ದೇವರು

ತಾಂಬೂಲದ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಿರುವ ವಿಷಯಗಳು, ಇವು ಕೆಲವು ಶುಭ ಹಾಗು ಅಶುಭ ಶಕುನಗಳನ್ನು ತಿಳಿಸುತ್ತದೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಾಂಬೂಲದ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಿರುವ ವಿಷಯಗಳು..

 

ಪ್ರಪಂಚದಲ್ಲಿ ಅತ್ಯಂತ ಪುರಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಸಂಸ್ಕೃತಿಯಲ್ಲಿ  ಹೆಚ್ಚಾಗಿ ಪ್ರಕೃತಿಯನ್ನು ಪೂಜಿಸುವುದಕ್ಕೆ, ಆರಾಧನೆ ಮಾಡುವುದಕ್ಕೆ, ಪ್ರಾಧಾನ್ಯತೆ ನೀಡುತ್ತದೆ.

 

 

ಹಿಂದೂ ಸಂಸ್ಕೃತಿಯಲ್ಲಿ ತಾಂಬೂಲಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಂದರೆ ಎಲ್ಲ ದೇವರಿಗೂ ಇಷ್ಟವಾದರೂ ಸಹ  ಈ ವೀಳ್ಯದೆಲೆ   ಆಂಜನೇಯ ಸ್ವಾಮಿಗೆ ಮಾತ್ರ ಅತ್ಯಂತ ಪ್ರಿಯವಾದದ್ದು. ಆಂಜನೇಯನಿಗೆ ವ್ರತ , ಪೂಜೆಯನ್ನು ಈ ವೀಳ್ಯದೆಲೆಯಿಂದ ಮಾಡಿದರೆ ವಿವಿಧ ದೋಷಗಳಿಗೆ ಒಳ್ಳೆಯ ಪರಿಹಾರ ದೊರೆಯುತ್ತದೆ.

ವ್ರತ, ಪೂಜೆ ಮತ್ತು ಶುಭ ಕಾರ್ಯಗಳು ನಡೆಯುವಾಗ ಬಾಳೆಹಣ್ಣು ,ವಸ್ತ್ರ ,ಬಳೆಗಳ, ಜೊತೆಗೆ ವೀಳ್ಯದೆಲೆಯನ್ನು ಕೊಡುತ್ತಾರೆ. ತಾಂಬೂಲ ಕೊಡುವಾಗ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು.

ವೀಳ್ಯದೆಲೆಯ ತಾಂಬೂಲ ಕೊಡುವಾಗ ವೀಳ್ಯದೆಲೆ ಹರಿದು  ಹೋಗಿದೆ ಏನೂ ಅಂದುಕೊಳ್ಳಬೇಡಿ ಅಂತ ಬರೀ ಹಣ್ಣು ಅಥವಾ ತೆಂಗಿನ ಕಾಯಿಯನ್ನು ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭ ಕಾರ್ಯಗಳಿಗೆ ತುಂಬಾ ತೊಂದರೆಗಳಾಗುತ್ತವೆ .ಜನರ ಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರದಾಡಬೇಕಾಗುತ್ತದೆ.

 

 

ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ…. ಅತಿಯಾದ ನಷ್ಟ, ಅನಾರೋಗ್ಯ ಉಂಟಾಗುತ್ತದೆ. ನೀವು ಮಾಡುವ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುತ್ತವೆ.

ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸಿದೆ ಯಾವುದೋ ಮೂಲೆಯಲ್ಲಿ ಇಟ್ಟು ಬಿಟ್ಟರೆ ಸಮಾಜದಲ್ಲಿ ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ. ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.

ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ ನಿಮ್ಮ ಕಾರ್ಯಗಳಿಗೆ ತುಂಬಾ ನಿಧಾನವಾಗುತ್ತವೆ. ವಿವಾಹ ಕಾರ್ಯಗಳಿಗೆ ತುಂಬಾ ಅಡಚಣೆಗಳು ಉಂಟಾಗುತ್ತದೆ. ಶುಭ ಕಾರ್ಯಗಳು ನಿಧಾನವಾಗುತ್ತವೆ. ಮಕ್ಕಳ ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತದೆ.

