿವೆ.

ಕೂದಲುಗಳನ್ನು ಕತ್ತರಿಸುವಹಾಗಿಲ್ಲ. ಗಡ್ಡವನ್ನು ತೆಗೆಯುವಂತಿಲ್ಲ. ಇವುಗಳು ನಮ್ಮನ್ನು ಬಾಹ್ಯ ಸೌಂದರ್ಯ ಹಾಗೂ ಲೌಕಿಕ ಆಕರ್ಷಣೆಯಿಂದ ದೂರವಿರಿಸುತ್ತದೆ.

 ವಸ್ತ್ರ ನಿಯಮ

ಅಯ್ಯಪ್ಪನ ದೇವನ ಭಕ್ತರು ಕಪ್ಪು ಮತ್ತು ಕಾವಿ ಬಟ್ಟೆಯನ್ನು ಧರಿಸುತ್ತಾರೆ. ಕಪ್ಪು ಬಟ್ಟೆ ಎಲ್ಲ ಲೌಕಿಕ ಸುಖ ಆಕರ್ಷಣೆಗಳನ್ನು ಬಿಟ್ಟು ದೇವರಿಗೆ ಶರಣಾಗಿದ್ದೇವೆ ಎಂಬುದರ ಸಂಕೇತವಾಗಿದೆ. ಅಲ್ಲದೆ ಅಯ್ಯಪ್ಪನ ಮುಂದೆ ಎಲ್ಲರೂ ಸಮಾನರು ಎಂಬ ಅರ್ಥವೂ ಸಹ ಇದೆ.

 

 

ಹೆಣ್ಣಿನ ಸುಖದಿಂದ ದೂರವಿರಬೇಕು

ಅಯ್ಯಪ್ಪ ದೇವರ ಭಕ್ತರು 41 ದಿನ ಹೆಣ್ಣಿನ ಸುಖ ಪಡೆಯುವಂತಿಲ್ಲ. ಕಾಮ, ಕ್ರೋಧ ಮತ್ತು ಮೋಹದಿಂದ ದೂರವಿರುವುದರಿಂದ ಮನಸ್ಸು ಹಾಗೂ ದೇಹ ಶುದ್ಧವಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top