ಜ್ಯೋತಿಷ್ಯ

ರಾಶಿಗಳ ಪ್ರಕಾರ ಈ ವಸ್ತುಗಳನ್ನು ನಿಮ್ಮ ಬಳಿ ಇರಿಸಿಕೊಂಡರೆ ಕಷ್ಟ ಕಾಲಗಳು ದೂರವಾಗಿ ನಿಮಗೆ ಅದೃಷ್ಟವು ಒಲಿದು ಬರುವುದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಾಶಿಯ ಪ್ರಕಾರ ಈ ವಸ್ತುಗಳನ್ನು ಹಾಕಿಕೊಂಡರೆ ನಿಮಗೆ ಅದೃಷ್ಟವು ಒಲಿದು ಬರುವುದು.

 

 

ಮೇಷ (Mesha)

ಅಗ್ನಿ ತತ್ವ ಮತ್ತು ಕುಜನ ಆಳ್ವಿಕೆಯಲ್ಲಿ ಇರುವ ಈ ರಾಶಿಯವರಿಗೆ ತುಂಬಾ ಗಾಢವಾದ ಬಣ್ಣವೂ ತುಂಬಾ ಪಾವಿತ್ರ ವೆನ್ನಲಾಗುತ್ತದೆ.ಈ  ರಾಶಿಯವರ ಅದೃಷ್ಟದ ಸಂಕೇತಗಳು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮಹಿಳೆಯರಿಗೆ ಮಾಣಿಕ್ಯದ ಆಭರಣಗಳನ್ನು ಧರಿಸಿದರೆ ತುಂಬಾ ಅದೃಷ್ಟ ಒಲಿದು ಬರಲಿದೆ.

 

ವೃಷಭ (Vrushabha)

ಈ ರಾಶಿಯ ಒಡೆಯ ಶುಕ್ರ ಮತ್ತು ಈ ದೇವರ ಇಷ್ಟದ ಲೋಹ ತಾಮ್ರ. ಈ ರಾಶಿಯವರಿಗೆ ಅದೃಷ್ಟ ಬರಬೇಕೆಂದರೆ ಅವರು ತಾಮ್ರದಿಂದ ಮಾಡಿರುವಂತಹ ಆಭರಣಗಳನ್ನು ಧರಿಸಬೇಕು. ಯಾವುದೇ ರೀತಿಯ ಲೋಹದ ಆಭರಣಕ್ಕೆ ರತ್ನಗಳನ್ನು ಸೇರಿಸಿಕೊಂಡು ಧರಿಸಿದರೆ ಇವರಿಗೆ ಆರೋಗ್ಯ, ಸಂಪತ್ತು ಮತ್ತು ಪ್ರೀತಿ ಸಿಗಲಿದೆ. ಮನೆಗೆ ಅದೃಷ್ಟ ಬರಬೇಕೆಂದರೆ ಒಂದು ಲೋಹದ ವಸ್ತುವನ್ನು ಬಾಗಿಲಿನ ಮೇಲ್ಭಾಗದಲ್ಲಿ ನೇತು ಹಾಕಬೇಕು.

 

ಮಿಥುನ (Mithuna)

ಈ ರಾಶಿಯವರಿಗೆ ವಾಯು ಅಧಿಪತಿಯಾಗಿರುವನು. ಇವರಿಗೆ ಹಕ್ಕಿಗಳು, ಚಿಟ್ಟೆಗಳು ಮತ್ತು ಪತಂಗಗಳು ಈ ರಾಶಿಯವರಿಗೆ ಹೊಂದಿಕೊಳ್ಳುವುದು. ಈ ರೀತಿಯ ಯಾವುದೇ ಸಂಕೇತವು ಅವರಿಗೆ ಜನಪ್ರಿಯತೆ, ಕಲ್ಪನೆ, ಕ್ರಿಯಾತ್ಮಕತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುವುದು. ದುರಾದೃಷ್ಟ ಹೋಗಲಾಡಿಸಲು ಈ ರಾಶಿಯವರು ಯಾವಾಗಲೂ ತಮ್ಮೊಂದಿಗೆ ಕನ್ನಡಿಯನ್ನು ಇಟ್ಟುಕೊಳ್ಳಬೇಕು.

