fbpx
ಬಿಗ್ ಬಾಸ್

‘ಹುಚ್ಚ’ ಚಿತ್ರದ ಈ ಇಂಟ್ರೆಸ್ಟಿಂಗ್ ವಿಷಯಗಳು ಕಿಚ್ಚನ ಕಿಚನ್ ನಲ್ಲಿ ಮೊದಲ ಬಾರಿಗೆ ಬಿಚ್ಚಿಟ್ರು ಸುದೀಪ್

ಭಾನುವಾರದ ಸೂಪರ್ ಕಿಚ್ಚನ ಕಿಚನ್ ಕಾರ್ಯಕ್ರಮ ಶುರುವಾಗಿದ್ದು ನಟ , ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಸಂಗೀತದಿಂದ ಅವರ ಜೊತೆ ಮಗ ಸುರಾಗ್ ಕೂಡ ಆಗಮಿಸಿದ್ದರು , ಹೀಗೆ ಮ್ಯೂಸಿಕ್ ಬಗ್ಗೆ ಮಾತಾಡುತ್ತಾ ಸುದೀಪ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ‘ಹುಚ್ಚ’ ಚಿತ್ರದ ಬಗ್ಗೆ ಮಾತಾಡುತ್ತಿದ್ದರು , ಹುಚ್ಚ ಬಗೆಗಿನ ಕೆಲವು ಇಂಟ್ರೆಸ್ಟಿಂಗ್ ಸುದ್ದಿಗಳನ್ನು ಹಂಚಿಕೊಳ್ಳಲು ಮರೆಯಲಿಲ್ಲ .

 

 

‘ಹುಚ್ಚ’ ಚಿತ್ರದ ‘ಮಾತು ತಪ್ಪಿದಳು ಏನಾಯಿತು ಕಂಡ ಕನಸುಗಳು’ ಗೀತೆಯನ್ನು ಮೊದಲಿಗೆ ಸಾಧು ಕೋಕಿಲಾ ಹಾಡಿದರಂತೆ ಆದರೆ ಆ ವಾಯ್ಸ್ ಗೆ ಇನ್ನು ಸ್ವಲ್ಪ ಥಿಕ್ ಬೇಕೆಂದು ಎನಿಸಿದೊಂಡನೆ ಸಾಧು ‘ದೊಡ್ಡವರ ಕೈಯಲ್ಲಿ ಹಾಡಿಸಿ’ ಎಂದರಂತೆ ಆಗ ಆ ಹಾಡನ್ನು ಯೇಸು ದಾಸ್ ಅವರ ಕೈಯಲ್ಲಿ ಹಾಡಿಸಲಾಯಿತಂತೆ ಆದರೂ ಆ ಹಾಡಿನ ಟ್ರ್ಯಾಕ್ ಹಾಡಿದ್ದು ಸಾಧು ಅವರೇ ಮೊದಲು ಎಂದು ಹೇಳಲು ಕಿಚ್ಚ ಮರೆಯಲಿಲ್ಲ .

 

 

‘ಹುಚ್ಚ’ ಚಿತ್ರದ ಕಿಚ್ಚ ಪಾತ್ರಧಾರಿಗೆ ಸಿಗರೇಟ್ ಸೇದಿಸಬೇಕೆಂದು ಅಂದುಕೊಂಡರಂತೆ ‘ಓಂ ಪ್ರಕಾಶ್ ‘ ಆದರೆ ಸುದೀಪ್ ಅವರಿಗೆ ಸ್ಮೋಕ್ ಮಾಡಲು ಬರುತ್ತಿರಲಿಲ್ಲವಂತೆ , ಜನಗಳಿಗೆ ಕಿಚ್ಚ ಒಬ್ಬ ಚೈನ್ ಸ್ಮೋಕರ್ ಎಂದು ಅನಿಸುತ್ತಿತ್ತಂತೆ ಆದರೆ ಅಸಲಿ ವಿಷ್ಯ ಏನೆಂದರೆ ಕಿಚ್ಚ ರವರಿಗೆ ಸಿಗ್ರೆಟ್ ಸೇದಲು ಬರುತ್ತಿರಲಿಲ್ಲ , ಸರಿಯಾಗಿ ಸಿಗ್ರೆಟ್ ಸೇದಲು ಬರುತ್ತಿರಲಿಲ್ಲ ಆದರೆ ಪಾತ್ರ ಹೇಗಾದರೂ ಮಾಡಲೇ ಬೇಕೆಂದು ಸಿಗರೇಟ್‌ ಹೊಗೆ ಒಳಗೆ ತೆಗೆದುಕೊಳ್ಳದೇ ಸೇದಿದ ಹಾಗೆ ಅಭಿನಯಿಸಿದರೆ ಸಿಗರೇಟ್‌ ಸೇದುವವರಿಗೆ ಸುಲಭವಾಗಿ ಗೊತ್ತಾಗುತ್ತದೆ ಎಂದು ಭಾವಿಸಿ , ಸಿಗರೇಟ್‌ ಹೊಗೆ ತೆಗೆದುಕೊಳ್ಳದೆ ಸುದೀಪ್ ಅವರ ಸ್ಟೈಲ್ ನಲ್ಲಿ ಗಡ್ಡ ಹಾಗು ಹಣೆ ಕೆರೆದುಕೊಂಡು ಪ್ರೇಕ್ಷಕರನ್ನು ಡೈವರ್ಟ್ ಮಾಡಿಬಿಡುತ್ತಿದ್ದರಂತೆ .

 

 

ಆದರೆ ಈ ಸ್ಟೈಲ್ ನಲ್ಲಿ ಸಿಗರೇಟ್‌ ಸೇದುವುದು ಯುವಕರಲ್ಲಿ ಕ್ರೇಜ್ ಹುಟ್ಟು ಹಾಕಿತ್ತಂತೆ ‘ಹುಚ್ಚ’ ಚಿತ್ರದ ಈ ಇಂಟ್ರೆಸ್ಟಿಂಗ್ ವಿಷಯಗಳನ್ನು ಕಿಚ್ಚ ಹಂಚಿಕೊಳ್ಳಲು ಮರೆಯಲಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top