ಸೋಮವಾರ, ೦೪ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೧
ಸೂರ್ಯಾಸ್ತ : ೧೭:೪೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಪಾಡ್ಯ
ನಕ್ಷತ್ರ : ಮಾರ್ಗಶಿರ
ಯೋಗ : ಸಾಧ್ಯ
ಪ್ರಥಮ ಕರಣ : ಬಾಲವ – ೦೭:೨೩ ವರೆಗೆ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೭ – ೧೨:೩೨
ಅಮೃತಕಾಲ : ೧೯:೩೯ – ೨೧:೦೩
ರಾಹು ಕಾಲ: ೦೭:೫೬ – ೦೯:೨೦
ಗುಳಿಕ ಕಾಲ: ೧೩:೩೪ – ೧೪:೫೯
ಯಮಗಂಡ: ೧೦:೪೫ – ೧೨:೦೯
ಮೇಷ (Mesha)
ಹಿತರು ಮತ್ತು ಬಂಧುಗಳ ಜೊತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.
ವೃಷಭ (Vrushabha)
ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಈ ದಿನ ಕುಟುಂಬದ ಸದಸ್ಯರೊಡನೆ ಸಮಯ ಕಳೆಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.
ಮಿಥುನ (Mithuna)
ಕಚೇರಿ ಕೆಲಸಗಳು ಸುಗಮವಾಗಿ ನಡೆಯುವುದು. ಕೌಟುಂಬಿಕ ವಿಚಾರಗಳಲ್ಲಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ನಿಮ್ಮ ಕೌಶಲ್ಯ, ಸಾಮರ್ಥ್ಯ ನಿರೂಪಿಸುವ ಇಲ್ಲವೆ ಸಾಬೀತು ಪಡಿಸುವ ಅವಕಾಶ ಸಿಕ್ಕರೆ ಬಿಡಬೇಡಿ.
ಕರ್ಕ (Karka)
ಮ್ಮ ದೌರ್ಬಲ್ಯ ಎಂದರೆ ಅತಿಮುಂಗೋಪ. ಸಿಟ್ಟಿನಿಂದ ಕೆಲವು ಅವಕಾಶಗಳನ್ನು ಇಂದು ಕಳೆದುಕೊಳ್ಳುವಿರಿ. ನಿಮ್ಮನ್ನು ಕೆರಳಿಸುವ ಪ್ರಚೋದಿಸುವ ಹಲವು ವಿದ್ಯಾಮಾನಗಳು ನಡೆಯಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನಿದ್ದು ಬಿಡಿ.
ಸಿಂಹ (Simha)
ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈ ದಿನ ನಿಮ್ಮ ಮನಸ್ಸಿಗೆ ಒಪ್ಪುವಂತಹ ಶುಭ ವಾರ್ತೆ ಕೇಳುವಿರಿ. ಮಕ್ಕಳ ಅಭ್ಯುದಯವು ನಿಮಗೆ ಹೊಸ ಹುರುಪನ್ನು ತಂದುಕೊಡುವುದು.
ಕನ್ಯಾರಾಶಿ (Kanya)
ಹಣದ ಹರಿವು ಹೆಚ್ಚಾಗಲಿದೆ. ಖರ್ಚು-ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ನಿಮಗೆ ಹೆಚ್ಚಿನ ಗೌರವ ಬರುವುದು.
ತುಲಾ (Tula)
ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ, ಗುರುವಿನ ಬೆಂಬಲ ಇದೆ. ಜನ್ಮಶನಿಯು ನಿಮ್ಮ ನೇರ ನಿಷ್ಠುರ ನುಡಿಯಿಂದಾಗಿ ಕೆಲವೇ ಉತ್ತಮ ಸ್ನೇಹಿತರನ್ನು ಗುರುತು ಮಾಡಿಕೊಡುವರು. ಬಾಳಸಂಗಾತಿಯ ಬೆಂಬಲವಿರುತ್ತದೆ.
ವೃಶ್ಚಿಕ (Vrushchika)
ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಹುರಿದುಂಬಿಸುವರು.
ಧನು ರಾಶಿ (Dhanu)
ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಸಂತೋಷ ಕೀರ್ತಿಯು ಸರ್ವತ್ರ ಸುಖ. ಮನೋಧೈರ್ಯದಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು. ಭೂಮಿ ಖರೀದಿಸುವ ಮಾತುಕತೆಯು ಫಲಪ್ರದವಾಗುವುದು.
ಮಕರ (Makara)
ಮನೆಯ ಅಭಿವೃದ್ಧಿಯಲ್ಲಿ ನಿಮ್ಮ ಸಮಯ ಮತ್ತು ಹಣವನ್ನು ಖರ್ಚು ಮಾಡುವಿರಿ. ಮಗನು ಮಾಡುವ ದುಂದುವೆಚ್ಚಗಳಿಂದ ಆತನ ಮೇಲೆ ಕೋಪ ಮಾಡಿಕೊಳ್ಳುವಿರಿ. ಆರೋಗ್ಯ ಸಮಸ್ಯೆ ಇಲ್ಲ, ಆರ್ಥಿಕತೆಯಲ್ಲಿ ಹಿನ್ನಡೆ ತೋರುವುದು.
ಕುಂಭರಾಶಿ (Kumbha)
ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗುರುವಿನ ಮೊರೆ ಹೋಗುವಿರಿ. ಗುರುವಿನ ಆಶೀರ್ವಾದದಿಂದ ಗೊಂದಲದ ಮನಸ್ಥಿತಿ ದೂರವಾಗುವುದು. ಆರ್ಥಿಕ ಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡುಬರುವುದು.
ಮೀನರಾಶಿ (Meena)
ಗೃಹಾಲಂಕಾರ ವಸ್ತುಗಳನ್ನು ಖರೀದಿಸುವಿರಿ. ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವುದು. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
