fbpx
ಸಮಾಚಾರ

ಅಕ್ರಮ ಸಂಬಂಧ ಇಟ್ಟುಕೊಂಡ ಪತಿಯ ಗುಪ್ತಾಂಗಕ್ಕೆ ಕುದಿಯುತ್ತಿರುವ ಎಣ್ಣೆಯನ್ನು ಸುರಿದ ಪತ್ನಿ !

ಬೇರೆ ಹೆಂಗಸಿನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡ ಗಂಡನ ಗುಪ್ತಾಂಗಕ್ಕೆ ಬಿಸಿ ಬಿಸಿ ಕುದಿಯುತ್ತಿರುವ ಎಣ್ಣೆಯನ್ನು ಸುರಿದ ಘಟನೆ ಮಧುರೈಯಲ್ಲಿ ನಡೆದಿದೆ , ಗಾಯಗೊಂಡವನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .

 

ಅಸಲಿಗೆ ನಡೆದಿದ್ದೇನೆಂದರೆ 37 ವರ್ಷ ವಯಸ್ಸಿನ ಎಂ.ಪರಮೇಶ್ವರನ್ ವಿಪರೀತ ಮಹಿಳೆಯರ ಚಟ ಹೊಂದಿದ್ದು ವಿರಾಟ್ಟಿಪಟ್ಟು ಎಂಬ ಸ್ಥಳದಲ್ಲಿರುವ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ , ಇದರ ಬಗ್ಗೆ ಹೆಂಡತಿ ಶಶಿಕಲಾಗೆ ಮಾಹಿತಿ ದೊರೆತಿದ್ದು ಆಕೆ ಆ ಶಂಕೆಯನ್ನು ಖಾತ್ರಿಗೊಳಿಸಿಕೊಂಡಿದ್ದಾಳೆ , ಆಕೆಯ ಸಂಗ ಬಿಡುವಂತೆ ಪ್ರತಿನಿತ್ಯ ಹೇಳತೊಡಗಿದ್ದಾಳೆ ಇದರಿಂದ ದಂಪತಿಗಳ ಮಧ್ಯೆ ಆಗಾಗ ಜಗಳವಾಗುತ್ತಿತ್ತು .

ಮನೆಗೆ ಹೋದರೆ ಹೆಂಡತಿ ಜಗಳ ಆಡುತ್ತಾಳೆ ಎಂದು ಭಾವಿಸಿ ಗಂಡ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದಾನೆ , ಈ ಸಮಯದಲ್ಲಿ ಪತ್ನಿ ಶಶಿಕಲಾ ಪೊಲೀಸ್ ಗೆ ದೂರು ನೀಡಿದ್ದಾಳೆ ನಂತ್ರ ರಾಜಿ ಮಾಡಿದ್ದಾರೆ , ಆದರೂ ಸಹ ಪರಮೇಶ್ವರ್ ತನ್ನ ಅಕ್ರಮ ಸಂಬಂಧ ನಿಲ್ಲಿಸಲಿಲ್ಲ .

 

ಇದರಿಂದ ತಲೆ ಕೆಡಿಸಿಕೊಂಡ ಶಶಿಕಲಾ ಪತಿಗೆ ಕರೆ ಮಾಡಿ , ಪ್ರೀತಿಯಿಂದ ಮಾತಾಡಿಸಿ ಇವತ್ತು ಮನೆಗೆ ಬನ್ನಿ ಎಂದು ಕೇಳಿಕೊಂಡಿದ್ದಾಳೆ , ಆತ ಮನೆ ಗೆ ಬಂದು ಗಾಢವಾಗಿ ನಿದ್ದೆ ಹೋದಮೇಲೆ
ಕುದಿಯುವ ಎಣ್ಣೆ ತಂದು ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ , ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top