fbpx
ಮನೋರಂಜನೆ

ಸ್ಟಾರ್’ಗಳ ಪಾನಿಪುರಿ ಫಿಟ್ ನೆಸ್ ಮಂತ್ರ!

ಸ್ಟಾರ್’ಗಳ ಪಾನಿಪುರಿ ಫಿಟ್ ನೆಸ್ ಮಂತ್ರ!

 

 

ಕನ್ನಡದ ಹೀರೋಗಳು ಸಿನಿಮಾದಿಂದ ಸಿನಿಮಾಗೆ ತಮ್ಮ ದೇಹದ ಶೇಪು ಬದಲಿಸಿಕೊಳ್ಳೋ ಟ್ರೆಂಡು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿದೆ. ಆಕ್ಷನ್ ಹೀರೋಗಳು ಹೀಗೆ ತಮ್ಮ ದೇಹದಾರ್ಢ್ಯತೆಯನ್ನು ಬದಲಿಸಿಕೊಳ್ಳೋದೇನೋ ಸರಿ. ಆದರೆ ಈಗೀಗ ಲವರ್ ಬಾಯ್ಸ್ ಅಂತಾ ಬ್ರಾಂಡ್ ಆದವರೂ ಕೂಡ ತಮ್ಮ ದೇಹ ದಂಡಿಸಿ ಪವರ್ ಪ್ಯಾಕುಗಳಂತೆ ಕಂಗೊಳಿಸುತ್ತಿದ್ದಾರೆ.

ಬರೀ ದೇಹತೂಕವನ್ನು ಹೆಚ್ಚಿಸಿಕೊಳ್ಳೋದು ಮಾತ್ರವಲ್ಲದೆ ಸಾಹಸಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಅನಿಸಿಕೊಳ್ಳುತ್ತಿದ್ದಾರೆ. ಪರ್ಮನೆಂಟು ಲವರ್ ಬಾಯ್ ಅಂತಾ ಹಣೆಪಟ್ಟಿ ಧರಿಸಿದ್ದ ಕೃಷ್ಣ ಅಜೇಯ್ ರಾವ್ ಕೂಡ ಕಳೆದೆರೆಡು ಸಿನಿಮಾಗಳಿಂದ ಹೊಸ ಇಮೇಜ್ ಪಡೆದಿದ್ದಾರೆ. ಅಜಯ್ ಆಕ್ಷನ್ ಹೀರೋ ಆಗಿ ಎಂಟ್ರಿ ನೀಡಿದ್ದ ಧೈರ್ಯಂ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

 

 

ಅಜಯ್ ಹೀಗೆ ಇಮೇಜು ಬದಲಿಸಿಕೊಳ್ಳಲು ಪ್ರೇರಕ ಶಕ್ತಿಯಾಗಿ ನಿಂತವರು ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ ಅವರಂತೆ. ‘ನೀವು ಧಾರಾಳವಾಗಿ ಫಿಟ್ಟ್ ನೆಸ್ ಹೊಂದಬಹುದು’ ಅಂತಾ ಹುರಿದುಂಬಿಸಿ ಸಾಕಷ್ಟು ಟ್ರೈನ್ ಮಾಡಿ ಅಜಯ್ ಅವರ ಇಮೇಜು ಬದಲಿಸಿದರಂತೆ.ಅಜಯ್ ರಾವ್ ಗೆ ಮಾತ್ರವಲ್ಲ ಬಹುಶಃ ಕನ್ನಡದ ಅನೇಕ ಹೀರೋಗಳು ದೈಹಿಕವಾಗಿ ಮಾರ್ಪಾಡು ಹೊಂದಲು ಕಾರಣವಾಗಿರುವವರು ಇದೇ ಪಾನೀಪುರಿ ಕಿಟ್ಟಿ ಅನ್ನೋದಿಲ್ಲಿ ಗಮನಾರ್ಹ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top