ದೇವರು

ತುಳಸಿಯ ಗಿಡದ  ಕೆಳಗಿನಿಂದ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಈ ಪರಿಹಾರವನ್ನು ಮಾಡಿದರೆ ಸಾಲದ ಸಮಸ್ಯೆ ದೂರವಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗುವುದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತುಳಸಿಯ  ಗಿಡದ ಕೆಳಗಿರುವ ಮಣ್ಣಿನಲ್ಲಿರುವ ಮಹತ್ವ.

 

 

ತುಳಸಿಯ ಗಿಡದ  ಕೆಳಗಿನಿಂದ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಹೀಗೆ ಮಾಡಿದರೆ ಭಿಕ್ಷುಕನಾದರೂ ಕುಬೇರನಾಗುವನು. ಸಕಲ ದೇವತೆಗಳು ಸಕಲ ತೀರ್ಥಗಳು ನೆಲೆಸಿರುವಂತಹ ಶ್ರೀ ತುಳಸಿಯನ್ನು ನಾವು ಪ್ರತಿನಿತ್ಯ ಪೂಜಿಸುತ್ತೇವೆ. ಪ್ರಮುಖವಾಗಿ ಶ್ರೀ ತುಳಸಿಯೇ ಶ್ರೀ ಮಹಾಲಕ್ಷ್ಮಿ ಎಂದು ಭಾವಿಸಿ ಆಕೆಯನ್ನು ಪೂಜಿಸಿ ಪ್ರಾರ್ಥಿಸುತ್ತೇವೆ. ಅಷ್ಟೇ ಅಲ್ಲದೆ ಪ್ರತಿದಿನ ತುಳಸಿಗೆ ನೀರನ್ನು ಸಮರ್ಪಿಸಿ ಪೂಜಿಸುವುದರಿಂದ ತುಳಸಿಯಲ್ಲಿ ನೆಲೆಸಿರುವ ಶುಭಗ್ರಹಗಳು ಶುಭ ಫಲಗಳನ್ನು ನೀಡಲು ಸಹಕರಿಸುತ್ತವೆ ಎಂದು ಹೇಳುತ್ತಾರೆ ಪಂಡಿತರು .

 

 

ಇನ್ನೂ ಧನಲಾಭವನ್ನು ಹೊಂದಬೇಕಾದರೆ  ನಾವು ಸಾಕಷ್ಟು ಕಷ್ಟ, ನಷ್ಟಗಳನ್ನು ತೊಂದರೆಗಳನ್ನು, ಪ್ರಯೋಜನಗಳನ್ನು ಅನೇಕ ಅದೆಷ್ಟೋ  ಪ್ರಯೋಜನಗಳನ್ನು ಪರಿಶೀಲಿಸುತ್ತೇವೆ. ಇಂತಹದ್ದೇ ಒಂದು ಪರಿಹಾರ ಮಾರ್ಗ ಇದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಹಾಗೆ ತಿಳಿದಿರುವುದು ಸಹ ಇಲ್ಲ. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬ ಮತ್ತು  ಪರಿವಾರದ ಜನರು, ತಮ್ಮ ಜನರು ಸುಖ ಸಂತೋಷದಿಂದ ಇರಬೇಕೆಂದು ಬಯಸುವರು. ಹೀಗೆ ಸುಖವಾಗಿರಲು ಯಾವುದೇ ಬಗೆಯ ಅಪಾಯವನ್ನು ಎದುರಿಸಲು ಸಹ ಅವರು ಸಿದ್ಧರಿರುತ್ತಾರೆ. ಅಷ್ಟೇ ಅಲ್ಲದೆ ಎಷ್ಟೋ ಬಗೆಯ ಉಪಾಯಗಳನ್ನು ಪರಿಹಾರಗಳನ್ನು ಹುಡುಕುತ್ತಲೇ ಇರುತ್ತಾರೆ. ಹುಡುಕುವುದು ಅಲ್ಲದೆ ಹುಡುಕಿ ಅವುಗಳನ್ನು ಪ್ರಯತ್ನ ಮಾಡುತ್ತಿರುತ್ತಾರೆ. ಅವು ಸಫಲವಾಗದೆ ಇದ್ದಲ್ಲಿ ಬೇಸರ ಪಡುತ್ತಾ ಕೂರುತ್ತಾರೆ.

ಪರಿಹಾರ .

