fbpx
ಭವಿಷ್ಯ

ವಾರ ಭವಿಷ್ಯ ಡಿಸೆಂಬರ್ 3 ನೇ ತಾರೀಖಿನಂದ 9 ನೇ ತಾರೀಖಿನವರೆಗೆ.

 

ಮೇಷ (Mesha)

 

 

ಪ್ರತಿಯೊಂದನ್ನು ವಿಭಿನ್ನ  ರೀತಿಯಲ್ಲಿ ಯೋಚಿಸುವ ನಿಮಗೆ ಮೇಲಧಿಕಾರಿಗಳ ಬೆಂಬಲವಿದೆ.ರಚನಾತ್ಮಕ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಹೊಸ ಯೋಜನೆಗಳಿಗೆ ಹಣಕಾಸಿನ ಸಹಾಯ ನಿರಂತರವಾಗಿ ಹರಿದು ಬರಲಿದೆ. ಯಶಸ್ಸು ನಿಮ್ಮ ಬೆನ್ನಿನಲ್ಲಿ  ಇದೆ. ಸಹ ವ್ಯಾಪಾರಿಗಳು ನಿಮ್ಮ ಬಳಿ ಸಲಹೆ ಕೋರಿ ಬಂದಾಗ ಸಹಕರಿಸಿ. ಸಂಗಾತಿಯೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಜಾಣ್ಮೆ ಹಾಗೂ ದಕ್ಷತೆ ನಿಮ್ಮನ್ನು ಲಾಭ ದತ್ತ ಕೊಂಡೊಯ್ಯಲಿದೆ. ಕೆಲಸದ ಒತ್ತಡಗಳನ್ನು  ನಿಭಾಯಿಸಲು ಕಲಿಯಿರಿ.

 

ವೃಷಭ (Vrushabha)

 

ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ನಿಮಗೆ ಇದರ ಪರಿಣಾಮವಾಗಿ ಜವಾಬ್ದಾರಿ ಹೆಚ್ಚಾಗುವುದು. ಅಲ್ಲದೆ ಸಾಮಾಜಿಕವಾಗಿ ಗೌರವ ಕೂಡ ಹೆಚ್ಚಲಿದೆ. ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಸಂಗಾತಿಯಿಂದ ಸಲಹೆ ಸಿಗಲಿದೆ. ಪಾಲುದಾರರೊಂದಿಗೆ ಹೊಸ ಒಡಂಬಡಿಕೆ ಮಾಡಿಕೊಳ್ಳುವುದು ಉತ್ತಮ. ಸಮ ಚಿತ್ತದಿಂದ ಮಾರುಕಟ್ಟೆಯ ಆಗುಹೋಗುಗಳ ಬಗ್ಗೆ ತಿಳಿಯಿರಿ. ಅವಶ್ಯಕತೆಗೆ ತಕ್ಕಷ್ಟು ಸಾಲ ಮಾಡಬೇಕಾಗುವ ಪರಿಸ್ಥಿತಿ ಬರುವುದು. ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಉಪಚಾರದ ಅಗತ್ಯವಿದೆ.

 

ಮಿಥುನ (Mithuna)

 

ಕೆಲಸ ಕಾರ್ಯಗಳಲ್ಲಿ ನಿಶ್ಚಿತ ಆದಾಯ ಬಂದರೂ ಆರ್ಥಿಕ  ಮುಗ್ಗಟ್ಟು ತಪ್ಪಿದ್ದಲ್ಲ. ಹಾಗೆಯೇ ದೇವರ ಕೃಪೆ ನಿಮ್ಮ ಕಡೆಗೆ ಇರುವುದರಿಂದ ಚಿಂತಿಸಬೇಕಿಲ್ಲ. ವಿಷಯಗಳನ್ನು ಪರಾಮರ್ಶಿಸದೆ ವಿಮರ್ಶಿಸಬೇಡಿ. ಮಗನಿಗೆ ವಿದೇಶದಲ್ಲಿ ಅಧ್ಯಯನ  ಮತ್ತು  ಮದುವೆ ಯೋಗವಿದೆ. ಅದಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ಲಭಿಸಲಿವೆ. ಪ್ರಯತ್ನ ಶೀಲರಾದರೆ ನಿಮಗೆ ಯಶಸ್ಸು ನಿಶ್ಚಿತ. ವ್ಯವಹಾರ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ಮತ್ತು ಲಾಭದಾಯಕವಾಗಿ ನಡೆಯಲಿದೆ. ಮಧ್ಯವರ್ತಿಗಳ ಸಹಕಾರದಿಂದ ಮಗಳಿಗೆ ಉತ್ತಮ ಸಂಬಂಧಗಳು ಸಹ ಕೂಡಿ ಬರುತ್ತದೆ.

