ತಿಂಡಿ ತೀರ್ಥ

ಚುಮು ಚುಮು ಚಳಿಗೆ ಬಿಸಿಬಿಸಿಯಾದ ಕ್ಯಾಬೇಜ್ ಮಂಚೂರಿಯನ್ ಬಾಲ್ಸ್ ಮನೆಯಲ್ಲೇ ಮಾಡ್ಕೊಂಡು ಲಗಾಯಿಸಿ

ಕ್ಯಾಬೇಜ್ ಮಂಚೂರಿಯನ್ ಬಾಲ್ಸ್ :

 

ಬೇಕಾಗುವ ಪದಾರ್ಥ:

ಎಲೆ ಕೋಸು 300 ಗ್ರಾಂ
ಚೆನ್ನಾಗಿ ಕತ್ತರಿಸಿದ ಬೆಳ್ಳುಳ್ಳಿ 1 ಚಮಚ
ಚೆನ್ನಾಗಿ ಕತ್ತರಿಸಿದ ಶುಂಠಿ 1 ಚಮಚ

ಈರುಳ್ಳಿ ಹೂವು 3 ಚಮಚ
ಚೆನ್ನಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ 3 ಚಮಚ
ಕೊತಂಬರಿ ಸೊಪ್ಪು ಸ್ವಲ್ಪ

ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಚೆನ್ನಾಗಿ ಕತ್ತರಿಸಿದ ದೊಡ್ಡ ಮೆಣಸಿನ ಕಾಯಿ(ಕ್ಯಾಪ್ಸಿಕಂ) 2 ಚಮಚ
ಟೊಮ್ಯಾಟೊ ಸಾಸ್ 2 ಚಮಚ

ಗ್ರೀನ್ ಚಿಲ್ಲಿ ಸಾಸ್ 1 ಚಮಚ
ಸೋಯಾ ಸಾಸ್ 1 ಚಮಚ
ವಿನೆಗರ್ 2 ಚಮಚ

ಮೈದಾ 1 /2 ಬಟಲು
ಕಾರ್ನ್ ಫ್ಲೋರ್ 3 ಚಮಚ
ಉಪ್ಪು ರುಚಿಗೆ ತಾಕಷ್ಟು

ಕರಿ ಮೆಣಸಿನ ಪುಡಿ 1 ಚಮಚ
ಕಾರದಪುಡಿ 1 ಚಮಚ
ಕೆಂಪು ಮೆಣಸಿನಕಾಯಿ ಪುಡಿ 1 ಚಮಚ

ಧನ್ಯಪುಡಿ 1 ಚಮಚ
ರೆಡ್ ಫುಡ್ ಕಲರ್ ಅರ್ಧ ಚಮಚ
ಎಣ್ಣೆ

ಕ್ಯಾಬೇಜ್ ಮಂಚೂರಿ ಮಾಡುವ ವಿಧಾನ :

 

 

ಎಲೆ ಕೋಸನ್ನು ಚೆನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ತುರಿದುಕೊಳ್ಳಬೇಕು ,ತುರಿದ ನಂತರ ಅದನ್ನು ಒಂದು ಪಾತ್ರೆಗೆ ತೆಗೆದುಕೊಂಡು ಅದರಲ್ಲಿ ಇರುವ ನೀರಿನ ಅಂಶವನ್ನು ಚೆನ್ನಾಗಿ ಹಿಂಡಿ ಕೊಳ್ಳಬೇಕು.

ನಂತರ ಆ ಎಲೆ ಕೋಸು ಇರುವ ಪಾತ್ರೆಗೆ ಅರ್ಧ ಬಟಲು ಮೈದಾ ,2 ಚಮಚ ಕಾರ್ನ್ ಫ್ಲೋರ್ , ಸ್ವಲ್ಪ ಉಪ್ಪು ,ಸ್ವಲ್ಪ ಕಾರದ ಪುಡಿ ,1 ಚಮಚ ಧನಿಯಾ ಪುಡಿ ,1 ಚಮಚ ಮೆಣಸಿನ ಪುಡಿ ,1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಸ್ವಲ್ಪ ರೆಡ್ ಫುಡ್ ಕಲರ್ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.

ಕಲಸಿಕೊಂಡ ನಂತರ ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳಂತೆ ಮಾಡಿ ಇಟ್ಟುಕೊಳ್ಳಬೇಕು.

ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಿ ಕಾಯಲು ಇಡಬೇಕು .

ಈ ಬಿಸಿಯಾದ ಎಣ್ಣೆ ಯಲ್ಲಿ ಮಾಡಿಟ್ಟುಕೊಂಡ ಚಿಕ್ಕ ಚಿಕ್ಕ ಉಂಡೆಯನ್ನು ಕರಿದುಕೊಳ್ಳಬೇಕು .

ಇನ್ನೊಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದು ಬಿಸಿ ಯಾದ ನಂತರ ಅದಕ್ಕೆ ಸ್ವಲ್ಪ ಚೆನ್ನಾಗಿ ಕತ್ತರಿಸಿದ ಬೆಳ್ಳುಳ್ಳಿ ,ಶುಂಠಿ,ಈರುಳ್ಳಿ ಹೂವು ಮತ್ತು ಕ್ಯಾಪ್ಸಿಕಂ ಅನ್ನು ಚೆನ್ನಾಗಿ ಬಾಡಿಸಿಕೊಳ್ಳಬೇಕು ನಂತರ ಸ್ವಲ್ಪ ಕಾರ್ನ್ ಫ್ಲೋರ್ ಗೆ ಸ್ವಲ್ಪ ನೀರು ಬೆರಿಸಿ ಇದರ ಮಿಶ್ರಣವನ್ನುಆ ಬಾಡಿಸಿಕೊಂಡ ಬಾಣಲೆಯಲ್ಲಿ ಹಾಕಿಕೊಳ್ಳಬೇಕು .

ಅದಕ್ಕೆ ಟೊಮ್ಯಾಟೊ ಸಾಸ್ 2 ಚಮಚ
ಗ್ರೀನ್ ಚಿಲ್ಲಿ ಸಾಸ್ 1 ಚಮಚ ,ಸೋಯಾ ಸಾಸ್ 1 ಚಮಚ ,ಸ್ವಲ್ಪ ಉಪ್ಪು ಮತ್ತು 2 ಚಮಚ ವಿನೆಗರ್ ಸೇರಿಸಿ 5 ನಿಮಿಷಗಳ ಕಾಲ ಬಿಡಬೇಕು ನಂತರ ಆಗಲೇ ಮಾಡಿಟ್ಟುಕೊಂಡ ಆ ಉಂಡೆಗಳನ್ನು ಇದಕ್ಕೆ ಸೇರಿಸಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top