ಭವಿಷ್ಯ

ಒಂದೇ ರಾಶಿಯವರು ಮದುವೆಯಾದರೆ ಅವರ ಜೀವ ಹೇಗಿರುತ್ತದೆ ಎಂಬ ಕುತೂಹಲವಿದೆಯೇ ಹಾಗಾದರೆ ಮುಂದೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದೇ ರಾಶಿಯವರು ಮದುವೆಯಾದರೆ ಏನಾಗುತ್ತದೆ. ನಿಮಗೆ ಗೊತ್ತಾ  ?

 

ಮೇಷ ರಾಶಿಯವರು ಮೇಷ ರಾಶಿಯವರನ್ನು ಮದುವೆಯಾದರೆ ….

 

 

ಈ ರಾಶಿಯವರು ಬಹಳ ಸ್ವಾಭಿಮಾನಿಗಳು ಹಾಗೂ ಹಠದ ಸ್ವಭಾವ ಹೊಂದಿದ ವರಾಗಿರುವುದರಿಂದ ಅದೇ ಸ್ವಭಾವದವರ ಜೊತೆಗೆ  ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸಂಬಂಧ ಮುಂದುವರಿಸಲು ಇವರು ಪರಸ್ಪರ ಜಗಳ ಹಾಗೂ ವೈಮನಸ್ಸು ಉಂಟಾದಾಗ ಇಬ್ಬರಲ್ಲೂ ಇರುವ ಹಠ ಮತ್ತು ಸ್ವಾಭಿಮಾನದಿಂದ ಇಬ್ಬರ ನಡುವೆ ಪ್ರೇಮ ಹಾಗೂ ಪ್ರೀತಿ ಹುಟ್ಟುವುದಿಲ್ಲ. ಬದಲಾಗಿ ನಿರಂತರ ಅನಗತ್ಯ ಮುನಿಸು ಅಥವಾ ಜಗಳ ಮುಂದುವರಿಯುವುದು .

ವೃಷಭ ರಾಶಿಯವರು ವೃಷಭ ರಾಶಿಯವರೊಂದಿಗೆ ….

 

 

ಈ ರಾಶಿಯವರು ಉತ್ತಮ ಹೊಂದಾಣಿಕೆ ಕಾಣಬಹುದು. ಒಂದೇ ದಿಕ್ಕಿನ ಯೋಚನೆ ಕಲ್ಪನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಅಡುಗೆ ಕ್ರೀಡೆಗಳ೦ತಹ ಸ್ವಭಾವವು ಪರಸ್ಪರ ಪ್ರೀತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಇವರಲ್ಲಿ ಇರುವ ಸಮತೋಲನದ ಕಾರ್ಯಗಳು ಈ ಸಂಬಂಧವನ್ನು ಉತ್ತಮ ಯಶಸ್ಸಿಗೆ ಕೊಂಡೊಯ್ಯುವುದು.

 

ಮಿಥುನ ರಾಶಿಯವರು ಮಿಥುನ ರಾಶಿಯವರೊಂದಿಗೆ…..

 

ಈ ರಾಶಿಯವರು ಒಂದೇ ರಾಶಿಯವರನ್ನು ವಿವಾಹವಾದರೆ ಯಾವುದೇ ರೀತಿಯ ಬೇಸರವನ್ನು ಅನುಭವಿಸುವುದಿಲ್ಲ. ಇಬ್ಬರಲ್ಲೂ ಸ್ಥಿರತೆ ಇರುವುದರಿಂದ ಪರಸ್ಪರವಾಗಿ ಸಂಬಂಧವನ್ನು ಗೌರವಿಸುತ್ತಾರೆ. ಇಬ್ಬರಲ್ಲಿ ಒಬ್ಬರ ಬೇಸರದಿಂದ ಮುಖ ತಿರುಗಿಸಿ ಕೊಂಡರೆ ಇನ್ನೊಬ್ಬರ ಭಾವನೆ ಹಾಗೂ ವಾತ್ಸಲ್ಯದ ಗುಣ ಅವರ ಸಿಟ್ಟನ್ನು ತಗ್ಗಿಸುವುದು ಹಾಗಾಗಿ ದಾಂಪತ್ಯವೂ ಸುಖಕರವಾಗಿರುವುದು.

 

 ಕಟಕ ರಾಶಿಯವರು ಕಟಕ ರಾಶಿಯವರೊಂದಿಗೆ ….

