fbpx
ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ಕಳ್ಳತನ ಮಾಡಿದ ದಿವಾಕರ್..!

ಬಿಗ್’ಬಾಸ್ ಮನೆಯಲ್ಲಿ ಕಳ್ಳತನ ಮಾಡಿದ ದಿವಾಕರ್..!

 

 

ಶೀರ್ಷಿಕೆಯನ್ನು ನೋಡಿ ಇದೇನಪ್ಪಾ ಬಿಗ್ ಬಾಸ್ ಮನೆಯಲ್ಲಿ ದಿವಾಕರ್ ಕಳ್ಳತನ ಮಾಡಿಬಿಟ್ರಾ ಅನ್ಕೋಬೇಡಿ ಯಾಕೆಂದರೆ ಕಳ್ಳತನ ಮಾಡಿದ್ದು ಕೇವಲ ಟಾಸ್ಕ್ ಗೋಸ್ಕರ.. ಆಧುನಿಕ ನಗರದ ಜೀವನ ಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ, ಈ ವಾರ ‘ಬಿಗ್ ಬಾಸ್ ನಗರ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು.ಇದರಂತೆ ಮನೆಯ ಭಾಗಗಳಿಗೆ ವಿವಿಧ ಏರಿಯಾಗಳ ಹೆಸರಿಡಲಾಗಿತ್ತು. ಜಯಶ್ರಿನಿವಾಸನ್, ಜಗನ್ ಟ್ಯಾಕ್ಸಿ ಡ್ರೈವರ್ ಗಳಾಗಿದ್ದು, ಚಂದ್ರು, ಸಮೀರಾಚಾರ್ಯ, ಕ್ಯಾಂಟೀನ್ ಮಾಲೀಕರಾಗಿದ್ದಾರೆ. ಉಳಿದಂತೆ ಆಶಿತಾ,ಜೆಕೆ, ನಿವೇದಿತಾ, ಶ್ರುತಿ, ಅನುಪಮಾ, ದಿವಾಕರ್, ಚಂದನ್ ನಾಗರಿಕರಾಗಿದ್ದಾರೆ. ರಿಯಾಜ್ ಹಾಗೂ ಕೃಷಿ ಅಧಿಕಾರಿಗಳಾಗಿದ್ದರು.

 

 

ಪ್ರತಿ ನಾಗರಿಕರಿಗೆ ತಲಾ 2000 ರೂ. ನೀಡಲಾಗಿದ್ದು ನಾಗರಿಕರು ಮತ್ತು ಕ್ಯಾಂಟೀನ್ ಮಾಲೀಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಟ್ಯಾಕ್ಸಿಯಲ್ಲಿಯೇ ಹೋಗಬೇಕಾಗಿತ್ತು ಟ್ಯಾಕ್ಸಿಯಲ್ಲಿ ಹೋಗುವುದಕ್ಕೆ ದುಡ್ಡು ಕೊಡಬೇಕಿತ್ತು. ಹಾಗು ಊಟಗಳನ್ನು ಕ್ಯಾಂಟೀನ್ ನಲ್ಲಿ ಹಣ ಕೊಟ್ಟು ಖರೀದಿಸಬೇಕಾಗಿತ್ತು. ನೆನ್ನೆ ಜೆಕೆ, ಅನುಪಮಾ, ನಿವೇದಿತಾ, ಚಂದನ್‌, ಆಶಿತಾ, ದಿವಾಕರ್‌ ಹಾಗೂ ಶೃತಿ ಅವರನ್ನು ಕನ್ಫೆಷನ್ ರೂಮ್’ಗೆ ಕರೆಸಿ ಸೀಕ್ರೆಟ್‌ ಟಾಸ್ಕ್‌ ನೀಡಲಾಗಿತ್ತು.

 

 

ದಿವಾಕರ್‌ಗೆ ಮನೆಯ ಸದಸ್ಯರ ಬಳಿಯಿರುವ ಹಣವನ್ನು ಕಳ್ಳತನ ಮಾಡಬೇಕು ಎಂಬ ಸೀಕ್ರೆಟ್ ಟಾಸ್ಕ್‌ ನೀಡಿದ್ರು. ಅವರು ಕಳ್ಳತನ ಮಾಡುವುದು ಯಾರಿಗೂ ತಿಳಿಯದ ಹಾಗೆ ಹಣ ಕಳ್ಳತನ ಮಾಡಬೇಕು. ಒಂದು ವೇಳೆ ಸಿಕ್ಕಿಹಾಕಿಕೊಂಡ್ರೆ ಬುದ್ದಿವಂತಿಕೆಯಿಂದ ತಪ್ಪಿಕೊಳ್ಳಬೇಕಾಯಿತು. ಸೀಕ್ರೆಟ್ ಟಾಸ್ಕ್ ಪ್ರಕಾರ ಅನುಪಮಾ ಅವರ ದುಡ್ಡು ಕಳವು ಮಾಡಿದ ದಿವಾಕರ್‌ ಅದನ್ನು ಬಾತ್‌‌ರೂಮ್‌ನಲ್ಲಿ ಬಚ್ಚಿಟ್ರು.ಹಣ ಕಳೆದುಕೊಂಡು ಅನುಪಮಾ, ಅಧಿಕಾರಿಗಳಾದ ಕೃಷಿ ಹಾಗೂ ರಿಯಾಜ್ ಅವರಿಗೆ ಕಂಪ್ಲೇಂಟ್ ಕೊಟ್ಟಿದ್ರು ಈ ತನಿಖೆಯನ್ನು ಕೈಟ್ಟುಕೊಂಡ ರಿಯಾಜ್ ಹಣವನ್ನು ಹುಡುಕುವಲ್ಲಿ ಯಶಸ್ವಿಯಾದರು. ನಂತರ ದಿವಾಕರ್ ಅವರನ್ನು ರಿಯಾಜ್ ವಶಕ್ಕೆ ಪಡೆದು ಶಿಕ್ಷೆ ನೀಡಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top