ಶ್ರೀ ತುಳಸಿಗೆ ಸಂಬಂಧಿಸಿದ ಈ ಒಂದು ಪರಿಹಾರ ಅಥವಾ ಉಪಾಯವನ್ನು ಮಾಡಿಕೊಂಡರೆ ಎಷ್ಟೋ ಶುಭ ಫಲಗಳನ್ನು ಕೊಡುತ್ತದೆ. ಆ ಪರಿಹಾರ ಮತ್ತು  ಉಪಾಯಗಳು ಏನು ಎಂಬುದನ್ನು ನೋಡೋಣ…

 

 

ಶ್ರೀ ತುಳಸಿಯನ್ನು ಪ್ರತಿಯೊಬ್ಬರೂ ನಾವು ಬೆಳಗಿನ ಕಾಲದಲ್ಲಿಯೂ ಮತ್ತು ಸಂಧ್ಯಾ ಕಾಲದಲ್ಲಿಯೂ ಪೂಜಿಸುತ್ತೇವೆ. ಅಲ್ಲದೆ ಪ್ರಾತಃಕಾಲದಲ್ಲಿ ತುಳಸಿಯ ಪರಿಸರವನ್ನು ಶುಭ್ರಗೊಳಿಸಿ, ರಂಗೋಲಿಯನ್ನು ಹಾಕಿ, ಅರಿಶಿನ, ಕುಂಕುಮ , ನೀರನ್ನು  ಸಮರ್ಪಿಸಿ ಧೂಪ, ದೀಪ ಆರತಿಗಳಿಂದ ಪೂಜಿಸುತ್ತೇವೆ. ಹೀಗೆ ಪ್ರಾರ್ಥಿಸಿದ ನಂತರ ತುಳಸಿಯ ಬೃಂದಾವನದ ಮುಂದೆ ನಿಂತು ಕೈಮುಗಿದು ಭಕ್ತಿ, ಶ್ರದ್ಧೆಯಿಂದ ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಸಂಕಲ್ಪಗಳನ್ನು ಹೇಳಿಕೊಳ್ಳಬೇಕು.

ಹಾಗೆ ಪ್ರಾರ್ಥಿಸುತ್ತಾ ತುಳಸಿಯ ಗಿಡದ ಕೆಳಗಿನಿಂದ ಒಂದು ಸ್ವಲ್ಪ ಮಣ್ಣನ್ನು ಅಂದರೆ ಒಂದು ಹಿಡಿಯಷ್ಟು ಮಣ್ಣನ್ನು ತೆಗೆದುಕೊಂಡು ಒಂದು ಚಿಕ್ಕ ಬಾಳೆ ಎಲೆಯಲ್ಲಿ ಇಟ್ಟುಕೊಳ್ಳಬೇಕು ನಂತರ ಅದಕ್ಕೆ ಅರಿಶಿಣ, ಕುಂಕುಮ ಹಾಕಿ ನಂತರ ಎರಡು ಹನಿಯಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಬಲಗೈನಿಂದ ಆ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಿಕ್ಕ ಉಂಡೆಯಂತೆ ತಯಾರಿಸಿಕೊಂಡು ಆ ಬಾಳೆ ಎಲೆಯ ಮೇಲೆಯೇ  ಇಟ್ಟು. ಆ ಉ೦ಡೆಯನ್ನು ಅದೇ ಎಲೆಯಲ್ಲಿ ಸುತ್ತಬೇಕು. ಇನ್ನು ಸಂಜೆ ಹೊತ್ತಿನಲ್ಲಿ ಅಥವಾ ಸಂಜೆ ಸಮಯದಲ್ಲಿ ಒಂದು ಆಲದ ಮರದ ಬಳಿ ಹೋಗಿ ಆ ಉಂಡೆ ಕಟ್ಟಿದ ಮಣ್ಣನ್ನು  ಆಲದ ಮರದ ಕೆಳಗೆ ಇಟ್ಟು ಪ್ರಾರ್ಥಿಸಿಕೊಳ್ಳಬೇಕು ಹೀಗೆ ಇರುವಾಗ ಮತ್ತೊಮ್ಮೆ ಕೈ ಮುಗಿದು ಭಕ್ತಿ ಶ್ರದ್ಧೆಯಿಂದ ಪ್ರಾರ್ಥಿಸಿಕೊಳ್ಳಬೇಕು.

 

 

ಹೀಗೆ ಮಾಡಿದ ವಾರದಲ್ಲಿಯೇ ನಿಮಗೆ ಫಲಿತಾಂಶಗಳು ಕಾಣುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಅವುಗಳನ್ನೆಲ್ಲ ದಾಟಿ ಮುಂದೆ ಸಾಗುತ್ತಾರೆ. ನಿಮಗೂ ಈಡೇರದ ಆಸೆಗಳು ಇದ್ದರೆ ಬಗೆಹರಿಯದ ಸಮಸ್ಯೆಗಳು ಇದ್ದರೆ ಆ ಪರಿಹಾರವನ್ನು ಮಾಡಿ ಉಪಯೋಗಿಸಿಕೊಳ್ಳಿ. ಜೀವನದಲ್ಲಿ ಸುಖ ಸಂತೋಷದಿಂದ ಬಾಳಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

2 Comments

2 Comments

  1. ಚೆನ್ನವೀರ ಸ್ವಾಮಿ

    December 5, 2017 at 9:22 pm

    ಒಂದೊಳ್ಳೆ ಸಲಹೆ

  2. Kavyashree

    December 22, 2017 at 7:21 pm

    Nice I want to do like this

Leave a Reply

Your email address will not be published. Required fields are marked *

To Top