 

ಇಬ್ಬರಲ್ಲೂ ಸೂಕ್ಷ್ಮ ಹಾಗೂ ಪೋಷಣೆಯ ಸ್ವಭಾವ ಇರುವುದರಿಂದ ಸಂಬಂಧ ಉತ್ತಮವಾಗಿ ಇರುವುದು ಎಂದು ಹೇಳಬಹುದು. ಈ ರಾಶಿಯವರು ಹೆಚ್ಚು  ಭಾವಾವೇಶದಿಂದ ವರ್ತಿಸುತ್ತಾರೆ. ಅದಕ್ಕಾಗಿ ಅವರು ಪರಸ್ಪರ ಸಹನೆ ಹಾಗೂ ಹೊಂದಾಣಿಕೆಯ ಗುಣವನ್ನು ಅಳವಡಿಸಿಕೊಳ್ಳಬೇಕು. ಈ ಗುಣವು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ತಿರುಗಬಹುದು. ಅದಕ್ಕಾಗಿ ಎಚ್ಚರಿಕೆಯಿಂದ ಇರಬೇಕಾಗುವುದು ಎಂದು ಹೇಳಲಾಗುತ್ತದೆ.

 

 ಸಿಂಹ ರಾಶಿಯವರು ಸಿಂಹ ರಾಶಿಯವರೊಂದಿಗೆ….

 

ಈ ರಾಶಿಯವರು ಬಹಳ ಸಿಟ್ಟು ಹಾಗೂ ಉದ್ವೇಗದ ಗುಣವನ್ನು ಹೊಂದಿರುತ್ತಾರೆ. ಇವರ ವಿವಾಹ ಸಂಬಂಧದಲ್ಲಿ ಏನಾಗಬಹುದು ಎಂದು ಊಹಿಸಲು ಸ್ವಲ್ಪ ಕಷ್ಟ ಎಂದೇ ಹೇಳಬಹುದು. ಯಾರಿಗೆ ಮೊದಲು ಕೋಪ ಬರುವುದು ಎಂದು ಅಂದಾಜಿಸಲಾಗುವುದಿಲ್ಲ. ಪ್ರೀತಿ ಹೊಂದಾಣಿಕೆಯಲ್ಲಿ ಹಾಗೂ ಮನೋಭಾವದ ಸಮಾನತೆಯಿಂದ ಉತ್ತಮ ಹೊಂದಾಣಿಕೆ ಹಾಗೂ ಗೌರವದಿಂದ ದಾಂಪತ್ಯ ನಡೆಸುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಬಹುದು.

 

 ಕನ್ಯಾ ರಾಶಿಯವರು ಕನ್ಯಾ ರಾಶಿಯವರೊಂದಿಗೆ……

 

ಇವರು ಪರಸ್ಪರ ಒಬ್ಬರಿಗೊಬ್ಬರು ಸೃಷ್ಟಿ ಆಗಿರುವಂತೆ ಇರುತ್ತಾರೆ. ಪರಸ್ಪರ ಆಕರ್ಷಣೆಯಾಗಿ ಪ್ರೀತಿ ವಿಶ್ವಾಸ ನಿಸ್ವಾರ್ಥ ಹೊಂದಾಣಿಕೆ ಹೀಗೆ ಎಲ್ಲಾ ಗುಣಗಳು ಹೊಂದಾಣಿಕೆಯಾಗುತ್ತವೆ  ಹಾಗೂ ಗೌರವದಿಂದ ಜೀವನ ನಡೆಸುತ್ತಾರೆ. ಇಬ್ಬರೂ ಪರಸ್ಪರ ಒಟ್ಟಿಗೆ ಇರಲು ಇಷ್ಟಪಡುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಆಧಾರ ಸ್ತಂಭವಾಗಿ ನಿಲ್ಲುತ್ತಾರೆ ಎಂದು ಹೇಳಬಹುದು.

 

 ತುಲಾ ರಾಶಿಯವರು ತುಲಾ ರಾಶಿಯವರೊಂದಿಗೆ……

 

ಇಬ್ಬರೂ ಪರಸ್ಪರ ನ್ಯೂನ್ಯತೆಯನ್ನು ಸ್ವೀಕರಿಸಲು ಮತ್ತು ತಮ್ಮಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಂಡರೆ ಮಾತ್ರ ದಾಂಪತ್ಯ ಜೀವನವು ಸುಂದರವಾಗಿರುತ್ತದೆ. ಪರಸ್ಪರ ಸಾಮರಸ್ಯವನ್ನು ಹಂಬಲಿಸುತ್ತಾರೆ. ಆದರೂ ಪ್ರೀತಿಯನ್ನು ತೋರಿಸಿ ಕೊಳ್ಳದಿದ್ದರೆ ಚಂಡಮಾರುತದಂತೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

 

 ವೃಶ್ಚಿಕ ರಾಶಿಯವರು ವೃಶ್ಚಿಕ ರಾಶಿಯವರೊಂದಿಗೆ……

 

ಇವರು ಪರಸ್ಪರ ನಿಗೂಢವಾದ ಹಾಗೂ ಭಾವೋದ್ರೇಕದ  ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಇಬ್ಬರಲ್ಲೂ ಆತ್ಮೀಯತೆಯನ್ನು ಕಂಡುಕೊಳ್ಳುತ್ತಾರೆ. ಆದರೆ ನಂಬಿಕೆಯ ಸಮಸ್ಯೆ ಸಂಶಯ ಗುಣಗಳು ಹೆಚ್ಚಾಗಿರುವುದರಿಂದ ಈ ರಾಶಿಯವರಲ್ಲಿ ಪರಸ್ಪರ ಜಗಳ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇವರ ಪ್ರೀತಿಯೂ ಅಸ್ಪಷ್ಟ ಮತ್ತು ತಡವಾಗಿರುತ್ತದೆ.

