fbpx
ಬಿಗ್ ಬಾಸ್

ಬಿಗ್‌ಬಾಸ್‌ ಸೀಸನ್‌ 5 ಯಲ್ಲಿ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರ ಪ್ರಕಾರ ತುಂಬಾ ಗಮನ ಸೆಳೆದ ಸ್ಪರ್ಧಿ ಇವರೇ ಸ್ವಾಮಿ !

ಬಿಗ್‌ಬಾಸ್‌ ಸೀಸನ್‌ 5 ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ಅತಿಥಿಗಳಾಗಿ ಆಗಮಿಸಿದ್ದರು
ಆದರೆ ಶೂಟಿಂಗ್ ಇದ್ದ ಕಾರಣ ವಿಜಯ್‌ ರಾಘವೇಂದ್ರ ವೇದಿಕೆಗೆ ಆಗಮಿಸಲಿಲ್ಲ.

 

 

ಈ ವಾರ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು ಚಂದ್ರು ಅವರನ್ನು ಮಾತನಾಡಿಸಿದ ಬಳಿಕ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ರು ಸುದೀಪ್‌ ಹೀಗೆ ಬಿಗ್ ಬಾಸ್ ಬಗೆಗಿನ ಅಭಿಪ್ರಾಯ ಪಡೆದುಕೊಂಡರು , ಶ್ರುತಿಯವರು ತಮ್ಮ ಎದೆಯಲ್ಲಿ ಬಿಗ್ ಬಾಸ್ ಬಗ್ಗೆ ಮಹತ್ತರವಾದ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿಕೊಂಡರು .

 

 

ಹೀಗೆ ಮಾತು ಮುಂದುವರಿಸಿದ ಸುದೀಪ್ ತುಂಬಾ ಗಮನ ಸೆಳೆದ ಸ್ಪರ್ಧಿ ಯಾರು ಎಂಬ ಪ್ರಶ್ನೆಗೆ ಅಕುಲ್ ತೆಗೆದುಕೊಂಡಿದ್ದು ನಿವೇದಿತಾ ಗೌಡ ಅವರ ಹೆಸರನ್ನು

‘ಆ ಹುಡುಗಿಯ ಶೈಲಿ , ವಯಸ್ಸು , 50 ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾಳೆ , ಆಕೆ ಘಾಟಾನುಘಟಿ ಯೇ ಸರಿ , ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಆಕೆಗೆ ಒಪ್ಪುತ್ತದೆ ಆಕೆಯನ್ನು ನೋಡಿ ಕಲಿಯುವುದು ತುಂಬ ಇದೆ’ ಎಂದರು .

 

 

ಶ್ರುತಿ ಕೂಡ ನಿವೇದಿತಾ ಗೌಡ ಹೆಸರನ್ನೇ ತೆಗೆದುಕೊಂಡರು ‘ ತುಂಬಾ ಚಿಕ್ಕ ಹುಡುಗಿ ಎಂದು ಕೊಂಡು ಯಾಮಾರುತ್ತಿದ್ದಾರೆ ಆದರೆ ಆಕೆ ಬಹಳ ಬುದ್ದಿವಂತೆ, ಆಕೆಯ ತೆಗೆದುಕೊಳ್ಳುವ ನಿರ್ಧಾರಗಳು , ಮನೆಯಲ್ಲಿ ಕಳಪೆ ಬೋರ್ಡ್ ಕೊಟ್ಟಿದ್ದು , ಎಲ್ಲರನ್ನು ಜಾಣ್ಮೆಯಿಂದ ನೋಡುವ ಆಕೆಯ ಕಲೆ , ಬಿಗ್ ಬಾಸ್ ಮನೆಯನ್ನು ಆಕೆ ತುಂಬಾ ಪ್ರೀತಿಸುತ್ತಾಳೆ ‘ ಎಂದರು .

ಪ್ರಥಮ್ ಕೂಡ ನಿವೇದಿತಾ ಗೌಡ ಹೆಸರನ್ನೇ ತೆಗೆದುಕೊಂಡರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top