ಭವಿಷ್ಯ

ಡಿಸೆಂಬರ್ 5 : ನಿತ್ಯಭವಿಷ್ಯ ಮತ್ತೆ ಪಂಚಾಂಗ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಂಗಳವಾರ, ೦೫ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೧
ಸೂರ್ಯಾಸ್ತ : ೧೭:೪೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಆರಿದ್ರ
ಯೋಗ : ಶುಭ
ಪ್ರಥಮ ಕರಣ : ಗರಜ – ೧೩:೪೬ ವರೆಗೆ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ೧೧:೪೭ – ೧೨:೩೨
ಅಮೃತಕಾಲ : ೧೫:೪೦ – ೧೭:೦೪

ರಾಹು ಕಾಲ: ೧೪:೫೯ – ೧೬:೨೪
ಗುಳಿಕ ಕಾಲ: ೧೨:೧೦ – ೧೩:೩೪
ಯಮಗಂಡ: ೦೯:೨೧ – ೧೦:೪೫

 

ಮೇಷ (Mesha)

ಸ್ನೇಹಿತರು ಮತ್ತು ಬಂಧುಗಳ ಜೊತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.

 

 

ವೃಷಭ (Vrushabha)

ಗುರುವಿನ ಕಪೆಯಿಂದ ಅಂತಃಶಕ್ತಿಯನ್ನು ಗಳಿಸುವ ನಿಮ್ಮ ಮುಖದಲ್ಲಿ ತೇಜಸ್ಸು ಹೊರಹೊಮ್ಮುವುದು. ಸಂಗಾತಿಯ ಸಾಂಗತ್ಯ, ಸಲ್ಲಾಪ ಮುದ ನೀಡುವುದು.

 

ಮಿಥುನ (Mithuna)

ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು. ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.

 

ಕರ್ಕ (Karka)

ಟ್ಟಿನಿಂದ ಕೆಲವು ಅವಕಾಶಗಳನ್ನು ಇಂದು ಕಳೆದುಕೊಳ್ಳುವಿರಿ. ನಿಮ್ಮನ್ನು ಕೆರಳಿಸುವ ಪ್ರಚೋದಿಸುವ ಹಲವು ವಿದ್ಯಾಮಾನಗಳು ನಡೆಯಬಹುದು. ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನಿದ್ದು ಬಿಡಿ.

 

ಸಿಂಹ (Simha)

ಪ್ರೇಮಾನುಬಂಧಗಳು ಬಲವಾಗುತ್ತವೆ. ಸರಿಯಾದ ದಿಕ್ಕಿನಲ್ಲಿ ಚಿಂತಿಸುವಿರಿ. ನಿಮ್ಮ ಗಟ್ಟಿ ನಿರ್ಧಾರಗಳು ಜೀವನದ ಗತಿಯನ್ನೆ ಬದಲಾಯಿಸುವುದು. ಇದಕ್ಕೆ ಪೂರಕವಾಗಿ ಕೌಟುಂಬಿಕವಾಗಿ ಬೆಂಬಲ ವ್ಯಕ್ತವಾಗುವುದು. ಸಂತಸದ ದಿನ.

 

ಕನ್ಯಾರಾಶಿ (Kanya)

ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವುದರೆಂದೇ ನಿಮ್ಮನ್ನು ಕಂಡರೆ ಎಲ್ಲರಿಗೂ ಗೌರವ ಪ್ರೀತಿ. ಇದನ್ನು ಕಾಪಾಡಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ. ನಿಮ್ಮ ಬುದ್ಧಿವಂತಿಕೆಯ ಬಗ್ಗೆ ಎಲ್ಲೆಡೆ ಚರ್ಚೆ ಆಗುವುದು.

 

ತುಲಾ (Tula)

ವೃತ್ತಿಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧುಮಿತ್ರರಿಂದ ವಿಮರ್ಶೆ ಟೀಕೆಗಳು ಬರುವ ಸಾಧ್ಯತೆ ಇರುವುದು. ಸಹೋದರನಿಂದ ಸಹಾಯ ದೊರೆಯುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ವೃಶ್ಚಿಕ (Vrushchika)

ಸರಿಕಂಡದ್ದನ್ನು ಧೈರ್ಯವಾಗಿ ಎಲ್ಲರ ಮುಂದೆ ಮಾತನಾಡುವಿರಿ. ಇದರಿಂದ ವಿರೋಧಿಗಳು ಹಿಮ್ಮೆಟ್ಟುವರು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು. ಧನಕಾರಕ ಗುರುವಿನಿಂದ ಆರ್ಥಿಕ ಸಮಸ್ಯೆಯು ಈ ದಿನ ಬರಲಾರದು.

 

ಧನು ರಾಶಿ (Dhanu)

ಭರವಸೆಯ ವ್ಯವಹಾರದ ಅವಕಾಶವೊಂದು ನಿಮಗೆ ಇಂದು ಬರುವುದು. ಇದರಿಂದ ಉತ್ತೇಜಿತರಾಗಿ ಈ ದಿನವನ್ನು ಬಹು ಖುಷಿಯಿಂದ ಕಳೆಯುವಿರಿ. ಆಹಾರ-ವಿಹಾರದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಪ್ರಯಾಣದಲ್ಲಿ ಸುಖ ಕಾಣುವಿರಿ.

 

ಮಕರ (Makara)

ಉಪಾಧ್ಯಾಯರಿಗೆ ಹೆಚ್ಚಿನ ಒತ್ತಡ ಎದುರಾಗುವುದು. ಹೋಟೆಲ್ ಉದ್ಯಮಿಗಳಿಗೆ ಒಳ್ಳೆಯ ದಿನ. ದೇಹದಲ್ಲಿ ಆಲಸ್ಯ, ಚಿತ್ತ ಚಾಂಚಲ್ಯದಿಂದ ಕೆಲಸದಲ್ಲಿ ತಪ್ಪು ನುಸುಳುವುದು. ಕುಲದೇವತಾ ಆರಾಧನೆಯಿಂದ ಒಳಿತಾಗುವುದು.

 

ಕುಂಭರಾಶಿ (Kumbha)

ಉತ್ತಮ ಆರೋಗ್ಯ. ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸದ ಹಂತವನ್ನು ಮೇಲಕ್ಕೆತ್ತಲು ಸಹಾಯ ಮಾಡುವುದು. ಬಂಧುಮಿತ್ರರು ಪ್ರೀತಿಯಿಂದ ಕಾಣುವರು. ಮನೆಯಲ್ಲಿ ಮಂಗಳ ಕಾರ್ಯಗಳ ಸಂಭ್ರಮ.

 

ಮೀನರಾಶಿ (Meena)

ಕೆಲವು ರೋಗಗಳು ಪದೇ ಪದೆ ಕಾಡುವುದರಿಂದ ಮನಸ್ಸಿಗೆ ಬೇಸರ ಮನೆಯಲ್ಲಿ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಬರುವುದು. ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top