ದೇವರು

ಡಿಸೆಂಬರ್ 3 ನೇ ತಾರೀಖು ಮಾರ್ಗಶಿರ ಮಾಸದ ಪೌರ್ಣಮಿಯ ದಿನ ಮತ್ತು ದತ್ತಾತ್ರೇಯ ಜಯಂತಿ ಯಾವ ರೀತಿ ಆಚರಣೆ ಮಾಡಿದರೆ ಪುಣ್ಯ ಲಭಿಸುವುದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಡಿಸೆಂಬರ್ 3 ತಾರೀಖು ಮಾರ್ಗಶಿರ ಮಾಸದ ಪೌರ್ಣಮಿಯ ದಿನ ಮತ್ತು ದತ್ತಾತ್ರೇಯ ಜಯಂತಿ.

 

ಹಿಂದೂ ಪುರಾಣಗಳ ಪ್ರಕಾರ ಮಾರ್ಗಶಿರ ಮಾಸದ ಪೌರ್ಣಮಿಯ ದಿನವನ್ನು ದತ್ತಾತ್ರೇಯ ಜಯಂತಿಯೆಂದು ಆಚರಿಸಲಾಗುತ್ತದೆ.

ಡಿಸೆಂಬರ್ 3 ನೇ ತಾರೀಖು ಶುಕ್ಲ ಪಕ್ಷದ,ಮಾರ್ಗಶಿರ ಮಾಸದ, ಕೃತಿಕಾ ನಕ್ಷತ್ರದ 4 ನೀ ಪಾದ ಮತ್ತು ರೋಹಿಣಿ ನಕ್ಷತ್ರಗವು ಇದ್ದು, ಜೊತೆಗೆ ಸೂರ್ಯನ ದಿನವಾದ ರವಿವಾರವೇ  ಪೌರ್ಣಮಿ ಮತ್ತು ದತ್ತಾತ್ರೇಯ ದೇವನ ಜಯಂತಿ ಬಂದಿರುವುದು ಬಹಳ ವಿಶೇಷವಾಗಿದೆ.

 

 

ದತ್ತ ದೇವರು ಎಂದರೆ ಯಾರು ?

ದತ್ತ ದೇವರು  ಎಂದರೆ ತ್ರಿಮೂರ್ತಿಗಳ ಸ್ವರೂಪವಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮೂರು ಶಕ್ತಿಗಳ ಸಮ್ಮಿಲನವಾದ  ದೇವನೆ ದತ್ತಾತ್ರೇಯ ದೇವನು.

ದತ್ತ ದೇವರ ತಂದೆ ತಾಯಿ ಯಾರು ?

ದತ್ತ ದೇವನ ತಂದೆ ಋಷಿ ಮುನಿಗಳಾದ ಅತ್ರಿಯವರು ಮತ್ತು ತಾಯಿ ಅನುಸೂಯ ದೇವಿ.

ದತ್ತ ದೇವನ ಜೊತೆಗೆ ಸಾಮಾನ್ಯವಾಗಿ ನಾಲ್ಕು ನಾಯಿಗಳು ಜೊತೆಯಲ್ಲಿ ಇರುತ್ತವೆ.ದತ್ತ ದೇವನ ವಾಹಣವೂ ಸಹ ಶ್ವಾನವೇ ಎಂದು ಹೇಳಬಹುದು.ದತ್ತ ದೇವರಿಗೆ ಮೂರು ತಲೆಗಳು  ಮತ್ತು  ಮೂರು ಮುಖವನ್ನು ಹೊಂದಿದ್ದಾನೆ.  ಮೊದಲನೇ ತಲೆ ಮತ್ತು ಮುಖ ಬ್ರಹ್ಮ ದೇವನದ್ದು,ಎರಡನೇ ತಲೆ ವಿಷ್ಣು ದೇವನದು ಮತ್ತು ಮೂರನೆಯದು ಶಿವನದ್ದು.

ದತ್ತ ದೇವನ ಕೈಯಲ್ಲಿ ಹಿಡಿದುಕೊಂಡಿರುವ ವಸ್ತುಗಳ ಮಹತ್ವ ಹಾಗೂ  ಪ್ರಾಮುಖ್ಯತೆ.

 

ಶಂಖ.

ಶಂಕ ಇದು ದೈವಿಕ ದ್ವನಿಯನ್ನು ಹೊರ ಹೊಮ್ಮಿಸುತ್ತದೆ.ಅಜ್ಞಾನವನ್ನು  ಹೊರದೋಡಿಸಿ, ಆಧ್ಯಾತ್ಮಿಕ ವಿವರಣೆಯನ್ನು ಸಹ ಕೊಡುತ್ತದೆ.

ಚಕ್ರ.

ಚಕ್ರ ಸಮಯವನ್ನು ಸೂಚಿಸುತ್ತದೆ. ಜೀವನದ ಒಳ್ಳೆಯ ಮತ್ತು ಕೆಟ್ಟ ಸಮಯಗಳ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ.

ತ್ರಿಶೂಲ.