 

ಕರ್ಕ (Karka)

 

ಪ್ರತಿಯೊಂದನ್ನೂ   ಕೂಡ ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ನಿಮ್ಮ ಸ್ವಭಾವವೇ ಎಲ್ಲರ ಮೆಚ್ಚುಗೆಯನ್ನು ಪಡೆಯಲಿದೆ. ಬರುತ್ತಿರುವ ಆದಾಯದಲ್ಲಿ ಏನೂ ಕೊರತೆ ಕಂಡು ಬರುವುದಿಲ್ಲ. ಆದರೆ ಹಣವನ್ನು ನೀರಿನಂತೆ ಖರ್ಚು ಮಾಡುವುದರಿಂದ ಹಣದ ಉಳಿತಾಯಕ್ಕೆ ಅವಕಾಶವಿರುವುದಿಲ್ಲ. ನಿಮ್ಮ ಶ್ರೇಯಸ್ಸನ್ನು ಸಹಿಸದ ಕೆಲವರು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವರು. ಸ್ವಂತ ಉದ್ಯೋಗಿಗಳಿಗೆ ಹೆಚ್ಚು ಯಶಸ್ಸು ಇದೆ. ಆರೋಗ್ಯದ ಕಡೆ ಅಲಕ್ಷ್ಯ ಬೇಡ.ಗುರುಗಳ ಆರಾಧನೆಯಿಂದ ಒಳ್ಳೆಯದಾಗುವುದು.

 

ಸಿಂಹ (Simha)

 

 

ನಿಮ್ಮ ಬಗ್ಗೆ ಬೇರೆಯವರಿಗೆ ಇರುವ ಭಾವನೆಗಳನ್ನು   ಹಿತಶತ್ರುಗಳು ತಿರುಚಿ ಹೇಳಿ ನಿಮ್ಮ ಸ್ನೇಹಕ್ಕೆ ಹುಳಿ ಹಿಂಡಬಹುದು. ಈ ವಿಷಯದಲ್ಲಿ ಅತಿ ಎಚ್ಚರವಾಗಿರುವ ಅಗತ್ಯವಿದೆ. ಯಾವುದಕ್ಕೂ ನಿಮ್ಮ ಬುದ್ಧಿಯನ್ನು ನಿಮ್ಮ  ಹಿಡಿತದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಮಾನಸಿಕ ಸಮತೋಲನ ಕಾಪಾಡಿಕೊಳ್ಳಿರಿ. ಹೊಸ ಯೋಜನೆಗಳಿಗೆ ಆದಾಯದ ಮೂಲ ಕಂಡುಬರಲಿದೆ. ವೃತ್ತಿಯಲ್ಲಿ ಸದ್ಯಕ್ಕೆ ಬದಲಾವಣೆ ಬೇಡ. ಇರುವ ಕಡೆಯಲ್ಲಿಯೇ ಹೆಚ್ಚಿನ ಸವಲತ್ತುಗಳು ಸಿಗಬಹುದು.ನಿಮ್ಮ ಉತ್ತಮ ಕೆಲಸಗಳಿಗೆ ಗೆಲುವು ಸಿಗಲಿದೆ.

 

ಕನ್ಯಾರಾಶಿ (Kanya)

 

ಬಂಧುಗಳೊಂದಿಗೆ ವಿನಾಕಾರಣ ಕಾಲು ಕೆರೆದುಕೊಂಡು ಜಗಳ ಮಾಡದಿರುವುದೇ ಉತ್ತಮ. ಮಿತ್ರರು ಕೊಡುವ ಸಲಹೆಗಳನ್ನು ವಿಮರ್ಶಿಸಿ ನಿರ್ಣಯ ತೆಗೆದುಕೊಳ್ಳಿ. ಉದ್ಯಮದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಕೆಲವು ಕಾಲ ಮನೆಯಿಂದ ದೂರವಿದ್ದು ವಾಸ ಮಾಡುವ ಯೋಗವಿದೆ. ಬರಲಿರುವ ಸಂತಸದ ಸುದ್ದಿಯಿಂದ ಮನಸ್ಸಿಗೆ ಶಾಂತಿ ಸಿಗುವುದು. ಸದಾಚಾರಗಳಲ್ಲಿ ಪ್ರವೃತ್ತರಾಗುವುದರಿಂದ ಆತ್ಮತೃಪ್ತಿ ಪಡೆಯುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಪ್ರಗತಿ ಉಂಟಾಗುವುದು.

