fbpx
ಕಿರುತೆರೆ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆದ್ದು ಭಾರಿ ಬಹುಮಾನದ ದುಡ್ಡು ಹೊಡೆದಿದ್ದು ಇವರೇ ನೋಡಿ

‘ಜೀ ಕನ್ನಡ’ ಚಾನೆಲ್ ನ ಪಾಪ್ಯುಲರ್ ಕಾರ್ಯಕ್ರಮ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆ ದೊಡ್ಡ ತೆರೆ ಬಿದ್ದಿದ್ದು , ಭಾನುವಾರ ಗ್ರಾಂಡ್ ಫಿನಾಲೆ ಸಂಚಿಕೆ ಭಾರಿ ಜನ ಮನ್ನಣೆ ಪಡೆದುಕೊಂಡಿದೆ , ‘ನಾಗಿಣಿ’ ಧಾರಾವಾಹಿಯ ಅರ್ಜುನ್ ಮತ್ತು ಅಮೃತ ಗೆದ್ದಿದ್ದಾರೆ .

 

 

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮ ಒಟ್ಟು 11 ಜೋಡಿಗಳಿಂದ ಶುರುವಾಗಿ ಕೊನೆಗೆ ನಾಲ್ಕು ಜೋಡಿಗಳು ಫೈನಲ್ ತಲುಪಿದ್ದವು .
ಅದುವೇ ವೇಣುಗೋಪಾಲ್ ಮತ್ತು ಸಾನ್ವಿ , ವಿವೇಕ್ ಮತ್ತು ನೇಹಾ ಪಾಟೀಲ್ , ಚೆನ್ನಪ್ಪಾ ಮತ್ತು ಇಂಪನಾ ಹಾಗು ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಜೋಡಿಗಳು

 

 

ತುಮಕೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂತಿಮವಾಗಿ ಎರಡು ಜೋಡಿಗಳು ಸೆಲೆಕ್ಟ್ ಆದವು ಅದುವೇ ‘ನಾಗಿಣಿ’ ಧಾರಾವಾಹಿಯ ಅರ್ಜುನ್ ಮತ್ತು ಅಮೃತ ಜೋಡಿ ಹಾಗು ವಿವೇಕ್ ಮತ್ತು ನೇಹಾ ಪಾಟೀಲ್ ಜೋಡಿ.

 

 

ಜೀ ಕನ್ನಡ ವಾಹಿನಿಯ ಅನೇಕ ಕಾರ್ಯಕ್ರಮಗಳ ಜೋಡಿಗಳು ಈ ಹಣಾಹಣಿಯಲ್ಲಿ ಭಾಗವಹಿಸಿದ್ದವು ,’ನಾಗಿಣಿ’ ಧಾರಾವಾಹಿಯ ಅರ್ಜುನ್ ಮತ್ತು ಅಮೃತ ಜೋಡಿ ಸಂಗೊಳ್ಳಿ ರಾಯಣ್ಣನ ಕಥೆಯನ್ನು ಥೀಮ್ ಆಗಿಟ್ಟುಕೊಂಡು ಡಾನ್ಸ್ ಮಾಡಿ ಜಡ್ಜ್ ಹಾಗು ಜನರ ವೋಟಿಂಗ್ ಆಧರಿಸಿ ಫೈನಲ್ ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು .

ಅರ್ಜುನ್ ಮತ್ತು ಅಮೃತ ಜೋಡಿ ಅಲಿಯಾಸ್ ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಜೋಡಿಗೆ ಜೀ ಕನ್ನಡದ ಕಡೆಯಿಂದ ಟ್ರೋಫಿ ಜೊತೆ 10 ಲಕ್ಷ ರೂಪಾಯಿ ಬಹುಮಾನ ದೊರೆಯಿತು ಹಾಗು ಡ್ಯಾನ್ಸ್ ಮಾಸ್ಟರ್ ಜಯ್ ಅವರಿಗೆ 2 .5 ಲಕ್ಷ ರೂಪಾಯಿಗಳು ದೊರೆಯಿತು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top