ಮನೋರಂಜನೆ

ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಗಣೇಶ್-ವಿಜಯ್.

ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಗಣೇಶ್-ವಿಜಯ್.

 

 

ಕನ್ನಡದಲ್ಲಿ ಇತ್ತೀಚಿಗೆ ಮಲ್ಟಿ ಸ್ಟಾರ್ ಚಿತ್ರಗಳು ಹೆಚ್ಚಾಗಿ ಬರುತ್ತಿವೆ ಆ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರ್ಪಡೆಗೊಳ್ಳುತ್ತಿದೆ.. ಒಂದೇ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟರಾಗಿ ಮಿಂಚಿದ ದುನಿಯಾ ವಿಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಈಗ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

 

ಅನೇಕ ವರ್ಷಗಳಿಂದ ಸ್ನೇಹಿತರಾಗಿರೋ ಗಣೇಶ್ ಮತ್ತು ವಿಜಯ್ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು ಈಗ ಅದು ಈಡೇರುತ್ತಿದೆ. ಗಣೇಶ್‌ ಈಗಾಗಲೇ ಒಪ್ಪಿಕೊಂಡಿರುವ ‘ಆರೇಂಜ್‌’ ಮತ್ತು ದುನಿಯಾ ವಿಜಯ್‌ ಬ್ಯುಸಿಯಾಗಿರುವ ‘ಜಾನಿ ಜಾನಿ ಎಸ್‌ ಪಪ್ಪಾ’ ಎರಡು ಚಿತ್ರಗಳು ಮುಗಿದ ಮೇಲೆ ಗಣೇಶ್ ಮತ್ತು ವಿಜಯ್ ಕಾಂಬಿನೇಶನ್‌ನ ಚಿತ್ರ ಸೆಟ್ಟೇರಲಿದೆ. ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಾರೆ.

 

 

ಈಗಾಗಲೇ ಈ ಇಬ್ಬರು ನಂತರ ಚಿತ್ರಕ್ಕೆ ಕತೆಯನ್ನು ಸಿದ್ದೊಡಿಸಿಕೊಂಡಿರೋ ಪ್ರೀತಮ್ ಇನ್ನೇನು ಕೆಲವು ದಿನಗಳಲ್ಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಲಿದ್ದಾರೆ. ವಿಶೇಷ ಎಂದರೆ ಈ ಚಿತ್ರವನ್ನು ಗಣೇಶ್‌ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಿದ್ದಾರೆ.ಉಳಿದ ತಾರಾಗಣ, ತಂತ್ರಜ್ಞರನ್ನು ಶೀಘ್ರದಲ್ಲೇ ಆಯ್ಕೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top