 

ಕರ್ಕ (Karka)

ಈ ರಾಶಿಯು ಜಲಕ್ಕೆ ಸಂಬಂಧಿಸಿದ್ದಾಗಿದೆ. ಇದರಿಂದ ಮೀನು, ನಕ್ಷತ್ರ ಮೀನು, ಡಾಲ್ಫಿನ್ ಅಥವಾ ನೀರಿಗೆ ಸಂಬಂಧಿಸಿದ ಬೇರೆ ಯಾವುದೇ ಸಂಕೇತಗಳನ್ನು ಧರಿಸಬಹುದು. ನಿಮ್ಮ ಜೀವನದಲ್ಲಿ ಸುಖ, ಶಾಂತಿ ಬರಬೇಕೆಂದರೆ  ಮುತ್ತು ಅಥವಾ ಚಿಪ್ಪನ್ನು ಧರಿಸಬೇಕು. ವೃತ್ತಿಯಲ್ಲಿ  ಉನ್ನತಿ ಪಡೆಯಬೇಕೆಂದರೆ ಚಂದ್ರನ ಆಕಾರದಲ್ಲಿರುವ ಬೆಳ್ಳಿಯ ಆಭರಣವನ್ನು ಧರಿಸಬೇಕು.

 

ಸಿಂಹ (Simha)

ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಈ ರಾಶಿಯವರಿಗೆ ತುಂಬಾ ಅದೃಷ್ಟವೆಂದು ಪರಿಗಣಿಸಲಾಗಿದೆ. ಅಗ್ನಿಯ ರಾಶಿಯಾಗಿರುವ ಕಾರಣ ಈ ರಾಶಿಯವರು ಬೆಂಕಿ ಅಥವಾ ಸೂರ್ಯನ ಆಕಾರದಲ್ಲಿರುವ ಬಂಗಾರದ ಆಭರಣಗಳನ್ನು ಧರಿಸಬೇಕು. ಇದನ್ನು ಹೊರತುಪಡಿಸಿ ಬೆಕ್ಕಿನ ಸಂಕೇತವು ಒಳ್ಳೆಯದು. ಇದರಿಂದ ವೃತ್ತಿಗೂ ಒಳ್ಳೆಯದಾಗುವುದು.

 

ಕನ್ಯಾರಾಶಿ (Kanya)

ಭೂಮಿಗೆ ಸಂಬಂಧಿಸಿದ ರಾಶಿಯಾಗಿರುವ ಇದಕ್ಕೆ ನೈಸರ್ಗಿಕವಾಗಿ ಸಿಗುವಂತಹ ರತ್ನಗಳಲ್ಲಿ ವೃತ್ತಾಕಾರದ ತೂತು ಇದ್ದರೆ ಒಳ್ಳೆಯದು. ಸಮೃದ್ಧಿಗಾಗಿ ನೀವು ಹಣ್ಣುಗಳಾದ ಸೇಬು ಮತ್ತು ಪೀಚನ ಸಂಕೇತಗಳನ್ನು ಧರಿಸಬಹುದು.

 

ತುಲಾ (Tula)

ಇತರೆ ವಾಯುವಿನ ರಾಶಿಯಂತೆ ಈ ರಾಶಿಯವರಿಗೆ ಹಕ್ಕಿಗಳು ಅದೃಷ್ಟದ ಸಂಕೇತವಾಗಿವೆ. ಹಮ್ಮಿಂಗ್ ಪಕ್ಷಿಗಳ ಸಂಕೇತವನ್ನು ಧರಿಸಿದರೆ ಅದರಿಂದ ಸಾಮಾಜಿಕವಾಗಿ ನಿಮಗೆ ಏಳಿಗೆಯಾಗಲಿದೆ. ಯಾವುದೇ ರೀತಿಯ ಸವಾಲುಗಳಿಂದ ಮೇಲೆದ್ದು ಬರಬೇಕೆಂದು ನೀವು ನಿರ್ಧರಿಸಿದ್ದರೆ  ಆಗ ನೀವು ಅಮೀತಿಸ್ಟ್  ಧರಿಸಬೇಕು.

 

ವೃಶ್ಚಿಕ (Vrushchika)

ಜಲದ ರಾಶಿಯಾಗಿರುವ ಇದಕ್ಕೆ ಚಂದ್ರನು ತುಂಬಾ ಅದೃಷ್ಟವೆಂದು ನಂಬಲಾಗಿದೆ. ನಕ್ಷತ್ರದ ಆಕಾರದ ಒಳ್ಳೆಯ ಆಭರಣ ಧರಿಸುವುದು ವೃತ್ತಿಪರವಾಗಿ ನಿಮಗೆ ಯಶಸ್ಸು ತಂದುಕೊಡಲಿದೆ . ಹಾವು ಮತ್ತು ಸೇಬಿನ ಸಂಕೇತವು ನಿಮಗೆ ಜೀವನದಲ್ಲಿ ಸಂತೋಷವನ್ನು ತರಲಿದೆ.

