fbpx
ವಾಸ್ತು

ಫೆಂಗ್ ಶುಯ್  ವಾಸ್ತು ಶಾಸ್ತ್ರದ ಪ್ರಕಾರ ಕುದುರೆಯ ಚಿತ್ರಗಳನ್ನು ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೇದಂತೆ

ಫೆಂಗ್ ಶುಯ್   ವಾಸ್ತು ಶಾಸ್ತ್ರದ ಪ್ರಕಾರ ಕುದುರೆಯ ಚಿತ್ರಗಳನ್ನು ಮನೆಯಲ್ಲಿ ಇಟ್ಟರೆ ಶುಭ ಎಂದು  ಪರಿಗಣಿಸಲಾಗಿದೆ.

 

ಫೆಂಗ್ ಶುಯ್  ವಾಸ್ತು ಪಾಲಿಸುವವರಿಗೆಲ್ಲ ಇದರ ಬಗ್ಗೆ ಗೊತ್ತು. ಇದು ಸಹ ಒಂದು ವಾಸ್ತು ಶಾಸ್ತ್ರ. ಶಿಕ್ಷಣ, ವೃತ್ತಿ ಮತ್ತು ವೈಯಕ್ತಿಕ ಜೀವನ, ಜ್ಞಾನದಂತಹ ಎಷ್ಟು ಅಂಶಗಳನ್ನು ಈ ವಾಸ್ತು ಪ್ರಭಾವಿಸುತ್ತದೆ.

 

 

ವ್ಯಾಪಾರದಲ್ಲಾಗಲಿ ವೃದ್ಧಿಯಾಗಬೇಕು ಸಾಧಿಸಬೇಕು ಎಂದಾದರೆ ಈ ವಾಸ್ತು ಉಪಯೋಗಕ್ಕೆ ಬರುತ್ತದೆ. ಆದರೆ ಎಷ್ಟು ಕಷ್ಟ ಪಟ್ಟು ಕೆಲಸ ಮಾಡಿದರು  ಸಹ ವಾಸ್ತು ಪ್ರಕಾರ ಅದೃಷ್ಟ ಸಹ ಕೂಡಿ ಬರಬೇಕು. ಈ ರೀತಿ ಕೂಡಿ ಬಂದರೇನೆ ಅದೃಶ್ಯ ಒಲಿಯುವುದು. ಇದರಿಂದ ವ್ಯಾಪಾರವಾಗಲಿ, ಉದ್ಯೋಗವಾಗಲಿ ವೃದ್ಧಿಯಾಗುತ್ತದೆ. ಈ ಕ್ರಮದಲ್ಲಿ ಆ ರೀತಿ ಯಾರೇ ಆಗಲಿ ಅಭಿವೃದ್ಧಿ ಹೊಂದಬೇಕೆಂದರೆ ಫೆಂಗ್ ಶುಯ್ ವಾಸ್ತು ಪ್ರಕಾರ ಈಗ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ…..

ಫೆಂಗ್ ಶುಯ್  ಪ್ರಕಾರ ಕುದುರೆಗಳು ಶಕ್ತಿಗೆ ನಿದರ್ಶನ. ಇವು ಧನಾತ್ಮಕ ಶಕ್ತಿಯನ್ನು ಕೊಡುತ್ತವೆ. ಹಾಗಾಗಿ ಕುದುರೆ ಚಿತ್ರಗಳು ಮನೆ ಅಥವಾ ಕಚೇರಿಯಲ್ಲಿ ಇಟ್ಟುಕೊಂಡರೆ ಆ ಮೂಲಕ ಮೇಲೆ ತಿಳಿಸಿದ ವಿಧದಲ್ಲಿ ಉದ್ಯೋಗ ಅಥವಾ ವ್ಯಾಪಾರದಲ್ಲಿ ವೃದ್ಧಿ ಗಳಿಸಬಹುದು.

