ಆರೋಗ್ಯ

ಅಡುಗೆ ಮಾಡೋಕೆ ಅಲ್ಯೂಮಿನಿಯಂ ಪಾತ್ರೆ , ಅಡುಗೆ ತಾಜಾ ಇರ್ಲಿ ಅಂತ ಅಲ್ಯೂಮಿನಿಯಂ ಫಾಯಿಲ್ ಬಳಸ್ತಾಯಿದ್ರೆ ಇನ್ಮುಂದೆ ಈ ತಪ್ಪು ಮಾಡಿ ನಿಮ್ಮ ಆರೋಗ್ಯ ಹಾಳು ಮಾಡ್ಕೋಬೇಡಿ

ಅಡುಗೆ ಮಾಡಲು ಅಲ್ಯೂಮಿನಿಯಂ ಅಥವಾ ಹಿಂಡಾಲಿಯಂನಿಂದ ತಯಾರಿಸಿದ ಅಡುಗೆ ಪಾತ್ರೆಗಳನ್ನು ಹಲವರು ಬಳಸುತ್ತಾರೆ ಅಂತಹ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ
ಆರೋಗ್ಯಕ್ಕೆ ಹಾನಿಕಾರಕವಾಗಿದೆ ಇಂತಹ ಪಾತ್ರೆಗಳನ್ನು 5 ವರ್ಷಗಳಿಗಿಂತ ಹೆಚ್ಚು ಕಾಲ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ .

ಉಕ್ಕಿನ ಚಮಚವನ್ನು ಅಲ್ಯೂಮಿನಿಯಂ ಮೇಲೆ ಬಲವಂತವಾಗಿ ವಿರುದ್ಧವಾಗಿ ಉಜ್ಜಿದಾಗ ಸಣ್ಣ ಕಣಗಳು ಶೇಷವಾಗಿ ಗೋಚರಿಸುತ್ತವೆ ಈ ರೀತಿಯ ಪಾತ್ರೆಗಳಲ್ಲಿ ಅಡುಗೆ ಬೇಯಿಸಿ ತಿಂದರೆ ಈ ಕಣಗಳು ದೇಹವನ್ನು ಆಹಾರದ ಮೂಲಕ ಪ್ರವೇಶಿಸುತ್ತವೆ. ಸರಾಸರಿಯಾಗಿ, 5 ಮಿಲಿಗ್ರಾಂಗಳಷ್ಟು ಅಲ್ಯೂಮಿನಿಯಂ ಆಹಾರದ ಮೂಲಕ ದೇಹಕ್ಕೆ ಸೇರುತ್ತದೆ .

 

 

ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆ ಬಳಸಿದಾಗ ಅಲ್ಯೂಮಿನಿಯಂನಲ್ಲಿರುವ ಅಯಾನ್ ಅಂಶಗಳು ಆಮ್ಲೀಯ ವಸ್ತುಗಳಲ್ಲಿ ಸುಲಭವಾಗಿ ಕರಗುತ್ತವೆ ಉದಾ :ನಿಂಬೆ, ಟೊಮೆಟೊ ಇಂತಹ ಆಮ್ಲೀಯ ಪದಾರ್ಥಗಳು.

ಅಡುಗೆ ಮಾಡಲು ಅಲ್ಯೂಮಿನಿಯಂ ಪಾತ್ರೆ ಬಳಸಿದಾಗ ಆಹಾರದ ಮೂಲಕ ದೇಹಕ್ಕೆ ಸೇರಿದ ಅಲ್ಯೂಮಿನಿಯಂ ನಂತಹ ಲೋಹಗಳನ್ನು ಹೊರಹಾಕಲು ದೇಹಕ್ಕೆ ಕಷ್ಟವಾಗುತ್ತದೆ , ದೇಹದಲ್ಲಿ ಸಂಗ್ರಹವಾದ ಲೋಹಗಳು ಸಾಮರ್ಥ್ಯವನ್ನು ಮೀರಿ ಹೆಚ್ಚಾದರೆ ಸ್ನಾಯುಗಳು, ಮೂತ್ರಪಿಂಡಗಳು, ಪಿತ್ತಜನಕಾಂಗ, ಮೂಳೆಗಳು ಇತ್ಯಾದಿಗಳಲ್ಲಿ ಶೇಖರಿಸಿಡಲು ಪ್ರಾರಂಭವಾಗುತ್ತದೆ, ಅಲ್ಯೂಮಿನಿಯಂ ಮೆದುಳಿನ ಜೀವಕೋಶಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಹೀಗಾಗಿ, ದೇಹದಲ್ಲಿ ಸಂಗ್ರಹವಾದ ಅಲ್ಯೂಮಿನಿಯಂ ನಿಧಾನವಾಗಿ ವಿಷವಾಗಿರುತ್ತದೆ.

 

ಅಸ್ವಸ್ಥತೆ, ಆತಂಕ, ನೆನಪಿನ ಶಕ್ತಿ ಕುಂದುವುದು , ಆಸ್ಟಿಯೊಪೊರೋಸಿಸ್, ಕಣ್ಣಿನ ಅಸ್ವಸ್ಥತೆ, ಮೂತ್ರಪಿಂಡ ವೈಫಲ್ಯ, ಅತಿಸಾರ, ಹೈಪರ್ಯಾಸಿಟಿ, ಅಜೀರ್ಣ, ಹೊಟ್ಟೆ ಸಮಸ್ಯೆ , ಕೊಲೈಟಿಸ್, ಬಾಯಿ ಹುಣ್ಣು, ಎಸ್ಜಿಮಾ , ಚರ್ಮದ ತೊಂದರೆಗಳು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ .

 

 

ಆದ್ದರಿಂದ ಅಲ್ಯೂಮಿನಿಯಂ ಪಾತ್ರೆ ಬಳಸುವ ಬದಲು ತಾಮ್ರ , ಕಂಚು , ಸ್ಟೇನ್ಲೆಸ್ ಸ್ಟೀಲ್ ಅಥವಾ ಮಣ್ಣಿನ ಮಡಕೆಗಳನ್ನು ಅಡುಗೆ ಮಾಡಲು ಬಳಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top