 

ತುಲಾ (Tula)

 

 

ನೀವು ನಡೆಸುತ್ತಿರುವ ಅಥವಾ ನಡೆಸಲಿರುವ ವ್ಯವಹಾರದ ಬಗ್ಗೆ ನಿಮ್ಮ ಮಡದಿ ಮಕ್ಕಳಿಗೆ ತಿಳಿದಿದ್ದರೆ ಉತ್ತಮ.ಸ್ವಂತ ನಿರ್ಧಾರದ ಕೆಲಸಗಳು ಅಪಾಯಕಾರಿ ಎಂಬುದು ನೆನಪಿರಲಿ. ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಸಹನೆಯನ್ನು ರೂಢಿಸಿಕೊಳ್ಳಿ. ವ್ಯಾಪಾರದಲ್ಲಿ ನೀವು ತೋರುವ ಚಾಣಾಕ್ಷತನವನ್ನು ನಿಮ್ಮ ಎದುರಾಳಿಗಳು ಮೆಚ್ಚಿಕೊಳ್ಳುವರು. ಹೊಸ ಯೋಜನೆಗಳಿಗೆ ಭರವಸೆಯ ಮಹಾಪೂರವೇ ಹರಿದು ಬರುವುದು. ಬರಲಿರುವ ಸವಾಲುಗಳನ್ನು  ಎದೆಗುಂದದಂತೆ ಧೈರ್ಯದಿಂದ ಎದುರಿಸಿ.

ವೃಶ್ಚಿಕ (Vrushchika)

 

 

ಇಷ್ಟು ಕಾಲದವರೆಗೆ ಎಲ್ಲವೂ ವ್ಯವಸ್ಥಿತವಾಗಿಯೇ  ನಡೆಯುತ್ತಿದ್ದ ಪಾಲುದಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಹೊಸ ತಿರುವು ಕಂಡುಬರಲಿದೆ. ಆದರೆ ಚಿಂತಿಸಬೇಕಾಗಿಲ್ಲ. ಬದಲಾವಣೆ ಅನಿವಾರ್ಯ ಹಾಗೂ ಅಗತ್ಯ ಎಂಬುದು ನೆನಪಿರಲಿ. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ಸಿಗಲಿದೆ. ಜವಾಬ್ದಾರಿಗಳನ್ನು ಒಪ್ಪಿಕೊಂಡು ನಂತರ ಅದನ್ನು ಆಲಕ್ಷಿಸುವುದಕ್ಕಿಂತ ಒಪ್ಪಿಕೊಳ್ಳುವುದೆ ಇರುವುದೇ ಬುದ್ಧಿವಂತರ ಲಕ್ಷಣ. ಮಾನಸಿಕ ಗೊಂದಲಗಳಿಂದ ಹೊರಬರಲು ಪ್ರಯತ್ನಿಸಿ.ಮುಕ್ತ ಮನಸ್ಸಿನಿಂದ ಮಾತನಾಡಿ.

 

ಧನು ರಾಶಿ (Dhanu)

 

 

ನಿಮ್ಮ ಉದಾಸೀನತೆಯಿಂದಾಗಿ ಹಿಂದೆ ಬಿದ್ದಿದ್ದ ಕೆಲಸಗಳು ಮರಳಿ ಚಾಲನೆ ಪಡೆಯಲಿವೆ. ಅನುಭವದಿಂದ ಈ  ವಾರ ಕಳೆಯುವುದು ಬುದ್ಧಿವಂತರ ಲಕ್ಷಣ. ನಿಮ್ಮ ಕಾರ್ಯ ಮತ್ತು ಕೌಶಲ್ಯಕ್ಕೆ ಮೇಲಧಿಕಾರಿಗಳು ಬೆರಗಾಗುವರು. ಆದರೆ ಅಹಂ ಎನ್ನುವ ಅಹಂಕಾರ ಭಾವನೆಯಿಂದ ದೂರವಿರಲು ಪ್ರಯತ್ನಿಸಿ. ಅತಿಯಾದ ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡುಬರುವುದು. ನಿಮ್ಮ ವಿರುದ್ಧ ಹಿತೈಷಿಗಳಿಂದಲೇ ಪಿತೂರಿ ನಡೆಯಬಹುದು. ಈ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಮಕ್ಕಳಿಗೆ ವಿಧೇಯತೆಯನ್ನು  ಕಲಿಸಿರಿ.

