ರಾಜಕೀಯ

ಅಪ್ಪಾಜಿ, ಇಂದಿರಾ ಕ್ಯಾಂಟೀನ್ ಆಯ್ತು ಮಂಡ್ಯದಲ್ಲಿ ಈಗ ತಲೆ ಎತ್ತಿದೆ ರಮ್ಯಾ ಕ್ಯಾಂಟೀನ್.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅಪ್ಪಾಜಿ, ಇಂದಿರಾ ಕ್ಯಾಂಟೀನ್ ಆಯ್ತು ಮಂಡ್ಯದಲ್ಲಿ ಈಗ ತಲೆ ಎತ್ತಿದೆ ರಮ್ಯಾ ಕ್ಯಾಂಟೀನ್.

 

 

ರಾಜ್ಯದಲ್ಲಿ ಈಗ ಕ್ಯಾಂಟೀನ್ ರಾಜಕೀಯ ಜೋರಾಗಿದೆ ಕಾಂಗ್ರೆಸ್ ನಿಂದ ಇಂದಿರಾ ಕ್ಯಾಂಟೀನ್​, ಜೆಡಿಎಸ್ ನಿಂದ ಅಪ್ಪಾಜಿ ಕ್ಯಾಂಟೀನ್​ ಆರಂಭಿಸಿದಂತೆ ಮುತ್ತಪ್ಪ ರೈಯವರ ಅಣ್ಣ ಕ್ಯಾಂಟೀನ್ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರಲ್ಲಿ ಸ್ವಾಮಿ ಕ್ಯಾಂಟೀನ್ ಕೂಡಾ ಶುರುವಾಗಿತ್ತು ಈಗ ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ.

 

 

ರಘು ಎಂಬ ರಮ್ಯಾ ಅಭಿಮಾನಿ ಈ ಕ್ಯಾಂಟೀನ್ ಅನ್ನು ಆರಂಭಿಸಿದ್ದು ಕೇವಲ ಹತ್ತು ರೂಪಾಯಿಗೆ ಊಟ ತಿಂಡಿ ನೀಡಲು ಮುಂದಾಗಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಮಂಡ್ಯದ ರಸ್ತೆಬದಿಯಲ್ಲಿ ಹೋಟೆಲ್​ ನಡೆಸುತ್ತಿದ್ದಾರೆ ಇವರು ರಮ್ಯಾ ಅವರ ಅಭಿಮಾನಿಯಾಗಿದ್ದು ಅವರ ಹೆಸರಿನಲ್ಲಿ ಜನಸೇವೆ ಮಾಡಲು ರಮ್ಯಾ ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಿದ್ದಾರೆ.

 

 

ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿವ ಈ ಕ್ಯಾಂಟೀನ್’ನಲ್ಲಿ ಮಸಾಲೆ ದೋಸೆ, ಸೆಟ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಗಳು, ಇಡ್ಲಿ, ವಡೆ, ಮುದ್ದೆ, ರೈಸ್ ಬಾತ್, ಅನ್ನ, ಸಾಂಬಾರು, ರಾಗಿ ಗಂಜಿ,ರವೆ ಇಡ್ಲಿ ಸೇರಿದಂತೆ ಹಲವಾರು ಸ್ವಾದಿಷ್ಟ ಆಹಾರಗಳು ರಮ್ಯಾ ಕ್ಯಾಂಟೀನ್ ನಲ್ಲಿದೆ. ರಮ್ಯಾ ಅವರು ಸಂಸದರಾಗಿದ್ದ ವೇಳೆ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರು. ಹಳ್ಳಿ ಹಳ್ಳಿಗಳಿಗೆ ಭೇಟಿ ಮಾಡಿ ಜನರ ಕಷ್ಟಗಳನ್ನ ಕೇಳಿದ್ದರು ಹಾಗಾಗಿ ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸುತ್ತಿರುವುದಾಗಿ ರಘು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top