ಭವಿಷ್ಯ

ಡಿಸೆಂಬರ್ 02 : ನಿತ್ಯಭವಿಷ್ಯ ಮತ್ತೆ ಪಂಚಾಂಗ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಶನಿವಾರ, ೦೨ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೦
ಸೂರ್ಯಾಸ್ತ : ೧೭:೪೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಭರಣಿ
ಯೋಗ : ಪರಿಘ
ಪ್ರಥಮ ಕರಣ : ಗರಜ – ೧೪:೪೧ ವರೆಗೆ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೬ – ೧೨:೩೧
ಅಮೃತಕಾಲ : ೦೭:೪೮ – ೦೯:೧೪

ರಾಹು ಕಾಲ: ೦೯:೧೯ – ೧೦:೪೪
ಗುಳಿಕ ಕಾಲ: ೦೬:೩೦ – ೦೭:೫೫
ಯಮಗಂಡ: ೧೩:೩೩ – ೧೪:೫೮

ಮೇಷ (Mesha)

ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಎಣಿಕೆಯಂತೆ ಲಾಭಾಂಶ ಕಂಡುಬರುವುದು. ಇಷ್ಟಕಾರ್ಯ ಸಿದ್ಧಿಯು, ದೇಹದಲ್ಲಿ ನವಚೈತನ್ಯವು, ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ.

 

 

ವೃಷಭ (Vrushabha)

ಇಂದಿನ ಸಮಯವು ನಿಮಗೆ ಸಾಧನೆ ಮಾಡಲು ಪ್ರೇರೇಪಿಸುವುದು. ಹೊಲಮನೆ, ಸ್ಥಿರಾಸ್ತಿ ಕೊಂಡುಕೊಳ್ಳಲು ಯೋಜನೆ ರೂಪಿಸಿ. ಗುರು-ಹಿರಿಯರನ್ನು ಗೌರವಿಸಿ ಅವರಿಗೆ ನಿತ್ಯ ನಮಸ್ಕಾರ ಮಾಡಿ.

 

ಮಿಥುನ (Mithuna)

ಭರವಸೆಯ ವ್ಯವಹಾರದ ಅವಕಾಶವೊಂದರಿಂದ ಉತ್ತೇಜಿತರಾಗುವಿರಿ. ಇಂದಿನ ದಿನವನ್ನು ಸಂತೊಷದಿಂದ ಕಳೆಯುವಿರಿ. ಈದಿನ ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸಿ. ಇದರಿಂದ ಆರೋಗ್ಯ ಉತ್ತಮವಾಗಿರುವುದು.

 

ಕರ್ಕ (Karka)

ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸು ವಿಷಯದಲ್ಲಿ ಎಚ್ಚರದಿಂದ ಇರಿ. ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು.

 

ಸಿಂಹ (Simha)

ಚಿತ್ತ ಚಾಂಚಲ್ಯದಿಂದಾಗಿ ಕೆಲಸ ಕಾರ್ಯಗಳಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ. ಮಕ್ಕಳೊಡನೆ ಬೆರೆತು ಏಕತಾನತೆಯಿಂದ ಹೊರ ಬನ್ನಿ. ಗುರುವಿನ ಆಶೀರ್ವಾದದಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಕನ್ಯಾರಾಶಿ (Kanya)

ಅತಿಯಾದ ಮಾನಸಿಕ ಸಮಸ್ಯೆಯನ್ನು ದೂರವಿಡಿ. ಸಹೋದ್ಯೋಗಿಗಳ ಜತೆ ನಿಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಳ್ಳಬೇಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಮೂಲಕ, ನೀವು ಕೆಲವು ಪ್ರಮುಖ ಜನರನ್ನು ಭೇಟಿಯಾಗುತ್ತೀರಿ.

 

ತುಲಾ (Tula)

ಬಡ್ತಿಯ ಸಾಧ್ಯತೆಗಳೂ ಇವೆ. ಹೀಗಾಗಿ, ಕಠಿಣ ಪರಿಶ್ರಮ ಮುಂದುವರಿಸಿ, ನಿರಾಶರಾಗಬೇಡಿ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ. ವೃತ್ತಿ ಜೀವನದಲ್ಲೂ ಉತ್ತಮ ಆರಂಭವಿದೆ.

 

ವೃಶ್ಚಿಕ (Vrushchika)

ಕುಟುಂಬದ ಸದಸ್ಯರೊಡನೆ ನಿಮ್ಮ ಬಾಂಧವ್ಯ ಅಷ್ಟೇನೂ ಉತ್ತಮವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು,

 

ಧನು ರಾಶಿ (Dhanu)

ತಪ್ಪು ಆಹಾರ ಸೇವನೆ ವಿಧಾನ ಹಾಗೂ ವಾತಾವರಣ ಬದಲಾವಣೆ ಸಮಸ್ಯೆಯಿಂದ ನೀವು ಸಮಸ್ಯೆಯನ್ನು ಎದುರಿಸಬಹುದು. ಮಾನಸಿಕ ಒತ್ತಡವನ್ನು ದೂರವಿಡಲು ನೀವು ಖುಷಿಯಾಗಿರಬೇಕು.

 

ಮಕರ (Makara)

ನೀವು ಪುರಸ್ಕಾರವನ್ನೂ ಪಡೆಯುತ್ತೀರಿ. ಧನಾತ್ಮಕ ಚಿಂತನೆ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇತರ ವ್ಯಕ್ತಿಗಳು ನಿಮ್ಮ ಕೆಲಸದಿಂದ ಮೆಚ್ಚುತ್ತಾರೆ.

 

ಕುಂಭರಾಶಿ (Kumbha)

ನಿಮ್ಮ ದೇಹವನ್ನು ರೋಗಮುಕ್ತವಾಗಿಡಲು ಭಾರೀ ಆಹಾರ ತಿನ್ನುವುದನ್ನು ನಿಲ್ಲಿಸಿ. ಮದ್ಯದಿಂದ ದೂರವಿರುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 

ಮೀನರಾಶಿ (Meena)

ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ನೂತನ ಪರಿಸರದಲ್ಲಿ ಕೆಲಸ ಮಾಡಬೇಕಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top