ಹಗ್ಗಗಳೊಂದಿಗೆ ಇರುವ ಕುದುರೆ ಚಿತ್ರಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಮೈಮೇಲೆ ಏನೂ ಇಲ್ಲದೆ ಖಾಲಿ ಕುದುರೆ ಇರುವ  ಚಿತ್ರಗಳನ್ನು ಅಂತಹ ಕುದುರೆಗಳನ್ನು ಇಟ್ಟರೆ ಅವು ನಕಾರಾತ್ಮಕ ಶಕ್ತಿಯ ಸಂಕೇತಗಳಾಗಿವೆ. ಆದ ಕಾರಣ ಅದೇ ಶಕ್ತಿಯನ್ನು ಆ ಜಾಗದಲ್ಲಿ ಹರಡುತ್ತವೆ ಇದರಿಂದ ಅದೃಷ್ಟ ಕೂಡಿ ಬರುವುದಿಲ್ಲ. ಆದ ಕಾರಣ ಹಗ್ಗ ಅಥವಾ ಮೈ ಮೇಲೆ ಬಟ್ಟೆ  ಇರುವ ಕುದುರೆ ಚಿತ್ರಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಅದೃಷ್ಟ ಕೂಡಿ ಬರುವುದು. ಎಲ್ಲವೂ ಒಳ್ಳೆಯದೇ ಆಗುವುದು. ಎಲ್ಲದರಲ್ಲೂ ವೃದ್ಧಿಯನ್ನು ಗಳಿಸುವ ಸಂಪತ್ತು ಕೂಡ ಲಭಿಸುವುದು.

 

 

ಮನೆ ಅಥವಾ ಕಚೇರಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಕುದುರೆ ಚಿತ್ರಗಳನ್ನು ಇಟ್ಟರೆ ಅದರಿಂದ ಹೆಸರು ಕೀರ್ತಿ ಬರುತ್ತದೆ. ಪ್ರಾಜೆಕ್ಟ್ ಗಳು ಯಶಸ್ವಿಯಾಗುತ್ತವೆ. ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.

 

ಉತ್ತರ ದಿಕ್ಕಿನಲ್ಲಿ ಕುದುರೆಯ ಚಿತ್ರಗಳನ್ನು ಇಟ್ಟರೆ ವೃತ್ತಿಯ ಪರವಾಗಿ ಅದೃಷ್ಟ ಒಲಿದು ಬರುವುದು.  ಸಮಸ್ಯೆಗಳನ್ನು ಎದುರಿಸುತ್ತಿರುವವರು ಆರ್ಥಿಕ ಸಮಸ್ಯೆಗಳು ಇರುವವರು ಕುದುರೆ ಚಿತ್ರಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದರಿಂದ ಅದೃಷ್ಟ ಸಹ ಕೂಡಿಬಂದು ಅಂದುಕೊಂಡ ಕೆಲಸಗಳು ನೆರವೇರುತ್ತವೆ.

 

ಬಾಗಿಲುಗಳು ಅಥವಾ ಕಿಟಕಿಗಳಿಗೆ ಎದುರಾಗಿ ಕುದುರೆ ಚಿತ್ರಗಳ ತಲೆ ಕಾಣುವಂತೆ ಇಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಅಂದುಕೊಂಡ ಕೆಲಸಗಳು ನೆರವೇರುತ್ತವೆ.

 

 

ಎರಡು ಜೋಡಿ ಕುದುರೆಯ ಚಿತ್ರವನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ದಂಪತಿಗಳು ನಡುವೆ ಕಲಹಗಳು ಇರುವುದಿಲ್ಲ. ಗಲಾಟೆ ಇಲ್ಲದ ಸಂಸಾರದೊಂದಿಗೆ ಸುಖವಾಗಿ ಬದುಕುತ್ತಾರೆ. ಮಲಗುವ ಕೋಣೆಯಲ್ಲಿ ಯಾವಾಗಲಾದರೂ ಸರಿ ಒಂಟಿ ಕುದುರೆಯ ಚಿತ್ರವನ್ನು ಇಡಬಾರದು. ಜೋಡಿ ಕುದುರೆ ಚಿತ್ರಗಳೇ ಇಟ್ಟುಕೊಳ್ಳಬೇಕು .

 

ಕುದುರೆಯ ಚಿತ್ರಗಳನ್ನು ಅಥವಾ ಫೋಟೋಗಳನ್ನು ಮನೆ ಅಥವಾ ಕಚೇರಿಯಲ್ಲಿ ನೇತು ಹಾಕಿದರೂ ಮೇಲೆ ತಿಳಿಸಿದ ಫಲಿತಾಂಶ ಸಿಗುತ್ತದೆ.

 

 

ಏಳು ಕುದುರೆಗಳು ಅಕ್ಕ ಪಕ್ಕ ಓಡುತ್ತಿರುವಂತೆ ಇರುವ ಫೋಟೋ ಅಥವಾ ವಿಗ್ರಹವನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಮನೆ ಅಥವಾ  ಕಚೇರಿಯಲ್ಲಿ ಇರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ. ಸಮಸ್ಯೆಗಳು ಏನೇ ಇರಲಿ ಮಂಜಿನಂತೆ ಕರಗಿ ಹೋಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top