ಕಿರುತೆರೆ

ಶೃತಿ ಮೇಲೆ ಕ್ರಷ್ ಆಗಿರುವುದನ್ನ ಎಲ್ಲರ ಮುಂದೆಯೇ ಒಪ್ಪಿಕೊಂಡ ಚಂದನ್ ಶೆಟ್ಟಿ.

ಶೃತಿ ಮೇಲೆ ಕ್ರಶ್ ಆಗಿರುವುದನ್ನ ಎಲ್ಲರ ಮುಂದೆಯೇ ಒಪ್ಪಿಕೊಂಡ ಚಂದನ್ ಶೆಟ್ಟಿ.

 

 

ಒಂದು ಕಡೆ ಬಿಗ್ ಬಾಸ್ ಕಾರ್ಯಕ್ರಮ 50 ದಿನಗಳನ್ನು ಪೂರೈಸಿದ್ದು ಇನ್ನೊಂದು ಕಡೆ ಬಿಗ್ ಬಾಸ್ ಮನೆಯ ಒಂದೊಂದೇ ಪ್ರೇಮ ಕತೆಗಳು ಬಹಿರಂಗವಾಗುತ್ತಿವೆ. ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ. ಈಗ ವೀಕ್ಷಕರಲ್ಲಿ ಕಾಡುತ್ತಿದ್ದ ಅಂತಹುದೇ ಪ್ರಶ್ನೆಗೆ ಉತ್ತರ ಸಿಕ್ಕಿದೆ.

 

 

ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎರಡನೇ ಸೀಸನ್ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಬಂದಿದ್ದರು. ದಿನವಿಡೀ ಅಕುಲ್ ಆದೇಶಗಳನ್ನು ಪಾಲಿಸುವಂತೆ ಬಿಗ್ ಬಾಸ್ ಸೂಚಿಸಿದ್ದರು. ರಾತ್ರಿಯಾದ ಮೇಲೆ ಗಾರ್ಡನ್ ಏರಿಯಾದಲ್ಲಿ ಅಕುಲ್ ಅವರೇ ನಡೆಸಿಕೊಡುತ್ತಿದ್ದ ಸೂಪರ್ ಟಾಕ್ ಟೈಮ್ ಷೋ ಅಣಕನ್ನು ಸೃಷ್ಟಿ ಮಾಡಿ ಅದೇ ರೀತಿಯಲ್ಲೇ ಮನೆಯ ಎಲ್ಲ ಸದಸ್ಯರಿಗೂ ರ್ಯಾಪಿಡ್ ಫೈರ್ ರೌಂಡ್ ಆಡಿಸಲಾಯಿತು. ಇದರ ಪ್ರಕಾರ ಅಕುಲ್ ಯಾರಿಗೆ ಪ್ರಶ್ನೆಯನ್ನು ಕೇಳುತ್ತಾರೋ ಅವರು ತಕ್ಷಣ ಉತ್ತರ ನೀಡಬೇಕಾಗಿತ್ತು.

 

 

ಎಲ್ಲರಂತೆ ಚಂದನ್ ಮತ್ತು ನಿವೇದಿತಾರನ್ನು ಹಾಟ್ ಸೀಟ್ ನಲ್ಲಿ ಕೂರಿಸಿ ಪ್ರಶ್ನೆಗಳನ್ನು ಕೇಳಿದ ಅಕುಲ್ “ಈ ಮನೆಯಲ್ಲಿ ನಿಮಗೆ ಯಾರ ಮೇಲೆ ಕ್ರಶ್ ಆಗಿದೆ” ಎಂದು ಚಂದನ್ ಗೆ ಕೇಳಿದರು” ಈ ಪ್ರಶ್ನೆ ಹೆಚ್ಚು ಸಮಯವನ್ನು ತೆಗೆದುಕೊಳ್ಳದೆ ತಕ್ಷಣ “ಶ್ರುತಿ ಮೇಲೆ ಕ್ರಶ್ ಆಗಿದೆ” ಎಂದು ಚಂದನ್ ಉತ್ತರಿಸಿದರು. ಇಷ್ಟು ದಿನ ತಮಗೆ ಬಿಗ್ ಬಾಸ್ ಮನೆಯಲ್ಲಿ ಲವ್ ಆಗಿರುವ ಬಗ್ಗೆ ಹೇಳಿಕೊಂಡಿದ್ದ ಚಂದನ್ ಯಾರ ಮೇಲೆ ಲವ್ ಆಗಿದೆ ಎಂದು ಹೇಳಿಕೊಂಡಿರಲಿಲ್ಲ. ಆ ಪ್ರಶ್ನೆ ಈಗ ವೀಕ್ಷಕರಿಗೆ ಉತ್ತರ ಸಿಕ್ಕತಂತಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top