ಇದು ಆಧ್ಯಾತ್ಮಿಕತೆ ಮತ್ತು ಜೀವನದಲ್ಲಿ ಸಮತೋಲನೆಯ ಕಾರ್ಯವನ್ನು  ನಿರ್ವಹಿಸುತ್ತದೆ.ಇದು ಮೂರು ಶಕ್ತಿಗಳ ಶಕ್ತಿಯನ್ನು ಪ್ರತಿನಿಧಿಸುತ್ತದೆ.

ಡಮರುಗ.

ಡಮರುಗ ಪ್ರೀತಿ, ಹೆಮ್ಮೆ ಮತ್ತು ಸಹಾನುಭೂತಿಯ ಭಾವನೆಯೊಂದಿಗೆ ಜೀವನವನ್ನು ಸೂಚಿಸುತ್ತದೆ.

ಕಮಂಡಲ.

ಕಮಂಡಲದೊಳಗೆ ನೀರು ತುಂಬಿರುತ್ತದೆ. ದತ್ತ ದೇವನು ವಾಸ್ತವವಾಗಿ ಭೂಮಿಯ ಮೇಲಿನ ಜೀವನದ ಸಂಕೇತವಾಗಿದೆ.

ಭಿಕ್ಷಾಟನೆಯ ಬಟ್ಟಲು.

ಭಿಕ್ಷಾಟನೆಯ ಬಟ್ಟಲು ವ್ಯಕ್ತಿಯು ತನ್ನ ಜೀವನದಲ್ಲಿ ಅಹಂಕಾರ ಮತ್ತು ದುಷ್ಟ ಶಕ್ತಿಗಳಿಂದ ಮುಕ್ತವಾಗಿರಬೇಕು ಎಂದು ಸೂಚಿಸುತ್ತದೆ.

 

 

ದತ್ತ ದೇವರ 6 ಕೈಗಳಲ್ಲಿ ಇರುವ 6 ವಸ್ತುಗಳು ಸಹ ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ತಿಳಿಸಿಕೊಡುತ್ತವೆ.ಇವೆಲ್ಲವುಗಳನ್ನು ತಿಳಿದು ನೆಡೆದರೆ ನಮ್ಮ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ,ಸಂತೋಷ,ಆರೋಗ್ಯ,ಐಶ್ವರ್ಯ ಮತ್ತು ಸಮಸ್ಯೆಗಳಿಂದ ಜೀವನದಲ್ಲಿ ಮುಕ್ತಿ ದೊರೆಯುವುದು.

ದತ್ತ ಹೆಸರಿನ ಅರ್ಥ.

ನಿರಪರಾಧಿ ( ನಿರ್ಗುಣ) ಮತ್ತು ಅನುಭೂತಿಯ (ಆಧ್ಯಾತ್ಮಿಕ ಅನುಭವ) ಗುಣ ಇರುವವರನ್ನು ದತ್ತ ಎಂದು ಕರೆಯಲಾಗುತ್ತದೆ.

ದತ್ತ ದೇವನಿಗೆ ಉದುಬತ್ತಿ,ಧೂಪ,ದೀಪ,ಅರಿಶಿಣ, ಕುಂಕುಮ,ಶ್ರೀಗಂಧ ಮತ್ತು ಹೂವುಗಳಾದ ಸುಗಂಧ ರಾಜ ಮತ್ತು ಜಾಜಿ ಮಲ್ಲಿಗೆಯನ್ನು ಅರ್ಪಿಸಬೇಕು.ಹೂವಿನ ಸಂಖ್ಯೆ 7 ಇರಬೇಕು ಅಂದರೆ ಬೆಸ ಸಂಖ್ಯೆಯಲ್ಲಿಯೇ  ಇರಬೇಕು.ಈ ಎರಡು ಹೂವುಗಳು ವಿಶೇಷವಾಗಿ ದತ್ತ ದೇವನ ತತ್ವವನ್ನು ಆಕರ್ಷಿಸುವ ಗುಣವನ್ನು ಹೊಂದಿವೆ.ಪೂಜೆಯೆಲ್ಲವೂ ಮುಗಿದ ನಂತರ 7 ಸುತ್ತು ಪ್ರದಕ್ಷಿಣೆಯನ್ನು ಹಾಕಬೇಕು.ನಂತರ ಈ ಮಂತ್ರವನ್ನು ಜಪಿಸಬೇಕು.

“ಓಂ ಶ್ರೀ ಗುರುದೇವ ದತ್ತ ನಮಃ” ಎಂದು ಜಪಿಸಬೇಕು.

ಹೀಗೆ ಪೌರ್ಣಮಿಯ ದಿನವಾದ ಭಾನುವಾರ ದತ್ತಾತ್ರೇಯ ದೇವನಿಗೆ ಭಕ್ತಿ,ಶ್ರದ್ಧೆಯಿಂದ ಪೂಜೆ ಸಲ್ಲಿಸಿದರೆ ಸಕಲ ಸಂಪತ್ತು,ಸಮೃದ್ಧಿ, ಆರೋಗ್ಯ,ಧನ ಪ್ರಾಪ್ತಿ ಎಲ್ಲವೂ ಲಭಿಸುತ್ತದೆ.ಹಾಗೆ ಅತೃಪ್ತ ಪಿತೃಗಳ  ಆತ್ಮಗಳಿಗೆ ಮುಕ್ತಿ ಕೂಡ ಲಭಿಸುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top