ದೇವರು

ವಾಸ್ತು ಶಾಸ್ತ್ರದಲ್ಲಿ  ಉಲ್ಲೇಖವಾಗಿರುವ ಹಾಗೆ ಹಣ ಹಾಗು ಒಡವೆ ಇಡುವ ಬೀರು ಈ ರೀತಿ ಇರಬೇಕು , ಈ ಸುಲಭ ಉಪಾಯ ಪಾಲಿಸಿದರೆ ಲಕ್ಷ್ಮಿ ದೇವಿ ಒಲಿಯುವಳು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವಾಸ್ತು ಶಾಸ್ತ್ರದಲ್ಲಿ  ಉಲ್ಲೇಖವಾಗಿರುವ ಮತ್ತು  ಬೀರಿನ ಮೇಲೆ ಬರೆಯಬೇಕಾದ ಅಂಶಗಳು, ಮತ್ತು ವಿಷಯಗಳನ್ನು ತಿಳಿದುಕೊಳ್ಳಿ…

 

 

ಮನೆಯಲ್ಲಿ ಬೀರು ಯಾವ ವಿಧವಾಗಿ ಇದ್ದರೆ ಶ್ರೀ ಮಹಾಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ ಎಂದು ನಾವು  ಇ೦ದು ತಿಳಿದುಕೊಳ್ಳೋಣ…

ಬೀರು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿಯೇ ಇರಬೇಕು.ಅಂದರೆ ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ಮಧ್ಯ ಭಾಗದಲ್ಲಿ ಇರುವ ಪ್ರದೇಶ ನೈರುತ್ಯ ದಿಕ್ಕು. ಬೀರು ಬಾಗಿಲನ್ನು ತೆರೆದಾಗ ಅದು ಉತ್ತರ ದಿಕ್ಕನ್ನು ನೋಡುವಂತೆ ಇರಬೇಕು.

 

 

ಬೀರಿನ ಬಾಗಿಲನ್ನು ತೆರೆದಾಗ ಒಳ್ಳೆಯ ಸುವಾಸನೆ ಬರಬೇಕು. ಅಷ್ಟೇ ಅಲ್ಲದೆ ಹಳೆಯ ಬಟ್ಟೆಯ ವಾಸನೆ, ಜಿರಲೆಯ ವಾಸನೆ ಬರಬಾರದು. ಅಂತಹ ವಾಸನೆ ಆ ಬೀರುವಿನಲ್ಲಿ ಬಂದರೆ ಆ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಎಂದು ಅರ್ಥ .

ಕುಬೇರ ರಂಗೋಲಿಯನ್ನು ನೀಲಿ ಬಣ್ಣದಿಂದ ಬರೆದು ಆ ರಂಗೋಲಿಯನ್ನು ನಗದು ಇಡುವ ಜಾಗದಲ್ಲಿಡಬೇಕು. ಈ ರಂಗೋಲಿ ಬರೆದ ಕಾಗದಕ್ಕೆ ನಾಲ್ಕು ಮೂಲೆಗಳಿಗೆ ಅರಿಶಿನ ಕುಂಕುಮದ ಬೊಟ್ಟನ್ನು ಇಡಬೇಕು.ಈ ಕುಬೇರ ರಂಗೋಲಿಯ ಮೇಲೆ ಬಂಗಾರ ಮತ್ತು ನಗದನ್ನು ಇಟ್ಟುಕೊಂಡರೆ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಬಹುದು.

 

 

ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ದೊರೆಯುವ ಮರದ ಬೇರನ್ನು ತೆಗೆದುಕೊಂಡು, ಕರ್ಪೂರ, ಸುಗಂಧ ದ್ರವ್ಯಗಳನ್ನು ಒಂದು ಬೆಳ್ಳಿ ಬಟ್ಟಲಿನನೊಳಕ್ಕೆ ಅಥವಾ ತಾಮ್ರದ ಬಟ್ಟಲಿನಲ್ಲಿ ಇದನ್ನು ಇಟ್ಟು ಬೀರುವಿನಲ್ಲಿ ಇಡಬೇಕು. ಇದರಿಂದ ಧನ ಅಭಿವೃದ್ಧಿಯಾಗುತ್ತದೆ.

ಬೀರಿನ ಬಾಗಿಲಿನ ಮೇಲೆ ಯಾವ ಪರಿಸ್ಥಿತಿಯಲ್ಲಿಯೂ ಸಹ ದೇವರ ಫೋಟೋಗಳನ್ನು ಅಂಟಿಸಬಾರದು. ಕಬ್ಬಿಣದ ಆಯಸ್ಕಾಂತದ ದೇವರ ಪ್ರತಿಮೆಗಳನ್ನೂ ಸಹ ಕೂಡ ಅಂಟಿಸಬಾರದು.

ಯಾವಾಗಲೂ ಬೀರುವಿನ ಬಾಗಿಲಿನ ಮೇಲೆ ಒಂದು ಕಡೆ ಶುಭ- ಲಾಭ ಮತ್ತೊಂದು ಕಡೆ ಸ್ವಸ್ತಿಕ್ ಚಿಹ್ನೆಯನ್ನು ಇರುವಂತೆ ನೋಡಿಕೊಳ್ಳಬೇಕು. ಸ್ವಸ್ತಿಕ್ ಚಿಹ್ನೆಯನ್ನು ಸಹ ಸರಿಯಾಗಿ ಬರೆಯಬೇಕು. ಅದನ್ನು ಬರೆಯುವಾಗ ಅರಿಶಿನ ಕುಂಕುಮದಿಂದ ಮಾತ್ರ ಬರೆಯಬೇಕು. ಹೀಗೆ ಮಾಡಿದರೆ ನಮಗೆ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುವುದರ ಜೊತೆಗೆ ಐಶ್ವರ್ಯವನ್ನು ಪಡೆಯಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top