fbpx
ಮನೋರಂಜನೆ

ನಟ ಹುಚ್ಚ ವೆಂಕಟ್ ಮೇಲಿನ ಹಲ್ಲೆ ಕುರಿತು ಪ್ರಥಮ್ ಹೇಳಿದ್ದೇನು.

ನಟ ಹುಚ್ಚ ವೆಂಕಟ್ ಮೇಲಿನ ಹಲ್ಲೆ ಕುರಿತು ಪ್ರಥಮ್ ಹೇಳಿದ್ದೇನು.

 

 

ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಫೈರಿಂಗ್ ಸ್ಟಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿದ್ದಾಗ ತನ್ನ ಸಹ ಸ್ಪರ್ಧಿ ಮೇಲೆ ಕೈಮಾಡಿ ಔಟ್ ಆಗಿದ್ದ ಹುಚ್ಚ ವೆಂಕಟ್ ಅಥಿತಿಯಾಗಿ ಹೋದಾಗಲೂ ಪ್ರಥಮ್ ಅವರಿಗೆ ಹೊಡೆದು ಬಂದಿದ್ದರು. ಆದರೆ ಈ ಬಾರಿ ಅವರೇ ಏಟು ತಿಂದಿದ್ದಾರೆ.

 

 

ಹುಚ್ಚ ವೆಂಕಟ್ ಮೇಲೆ ಯುವಕನೊಬ್ಬ ಹಲ್ಲೆ ಮಾಡಿರುವ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಊಟ ಮಾಡಲು ಯಶವಂತಪುರದ ಹೋಟೆಲ್ ವೊಂದಕ್ಕೆ ಹುಚ್ಚ ವೆಂಕಟ್ ಹೋಗಿದ್ದಾರೆ. ಊಟ ಮಾಡಿ ವಾಪಸ್ ಬರುತ್ತಿದ್ದ ವೇಳೆ ಅಲ್ಲೇ ಇದ್ದ ಯುವಕರ ಗುಂಪು ವೆಂಕಟ್ ರನ್ನು ಮಾತನಾಡಿಸಿ ರೇಗಿಸಿದ್ದಾರೆ ಬಳಿಕ ಮಾತಿಗೆ ಮಾತು ಬೆಳೆದು ಮಾತು ಗಲಾಟೆಗೆ ತಿರುಗಿ ಇದರಿಂದ ಕೋಪಗೊಂಡ ಯುವಕ ತನ್ನ ಕೈಯಲಿದ್ದ ಹೆಲ್ಮೆಟ್ ನಿಂದ ಹುಚ್ಚ ವೆಂಕಟ್ ತಲೆಗೆ ಹೊಡೆದಿದ್ದಾನೆ.

 

 

ನವೆಂಬರ್ 29 ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಮರಾ ಮುಂದೆ ಎಗರಾಡುವ ಹುಚ್ಚ ವೆಂಕಟ್ ಅಲ್ಲಿ ಯುವಕ ಹೆಲ್ಮೆಟ್ ನಿಂದ ತನ್ನ ತಲೆ ಹೊಡೆಯುತ್ತಿರುವಾಗಲೂ ಏನೂ ಮಾತನಾಡದೆ ಸುಮ್ಮನೆ ನಿಂತಿದ್ದರು. ಈ ಘಟನೆ ಹತ್ತಿರದ ನಿವಾಸಿಯೊಬ್ಬರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ಸಂಭಂದ ಇದುವರೆಗೆ ಎಲ್ಲೂ ದೂರು ದಾಖಲೆಯಾಗಿಲ್ಲ.

 

 

ಈ ಬಗ್ಗೆ ಬಿಗ್ಗ್ ಬಾಸ್ ಸೀಸನ್ 4 ವಿಜೇತ ಪ್ರಥಮ್ ಪ್ರತಿಕ್ರಿಯೆ ನೀಡಿದ್ದು “ಯಾವುದೇ ಕಾರಣಕ್ಕೂ ಯಾರ ಮೇಲಿಯೂ ಕೈಯೆತ್ತಬೇಡಿ. ದ್ವೇಷವಿದ್ದರೆ ಕೂತು ಮಾತಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಧೈರ್ಯದಿಂದಿರಿ, ತಾಳ್ಮೆ ಕಳೆದುಕೊಳ್ಳಬೇಡಿ. ಗಲಾಟೆಗಳನ್ನ ಆದಷ್ಟು ನಿಲ್ಲಿಸಿ ” ಎಂದು ಪ್ರಥಮ್ ವೆಂಕಟ್’ರಿಗೆ ಖಾಸಗಿ ಚಾನೆಲ್ ಗೆ ಕರೆ ಮಾಡಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top