ಆರೋಗ್ಯ

ತಲೆ ಕೂದಲು ಉದುರೋದು ನಿಂತು ನೈಸರ್ಗಿಕವಾಗಿ ಸೊಂಪಾದ ಕೂದಲು ಬೇಕು ಅಂದ್ರೆ ಈ 18 ಸಲಹೆಗಳು ಪಾಲಿಸಿ ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಲೆ ಕೂದಲಿನ ಸಂರಕ್ಷಣೆಗೆ  ಸಲಹೆಗಳು.

ತಲೆ ಕೂದಲು ಯಾರಿಗೆ ಇಷ್ಟವಿಲ್ಲ ಎಲ್ಲರಿಗೂ ಇಷ್ಟ ಅದರಲ್ಲೂ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ತಲೆ ಕೂದಲಿನಿಂದಲೇ ಅವರ ಅಂದ ಹೆಚ್ಚುವುದು. ಕೂದಲಿನ ಅಂದವನ್ನು ಹೆಚ್ಚಿಸಲು ಇಲ್ಲಿವೆ ಸರಳವಾಗಿ ಮನೆಯಲ್ಲಿಯೇ ಮಾಡಿಕೊಳ್ಳುವಂತಹ  ಸಲಹೆಗಳು

ಯಾವತ್ತೂ ಕೂಡ ಒದ್ದೆ ತಲೆ ಬಾಚಬೇಡಿ .

ಹೆಚ್ಚು ಬಿಸಿಲು ಅಥವಾ ಹೇರ್ ಡ್ರೈಯರನಿಂದ ತಲೆಕೂದಲನ್ನು ಒಣಗಿಸಬೇಡಿ.

ಹೊರಗಡೆ ಗಾಳಿಯಲ್ಲಿ ಹೋಗಿ ಬಂದ ನಂತರ, ರಾತ್ರಿ ಮಲಗುವಾಗ ಕೂದಲನ್ನು ಬಿಚ್ಚಿ ಹಾಗೆ ಬಿಡಬೇಡಿ,ಮಲಗುವಾಗ ತುದಿಯವರೆಗೂ ಜಡೆ ಹಣೆಯಿರಿ.

ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

ಜಡೆಗೆ ಹಾಗೂ ಕೂದಲಿನ ಬುಡಕ್ಕೆ ಬಿಗಿಯಾದ ರಬ್ಬರ್ ಬ್ಯಾಂಡ್ ಹಾಕಬೇಡಿ;ಇದರಿಂದ ಕೂದಲು ತುಂಡಾಗುತ್ತದೆ.

ನಾಟಿ ಕರಿಬೇವು, ದಾಸವಾಳ, ಹಾಗೂ ಪಾರಿಜಾತ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲಿನ ಕಾಂತಿ ಹೆಚ್ಚುವುದು.

ಒಂದು ಬಟ್ಟಲು ಮೆಹಂದಿ ಪುಡಿಯನ್ನು ಮೂರು ಭಾಗ ಬಿಳಿ ವಿನೆಗರ್, ಕಾಲು ಭಾಗ ನೀರು ಹಾಗೂ ಎರಡು ಭಾಗ ಮೊಸರು, ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಕಲೆಸಿ ತಲೆಗೆ ಹಚ್ಚಬೇಕು. ಮಿಶ್ರಣವನ್ನು ಆರು ಗಂಟೆ ಮುಂಚೆ ಕಲೆಸಿ ನಂತರ ಉಪಯೋಗಿಸಿ.

ಬಿಲ್ವ ಪಾತ್ರೆಯ ಕಾಯಿಯನ್ನು ಒಡೆದು ಅದರ ಒಳಭಾಗದ ಮಿಶ್ರಣವನ್ನು ಚೆನ್ನಾಗಿ ಬೇಯಿಸಿ ತಲೆಗೆ ಹಚ್ಚುವುದರಿಂದ ಕೂದಲಿಗೆ ವಿಶೇಷ ಒಳಪು ಬರುವುದು.

ಮೆಹೆಂದಿ ಸೊಪ್ಪನ್ನು ನೇರವಾಗಿ ಬಳಸುವ ಬದಲು ಬಿಳಿ ವಿನೆಗರ್ ಅಥವಾ ಬಿಯರನಿಂದ ಕಲಕಿ ಹಾಕುವುದರಿಂದ ಕೂದಲಿನ ಹೊಳಪು ಮತ್ತು ಕಾಂತಿ ಹೆಚ್ಚುತ್ತದೆ.

ಮೆಹೆಂದಿ ಸೊಪ್ಪನ್ನು ಮಾತ್ರ ನೇರವಾಗಿ ಬಳಸುವುದಾದರೆ ಮೊದಲು ನೀರಿನಲ್ಲಿ ನೆನೆ ಹಾಕಿ ನಂತರ ಉಪಯೋಗಿಸಿ.

ಮೆಹೆಂದಿಯ ಜೊತೆ ಸೀಗೇಕಾಯಿ ,ನೆಲ್ಲಿಕಾಯಿ, ದಾಸವಾಳದ ಎಲೆ ಮತ್ತು ಕರಿಬೇವುಗಳನ್ನು ಮಿಶ್ರಣ ಮಾಡಿ ಇದರಿಂದ ನಿಮ್ಮ ಕೂದಲನ್ನು ತೊಳೆಯಿರಿ ಅಥವಾ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.

ಬೇಸಿಗೆ ಕಾಲದಲ್ಲಿ ಕೂದಲಿನ ಬೆವರಿನ ವಾಸನೆ ತಡೆಯಲು ಆಗಾಗ ಸ್ವಲ್ಪ ಮೆಹೆಂದಿ ಹಚ್ಚಿ ಸ್ನಾನ ಮಾಡಿ.

ಕೂದಲಿನ ಬೆಳವಣಿಗೆಗೆ ಆಗಾಗ ಕವಲುಗಳಿಗೆ ಕತ್ತರಿಯಿಂದ ಕತ್ತರಿಸುವುದರಿಂದ ಕೂದಲಿನ ಬೆಳವಣಿಗೆ ಸಾಧ್ಯ.

ಕರಿಬೇವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಸ್ವಲ್ಪ ಉರಿದು ಪುಡಿಮಾಡಿ ಕಾದಿರುವ ಕೊಬ್ಬರಿ ಎಣ್ಣೆಗೆ ಬೆರೆಸಿ,ರಾತ್ರಿ ಮಲಗುವ ಮೊದಲೇ ತಲೆಯ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ಇದರಿಂದ ಕೂದಲಿನ ಕಾಂತಿ ವೃದ್ಧಿಸುವುದು.

ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಿಳಿ ದಾಸವಾಳದ ಹೂಗಳನ್ನು ಕಿವುಚಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಸಂರಕ್ಷಣೆ ದೊರೆಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top