ಸಮಾಚಾರ

ಖಡಕ್ ಅಧಿಕಾರಿ ರವಿ ಚನ್ನಣ್ಣನವರ್ ವಿರುದ್ಧ ಕುಟುಕಿದ ಪ್ರತಾಪ್ ಸಿಂಹ

ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು .

ಹನುಮಂತ ಜಯಂತ್ಯುತ್ಸವಕ್ಕಾಗಿ ತೆರಳುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ಬಿಳಿಕೆರೆ ಬಳಿ ಬ್ಯಾರಿಕೇಡ್‌ ಹಾಕಲಾಯಿತು ಇದಕ್ಕೆ ಸಂಸದ ಪ್ರತಾಪ್‌ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್‌ ತಳ್ಳಿಕೊಂಡು ಮುಂದಕ್ಕೆ ಸಾಗಿದ್ದಾರೆ.

 

 

ಸಿಂಹ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ ಈ ಸಮಯದಲ್ಲಿ ಸಿಂಹ ಅವರನ್ನು ಪೊಲೀಸ್ ಅರೆಸ್ಟ್ ಮಾಡಿದ್ದರು.

ಇದನ್ನು ಪ್ರಶ್ನಿಸಿದ ಸಿಂಹ ಮೈಸೂರು ಎಸ್.ಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ , ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ರವರಿಗೆ ಕುಟುಕಿದ್ದಾರೆ ,ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

 

ಪ್ರತಾಪ್ ಸಿಂಹ ಅವರನ್ನು ಹುಣಸೂರು, ಹೆಚ್.ಡಿ.ಕೋಟೆ, ಕೆ.ಆರ್.ನಗರ, ಮೈಸೂರು, ನರಸೀಪುರ ಸೇರಿದಂತೆ ಸುಮಾರು 8 ಗಂಟೆ ಕಾಲ ತಿರುಗಾಡಿಸಿ ರಾತ್ರಿ 11 ಗಂಟೆ ಅಷ್ಟರಲ್ಲಿ ನರಸೀಪುರ ಪಟ್ಟಣ ಠಾಣೆಗೆ ಬಿಟ್ಟು ಹೋಗಿದ್ದಾರೆ ಅಲ್ಲಿ ಬೆಲ್ ಪಡೆದ ನಂತ್ರ ಪ್ರತಾಪ್ ಸಿಂಹ ಅವರನ್ನು ಬಿಡುಗಡೆ ಮಾಡಿದ್ದಾರೆ .

ಈ ಮಧ್ಯೆ ಹೆಚ್ಚು ಜನ ಮನ್ನಣೆ ಗಳಿಸಿರುವ ರವಿ ಚನ್ನಣ್ಣನವರನ್ನು ಟ್ವಿಟ್ಟರ್ ನಲ್ಲಿ ಕುಟುಕಲು ಪ್ರತಾಪ್ ಸಿಂಹ ಮರೆಯಲಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top