ದೇವರು

ಮನುಸ್ಮೃತಿಯ ಪ್ರಕಾರ ಹೆಣ್ಣುಮಕ್ಕಳು ಅಂದ್ರೆ ಈ ತರ ಇರಬೇಕಂತೆ ಹಾಗೆ ಈ ಆರು ಕೆಲಸಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮನುಸ್ಮೃತಿಯ ಪ್ರಕಾರ ಮಹಿಳೆಯರು ಈ ಆರು ಕೆಲಸವನ್ನು ಮಾಡಬಾರದು .

 

ಮನುಸ್ಮೃತಿ ಹಿಂದೂ ಧರ್ಮದ ಒಂದು ಪ್ರಮುಖ ಗ್ರಂಥ. ಮನುಸ್ಮೃತಿಯಲ್ಲಿ ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಲಾಗಿದೆ.ಇದರ ಪ್ರಕಾರ ಮಹಿಳೆಯಾದವಳು  ಈ 6  ಕೆಲಸಗಳನ್ನು ಮಾಡಬಾರದು.

 

 

ಮನುಸ್ಮೃತಿಯ ಪ್ರಕಾರ ಮಹಿಳೆಯಾದವಳು ಮದ್ಯಪಾನ ಮಾಡಬಾರದು. ಮದ್ಯಪಾನ ಮಾಡಿದಾಗ ಪ್ರಪಂಚದ ಅರಿವು ಇರುವುದಿಲ್ಲ. ಈ ವೇಳೆ ಮರ್ಯಾದೆ ಹೋಗುವ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಮದ್ಯಪಾನ ವ್ಯಕ್ತಿಗೊಂದೇ ಅಲ್ಲ, ಸಮಾಜಕ್ಕೂ ಹಾನಿಕಾರಕ. ಹಾಗಾಗಿ ಮಹಿಳೆ ಮಾತ್ರ  ಅಲ್ಲ ಪುರುಷ ಕೂಡ ಮದ್ಯಪಾನ ಮಾಡಬಾರದು.

 

 

ದುಷ್ಟ ಪುರುಷನ ಸಹವಾಸದಿಂದ ಮಹಿಳೆಯರು ದೂರವಿರಬೇಕೆಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ. ದುಷ್ಟ ಪುರುಷನ ಸಹವಾಸ ಮಾಡಿದರೆ ಮಹಿಳೆ ಕಷ್ಟ ಅನುಭವಿಸಬೇಕಾಗುತ್ತದೆ. ದುಷ್ಟನ ಸ್ವಭಾವದಂತೆ ಮಹಿಳೆಯ ಸ್ವಭಾವವು ಬದಲಾಗುವ ಸಾಧ್ಯತೆ ಇರುತ್ತದೆ.

ಮದುವೆಯಾದ ಮಹಿಳೆ ಸದಾ ಪತಿಯ ಜೊತೆಗಿರಬೇಕೆಂದು ಗ್ರಂಥದಲ್ಲಿ ಹೇಳಲಾಗಿದೆ. ಪತಿಗೆ ರೋಗ ಅಥವಾ ಇನ್ಯಾವುದೇ ಸಮಸ್ಯೆ ಕಾಡಿದಾಗಲೂ ಆತನ ಜೊತೆಗಿರಬೇಕು. ಪತಿಯಿಂದ ದೂರವಿರುವ ಪತ್ನಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. ಇದು ಆಕೆಯ ಚಾರಿತ್ರ್ಯಕ್ಕೆ ಕಳಂಕ ತರುವ ಸಾಧ್ಯತೆ ಇರುತ್ತದೆ.

 

 

ಕೆಲವು ಮಹಿಳೆಯರು ಕೆಲಸವಿಲ್ಲದೆ ಸುತ್ತಾಡುತ್ತಿರುತ್ತಾರೆ. ಮನುಸ್ಮೃತಿಯ ಪ್ರಕಾರ ಕೆಲಸವಿಲ್ಲದೆ ಅಲ್ಲಿ ಇಲ್ಲಿ ವಿನಾಕಾರಣ ಸುತ್ತಾಡಬಾರದು. ಮದುವೆಯಾದ ಮಹಿಳೆ ಹೀಗೆ ಮಾಡಿದಲ್ಲಿ ಆಕೆಗೆ ಸಿಗಬೇಕಾದ ಸನ್ಮಾನ, ಗೌರವ ಸಿಗದೆ ಇರುವ ಸಾಧ್ಯತೆ ಇರುತ್ತದೆ .

 

 

ಹಗಲಿನಲ್ಲಿ ಹಾಗೂ ಬೆಳಗ್ಗೆ ಸೂರ್ಯೋದಯವಾದ ಮೇಲೆ ಮಹಿಳೆ ಮಲಗಬಾರದು ಎಂದು ಗ್ರಂಥದಲ್ಲಿ ಹೇಳಲಾಗಿದೆ. ತುಂಬಾ ಸಮಯ ಮಹಿಳೆ ಮಲಗಿದ್ದಲ್ಲಿ ಮನೆಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ .ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡುಬರುವುದು. ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಪತಿ ,ಪತ್ನಿಯರ  ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

 

 

ಬೇರೆಯವರ ಮನೆಯಲ್ಲಿ ನೆಲೆಸುವುದು ಮನುಸ್ಮೃತಿಯ ಪ್ರಕಾರ ಸೂಕ್ತವಲ್ಲ. ಪತಿಯ ಮನೆಯ ಪರಿಸ್ಥಿತಿ ಹೇಗೇ ಇರಲಿ ಅದನ್ನು ಅನುಸರಿಸಿಕೊಂಡು ಹೋಗಬೇಕು. ಪತಿಯ ಮನೆಯನ್ನು  ತೊರೆದು ಬೇರೆಯವರ ಮನೆಯಲ್ಲಿ  ವಾಸವಾಗುವುದು ಮಹಿಳೆಯ ಶ್ರೇಯಸ್ಸಿಗೆ  ಅಡ್ಡಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top