 

ಧನಸ್ಸು ರಾಶಿಯವರು ಧನಸ್ಸು ರಾಶಿಯವರೊಂದಿಗೆ……

 

ಆರೋಗ್ಯಕ್ಕೆ ಪೈಪೋಟಿಯಿಂದ ಪರಸ್ಪರ ಒಬ್ಬರನ್ನೊಬ್ಬರು ಆನಂದದಿಂದ ನೋಡಿಕೊಳ್ಳುತ್ತಾರೆ. ಪರಸ್ಪರ ವಿರೋಧವಾದ ಅಭಿಪ್ರಾಯವನ್ನು ಹೊಂದಿದ್ದರೂ ಸಹ ಆರೋಗ್ಯಕರವಾದ  ಹಾಗೂ ತುಂಬು ಮನಸ್ಸಿನ ಮನೋಭಾವದಿಂದ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಆದರೆ ಪರಸ್ಪರ ಸ್ವತಂತ್ರವಾಗಿರಬೇಕು ಎನ್ನುವ ಭಾವನೆ ಸಂಬಂಧವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಾಗಿ ಇದೆ.

 

ಮಕರ ರಾಶಿಯವರು ಮಕರ ರಾಶಿಯವರೊಂದಿಗೆ……

 

ಇವರು ಪರಸ್ಪರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಕೆಲಸದ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಪ್ರಶಂಸಿಸುತ್ತಾರೆ. ಸಂಬಂಧ ಕ್ರಮೇಣ ಹಂಚಿಕೆಯ ಗುಣ ಹಾಗೂ ಆಳವಾದ ಬಾಧ್ಯತೆಯಿಂದ ಸೃಷ್ಟಿಸುತ್ತದೆ. ಇವರಲ್ಲಿ ವೈಯಕ್ತಿಕ ಆಕಾಂಕ್ಷೆಗಳನ್ನು ಹಸ್ತಕ್ಷೇಪ ಮಾಡುವುದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಎದುರಾಗಬಹುದು.

 

 ಕುಂಭ ರಾಶಿಯವರು ಕುಂಭ ರಾಶಿಯವರೊಂದಿಗೆ…..

 

ಇವರಿಗೆ ಪರಸ್ಪರ ಆಧ್ಯಾತ್ಮಿಕ ಶಕ್ತಿಯಿಂದ ಅರಿತುಕೊಳ್ಳಲು ಕಷ್ಟವಾಗುವುದು. ಇವರ ಉದಾರ ಗುಣದವನ್ನು  ಹೊಂದಿದವರಾಗಿದ್ದರೂ ಸಹ ಇವರಲ್ಲಿರುವ ಭಾವೋದ್ವೇಗಗಳು ಪರಸ್ಪರ ಮನಸ್ಥಿತಿಯ ಬದಲಾವಣೆಯ ಸಂಬಂಧವನ್ನು ಅಲುಗಾಡಿಸಬಹುದು. ಕೆಲವು ನಕಾರಾತ್ಮಕ ಗುಣವೂ ಒಂದೇ ಬಗೆಯಲ್ಲಿ ಇರುವುದರಿಂದ ಹೊಂದಾಣಿಕೆ ಕಷ್ಟವಾಗಬಹುದು.

 

 ಮೀನ ರಾಶಿಯವರು ಮೀನ ರಾಶಿಯವರೊoದಿಗೆ …….

 

 

 ಇವರ ಸಂಬಂಧದಲ್ಲಿ ದೂರ ದೃಷ್ಟಿಯಿರುವುದರಿ೦ದ  ಒಟ್ಟಿಗೆ ಕನಸು ಕಾಣಬಹುದು. ಪರಸ್ಪರ ಪ್ರೀತಿ ,ವಿಶ್ವಾಸ ತೋರುತ್ತದೆಯಾದರೂ ಕೆಲವೊಮ್ಮೆ ಮುನಿಸು ಮತ್ತು ಜಗಳದಿ೦ದ ಗಂಭೀರ ಸ್ಥಿತಿಗೆ ತಲುಪಬಹುದು. ಇಬ್ಬರು ವಿಶ್ರಾಂತಿ ಹೊಂದುವುದನ್ನು ಬಯಸುವುದಿಲ್ಲ. ಆದ್ದರಿಂದ ಎಲ್ಲಾ ಕೆಲಸವನ್ನು ಸುಗಮವಾಗಿ ನಡೆಸಬಲ್ಲರು. ಆದರೂ ಇವರ ಸಂಬಂಧಗಳು ಹೀಗೆ ಎಂದು ಹೇಳಲು ಸ್ವಲ್ಪ ಕಷ್ಟವಾಗಬಹುದು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top