 

 

ತಾಂಬೂಲ ಕೆಳಗೆ ಬಿದ್ದರೆ ನಮ್ಮ ಕೆಲಸಗಳು ಇನ್ನೇನು ಆಯಿತು ಎನ್ನುವ ಸಮಯದಲ್ಲಿ ಅರ್ಧಕ್ಕೆ ನಿಂತು ಹೋಗುತ್ತವೆ.

ತಾಂಬೂಲ ಕೊಡುವಾಗ ವೀಳ್ಯದೆಲೆ ಮತ್ತು  ಅಡಿಕೆ ಕೊಳೆತು ಹೋಗಿದ್ದರೆ ದರಿದ್ರರಾಗುತ್ತಾರೆ. ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ.

ತುಳಸಿ ಗಿಡಕ್ಕೆ ಒಣಗಿದ ವೀಳ್ಯದೆಲೆಯನ್ನು ಪುಡಿ ಮಾಡಿ ಹಾಕಿ ಗಿಡವನ್ನು ಬೆಳೆಸಿದರೆ ನೀವು ಮಾಡಿರುವ ಪಾಪಗಳು ದೂರವಾಗಿ ಎಲ್ಲ ಒಳ್ಳೆಯದೇ ಆಗುತ್ತದೆ.

ಅಡಿಕೆ ಪುಡಿಯ ಜತೆಗೆ ಒಣಗಿದ ವೀಳ್ಯದೆಲೆಯನ್ನು ಪುಡಿಯನ್ನು ಬೆರೆಸಿ ತಿಂದರೆ ನಿಮಗೆ ಬರಬೇಕಾದ ಹಣ ಶೀಘ್ರವಾಗಿ ಕೈಸೇರುತ್ತದೆ.

 

 

ತಾಂಬೂಲ ಕೊಡುವಾಗ ಸಿಪ್ಪೆ ಸುಲಿದಿರುವ ತೆಂಗಿನ ಕಾಯಿಯನ್ನು ಮಾತ್ರ ಕೊಡಬೇಕು.  ಸಿಪ್ಪೆ ಸುಲಿದು ತೆಂಗಿನಕಾಯಿಗೆ ಲಕ್ಷ್ಮೀ ದೇವಿ ಅಥವಾ  ಹೆಣ್ಣು ತೆಂಗಿನಕಾಯಿ ಎಂದು ಕರೆಯುತ್ತಾರೆ. ಹೀಗೆ ತೆಂಗಿನ ಕಾಯಿಯು ಲಕ್ಷ್ಮೀ ನಾರಾಯಣನ ಸಂಗಮವಾದ್ದರಿಂದ ಅತ್ಯಂತ ಶ್ರೇಷ್ಠ. ತೆಂಗಿನಕಾಯಿಗೆ ಸಂತಾನ ಲಕ್ಷ್ಮೀ  ಎಂದು  ಮತ್ತೊಂದು ಹೆಸರಿದೆ.

ಕಲಶಕ್ಕೆ ವೀಳ್ಯದೆಲೆ ಇಡುವ ಸಂಪ್ರದಾಯ ಇದ್ದರೆ ವಿಸರ್ಜನೆಯ ನಂತರ ಆ ವೀಳ್ಯದೆಲೆಯನ್ನು ಮನೆಯ ಹಿರಿಯರು ಮಾತ್ರ ತಿನ್ನಬೇಕು. ಮಗಳ ಅಳಿಯ  ಅಥವಾ  ಮಗ ಸೊಸೆ ತಿನ್ನಬಹುದು. ಈ ವೀಳ್ಯದೆಲೆಯನ್ನು ತಿನ್ನುವುದರಿಂದ ರೋಗ ನಿವಾರಣೆ ದರಿದ್ರತೆ ನಿವಾರಣೆಯಾಗುತ್ತದೆ.ಮನೆಗೆ ಬರಬೇಕಾದ ಹಣ ಬಹಳ ಬೇಗ ಬರುತ್ತದೆ.ಮನೆಯಲ್ಲಿ ಶುಭ ಕಾರ್ಯಗಳು ಬೇಗ ನೆರವೇರುತ್ತವೆ.

ಯಾವ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ಅದನ್ನು  ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ ಆನಂತರ ಅದನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top