 

ಮಕರ (Makara)

 

 

ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಗುಣ ಸ್ವಭಾವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ನಿಮ್ಮ  ವಿಶ್ವಾಸ ಎಂದು ದುರುಪಯೋಗವಾಗದಂತೆ ನೋಡಿಕೊಳ್ಳಿ.  ಮಹತ್ವವಾದ ವಿಷಯಗಳನ್ನು ಆತ್ಮೀಯರೊಂದಿಗೆ ಮಾತ್ರ ಚರ್ಚಿಸುವುದು  ಉತ್ತಮ. ವಸ್ತು ನಿಷ್ಟೆ ವಿಮರ್ಶೆಯಿಂದ ಹೊಸ ವಿಚಾರಗಳು ಮೂಡಿ ಬರಲಿವೆ. ಎಣ್ಣೆ ಮೊದಲಾದ ರಸ ಪದಾರ್ಥಗಳಿಂದ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಕೊಟ್ಟ ಭರವಸೆಗಳನ್ನು ಈಡೇರಿಸಲು ಆರ್ಥಿಕ ಶ್ರಮ ಪಡುವಿರಿ. ಸರ್ಕಾರದಿಂದ ಬರಬೇಕಾಗಿದ್ದ ನೆರವು ಕೂಡ ಬರುವುದು.

 

ಕುಂಭರಾಶಿ (Kumbha)

 

ಆತ್ಮೀಯರನ್ನು ಹಾಗೂ ಹಿರಿಯರನ್ನು ಅಲಕ್ಷಿಸಿ ಮನಸ್ಸನ್ನು ನೋಯಿಸದಿರುವುದು ನಿಮಗೆ  ಶ್ರೇಯಸ್ಸು ತರುವುದು. ಬಹಳ ದಿನಗಳ ಮೇಲೆ ನಿಮ್ಮ ಬದುಕಿಗೊಂದು ಹೊಸ ಆಯಾಮ ದೊರೆಯಲಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ. ಉತ್ಸಾಹದಿಂದ ಮುನ್ನಡೆಯುವುದರಿಂದ ನಿಮಗೆ ಪ್ರತಿಯೊಬ್ಬರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಬರಬಹುದಾದ ತೊಡಕುಗಳನ್ನು ಬಹಳ ಜಾಣ್ಮೆಯಿಂದ ಪರಿಹರಿಸುವಿರಿ. ಗಂಭೀರ ವಿಷಯಗಳನ್ನು ಹಗುರವಾಗಿ ಕಡೆಗಣಿಸಬೇಡಿ. ಕುಲದೇವರ ಪ್ರಾರ್ಥನೆ ಮಾಡಿ.

 

ಮೀನರಾಶಿ (Meena)

 

 

ಬಹುಜನರ ಅಪೇಕ್ಷೆ ಮೇರೆಗೆ ನಿಮಗೆ ಗುಂಪಿನ ನಾಯಕತ್ವ ಸಿಗಲಿದೆ. ಆತ್ಮವಿಶ್ವಾಸದಿಂದ ಜವಾಬ್ದಾರಿಯನ್ನು ನಿರ್ವಹಿಸಿ. ನೀವು ಭಾಗವಹಿಸಲಿರುವ ಸಭೆಯಲ್ಲಿ ವಿಷಯವನ್ನು ಸಮರ್ಥವಾಗಿ ಮ೦ಡಿಸುವಿರಿ. ಬಂಧುಗಳ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಮಾಡುವಿರಿ. ಪಶು ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಕುಡಿಸಿ. ಸೋದರರಿಗೆ ಹೊಟ್ಟೆಗೆ ಸ೦ಭ೦ದಪಟ್ಟ ಶಸ್ತ್ರ ಚಿಕಿತ್ಸೆ ಆಗಬಹುದು. ನೆರೆ ಹೊರೆಯವರು ಕೊಡುವ ಸಲಹೆಗಳನ್ನು ಸ್ವೀಕರಿಸಿ. ಕೆಲಸದ ನೆಪದಲ್ಲಿ ವಿಶ್ರಾಂತಿಯನ್ನು ಮರೆಯದಿರಿ. ಗಣಪತಿ ದೇವರ ಸ್ತೋತ್ರಗಳನ್ನು ಪಠಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top