 

ಧನು ರಾಶಿ (Dhanu)

ಅಗ್ನಿಯ ರಾಶಿಯಾಗಿರುವ ಇದು ನಕ್ಷತ್ರ ಮತ್ತು ಸೂರ್ಯನನ್ನು ಪ್ರತಿನಿಧಿಸುವುದು. ಬಿಲ್ಲು ಮತ್ತು ಬಾಣದ ಸಂಕೇತವೂ ಈ ರಾಶಿಯವರಿಗೆ ಅದೃಷ್ಟ ತರಲಿದೆ. ಪ್ರೀತಿಯು ಜೀವನದಲ್ಲಿ ಯಶಸ್ವಿಯಾಗಲು ಹೃದಯ ಮತ್ತು ಬಿಲ್ಲಿನ ಸಂಕೇತವಿರುವ ಪೆಂಡೆಂಟ್ ಧರಿಸಿ. ವೈವಾಹಿಕ ಜೀವನದಲ್ಲಿ ಸಂತೋಷ ಬೇಕೆಂದರೆ ಮುತ್ತಿನಲ್ಲೇ    ಶ್ರೇಷ್ಠವಾಗಿರುವುದನ್ನು ಧರಿಸಿರಿ.

 

ಮಕರ (Makara)

ಈ ರಾಶಿಯವರು ಭೂಮಿಯ ರಾಶಿಯಾಗಿದ್ದು. ಯಾವುದೇ ರೀತಿಯ ಹರಳನ್ನು  ಧರಿಸಿದರೂ ಇವರಿಗೆ ಅದೃಷ್ಟ ಒಲಿದು ಬರಲಿದೆ. ಗುಲಾಬಿ ಸ್ಪಟಿಕದ ಶಿಲೆ ಈ ರಾಶಿಯವರಿಗೆ ತುಂಬಾ ಒಳ್ಳೆಯದು. ಇದನ್ನು ಧರಿಸಿದರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ವ್ಯಾಪಾರ ಮತ್ತು ಪ್ರೀತಿಯು  ಜೀವನದಲ್ಲಿ ಸಿಲುಕಿ  ಹಾಕುವುದನ್ನು ತಪ್ಪಿಸಲು ಅಮೇಥಿಸ್ಟ್ ಧರಿಸಿ.

 

ಕುಂಭರಾಶಿ (Kumbha)

ಇದು ವಾಯುವಿಗೆ ಸಂಬಂಧಪಟ್ಟ ರಾಶಿಯಾಗಿರುವ ಕಾರಣ ರೆಕ್ಕೆ ಇರುವ ವಸ್ತುಗಳು ಅದೃಷ್ಟ ತರಬಲ್ಲದು. ಅಪಘಾತಗಳನ್ನು ದೂರವಿರಿಸಬೇಕಾದರೆ ನೀವು ಜೀರುಂಡೆಯ ಸಂಕೇತಗಳನ್ನು ಧರಿಸಬೇಕು. ಜೇನು ನೊಣದ ಸಂಕೇತವು ಆರ್ಥಿಕ ಸಮಸ್ಯೆಯನ್ನು ನಿವಾರಿಸಲಿದೆ. ಪತಂಗವು ನಿಮ್ಮ  ಕ್ರಿಯಾತ್ಮಕತೆಯನ್ನು ಹೆಚ್ಚಿಸಲು ನೆರವಾಗುವುದು.

 

ಮೀನರಾಶಿ (Meena)

ಜಲ ರಾಶಿಯಾಗಿರುವ ಈ ರಾಶಿಯವರಿಗೆ ಅದೃಷ್ಟವೆಂದರೆ ಸಮುದ್ರದ ಅಲೆಗಳು, ನದಿಗಳು ಮತ್ತು ಜಲಪಾತಗಳು. ಇದನ್ನು ಹೊರತುಪಡಿಸಿ ಕೆಲವೊಂದು ಲೋಹಗಳು ಕೂಡ ಇವರಿಗೆ ಅದೃಷ್ಟ ತರಬಹುದು.    ಬೆಳ್ಳಿಯು ಈ ರಾಶಿಯವರಿಗೆ ಅದೃಷ್ಟ ಲೋಹವಾದರೆ  ಪಚ್ಚೆ ಅದೃಷ್ಟದ ಕಲ್ಲು. ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನೀವು ಬೆಳ್ಳಿಯ ಡಾಲ್ಫಿನ್ ಸಂಕೇತವನ್ನು ಧರಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top