ಸಮಾಚಾರ

ಖಡಕ್ ಅಧಿಕಾರಿ ರವಿ ಚನ್ನಣ್ಣನವರ್ ರಿಂದ ಪ್ರತಾಪ್ ಸಿಂಹರಿಗೆ ತಿರುಗೇಟು ..

ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು .

ಖಡಕ್ ಅಧಿಕಾರಿ ರವಿ ಚನ್ನಣ್ಣನವರ್ ವಿರುದ್ಧ ಕುಟುಕಿದ ಪ್ರತಾಪ್ ಸಿಂಹ

ದನ್ನು ಪ್ರಶ್ನಿಸಿದ ಸಿಂಹ ಮೈಸೂರು ಎಸ್.ಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ , ಆಳುವವರ ಅಣತಿ ಮೀರುವ ಹಾಗಿಲ್ಲ ಅಲ್ವಾ ಸಾರ್ ಅಂತ ಟ್ವಿಟರ್‍ನಲ್ಲಿ ಎಸ್‍ಪಿ ರವರಿಗೆ ಕುಟುಕಿದ್ದಾರೆ ,ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ ಅಂತ ಟ್ವೀಟ್ ಮಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

 

 

 

ಇದಕ್ಕೆ ಉತ್ತರಿಸಿದ ರವಿ ಚನ್ನಣ್ಣನವರ್..

ನಮಗೆ ಸತ್ಯ, ಬಡವರ ಹಾಗೂ ಸರ್ವರ ಹಿತ ನಮಗೆ ಮುಖ್ಯ ನಾವು ಯಾರ ಪರ ಅಥವಾ ಯಾರ ವಿರುದ್ಧವೂ ಇಲ್ಲ ಎಂದು ಟ್ವಿಟ್ಟರ್ ನಲ್ಲಿ ಕುಟುಕಿದ ಸಿಂಹ ರವರಿಗೆ ರವಿ ಚನ್ನಣ್ಣನವರ್ ಉತ್ತರ ನೀಡಿದ್ದಾರೆ .

 

 

ಕಲಿಯುವುದು ಎಲ್ಲರಿಂದಲೂ ಇರುತ್ತದೆ ಎಲ್ಲರಿಂದಲೂ ಒಳ್ಳೆಯ ವಿಷಯಗಳು ತೆಗೆದುಕೊಳ್ಳೋಣ ಅದು ಹಿರಿಯ ಅಧಿಕಾರಿಗಳಿಂದಾದರೂ ಸರಿ , ಅಣ್ಣಾಮಲೈಯಂತಹ ದಕ್ಷ ಅಧಿಕಾರಿಗಳಿಂದಾದರೂ ಸರಿ , ಪೇದೆಯಿಂದಲೂ ಕಲಿಯುವುದು ಇದ್ದೆ ಇದೆ .

 

ನಾವು ಯಾರು ಪರ್ಫೆಕ್ಟ್ ಅಲ್ಲ , ನಾವು ಯಾರ ಅಣತಿಗು ಕೆಲಸ ಮಾಡುವುದಿಲ್ಲ , ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಅದರ ನಿರ್ದೇಶನದಂತೆ ನಡೆಯುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top