fbpx
ಆರೋಗ್ಯ

ದೇಹದಲ್ಲಿ ಮೆಲನಿನ್, ಮೂಳೆ ಮತ್ತು ಅಂಗಾಂಶಗಳ ಬೆಳವಣಿಗೆಗೆ ತಾಮ್ರ ಬೇಕು ಆದ್ರೆ ಇದು ಜಾಸ್ತಿ ಆದರೆ ಅಪಾಯ ತಪ್ಪಿದ್ದಲ್ಲ ಹಾಗಾದ್ರೆ ಹೆಚ್ಚಾದ ತಾಮ್ರದ ಅಂಶ ಕಡಿಮೆ ಮಾಡೋದು ಹೇಗೆ ತಿಳಿಯೋಣ ಬನ್ನಿ

ವಯಸ್ಕರಲ್ಲಿ 50 ಮತ್ತು 80 ಮಿಲಿಗ್ರಾಂ (ಮಿಗ್ರಾಂ) ತಾಮ್ರ ಅಂಶ ಸ್ನಾಯು ಮತ್ತು ಪಿತ್ತಜನಕಾಂಗದಲ್ಲಿ ಇರುತ್ತದೆ , ತಾಮ್ರವು ಮೆಲನಿನ್, ಮೂಳೆ ಮತ್ತು ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಒಂದು ವೇಳೆ ಈ ತಾಮ್ರದ ಅಂಶ ಬಹಳ ಹೆಚ್ಚಾದರೆ ಅಪಾಯ ಕಟ್ಟಿಟ್ಟ ಬುತ್ತಿ , ಹಾಗಾದ್ರೆ ಈ ಸಾಮಾನ್ಯ ಮಟ್ಟಕ್ಕಿಂತ ತಾಮ್ರದ ಅಂಶ ಹೆಚ್ಚಾದರೆ ಏನು ಮಾಡಬೇಕು ಇಂದು ನಾವು ತಿಳಿಯೋಣ ..

ಮೊದಲಿಗೆ ದೇಹಕ್ಕೆ ಅತಿ ಹೆಚ್ಚು ತಾಮ್ರದ ಅಂಶ ಹೇಗೆ ಸೇರ್ಪಡೆಯಾಗುತ್ತಿದೆ ಎಂದು ತಿಳಿದುಕೊಳ್ಳಬೇಕು

ಆನಂತರ ದೇಹಕ್ಕೆ ಜಿಂಕ್ ಅಥವಾ ಸತು ಅಂಶಗಳನ್ನು ಹೆಚ್ಚಾಗಿ ಸೇರಿಸುವುದರ ಮೂಲಕ ತಾಮ್ರದ ಅಂಶವನ್ನು ನಿಯಂತ್ರಣಕ್ಕೆ ತರಬಹುದು , ದೇಹದಲ್ಲಿ ತಾಮ್ರದ ಅಂಶವನ್ನು ಹೆಚ್ಚು ಕಡಿಮೆ ಆಗದಂತೆ ಜಿಂಕ್ ಅಥವಾ ಸತು ಸಮತೋಲನಗೊಳಿಸುತ್ತದೆ ಹಾಗೆಯೇ ದೇಹದಲ್ಲಿ ಜಿಂಕ್ ಅಥವಾ ಸತು ಅಂಶಗಳು ಹೆಚ್ಚಾದರೆ ತಾಮ್ರದ ಅಂಶ ನಿಯಂತ್ರಣಕ್ಕೆ ತರುತ್ತದೆ .

 

 

ತಾಮ್ರದ ಅಂಶದ ವಿರೋಧಿ ಸಂಯುಕ್ತಗಳಾದ ಸಲ್ಫರ್, ಮ್ಯಾಂಗನೀಸ್, ಸೆಲೆನಿಯಮ್,ವಿಟಮಿನ್ ಬಿ , ವಿಟಮಿನ್ ಸಿ ಯಂತಹ ತಾಮ್ರ ವಿರೋಧಿ ಅಂಶಗಳನ್ನು ಹೆಚ್ಚಿಸಿ.

ಆದಷ್ಟು ಹೆಚ್ಚಿನ ನೀರು ಕುಡಿಯಲು ಮರೆಯಬೇಡಿ , ದಿನಕ್ಕೆ 7 ರಿಂದ 8 ಲೋಟ ನೀರು ಅವಶ್ಯಕ .

ದೇಹಕ್ಕೆ ಹಬೆ ಅಥವಾ ಶಾಖ ತೆಗೆದುಕೊಳ್ಳಿ , ಹೆಚ್ಚು ಬೆವೆತಷ್ಟು ಒಳ್ಳೆಯದು , ದಿನಕ್ಕೆ 20 ನಿಮಿಷವಾದರೂ ವ್ಯಾಯಾಮ ಮಾಡಿ .

ತಾಮ್ರದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸುವುದು ಕಡಿಮೆ ಮಾಡಿ ಅಥವಾ ತಪ್ಪಿಸಿ.

 

 

ಚಾಕೊಲೇಟ್
ಸೀಗಡಿ
ಗೋಧಿ
ಕಾಫಿ
ಸೋಯಾಬೀನ್
ಗೋಡಂಬಿ
ಬೆಣ್ಣೆ ಹಣ್ಣು
ಸೊಪ್ಪುಗಳು
ತೆಂಗಿನ ಕಾಯಿ
ಸೂರ್ಯಕಾಂತಿ ಬೀಜಗಳು
ಎಳ್ಳು
ಲಿವರ್ ಮಾಂಸ ಇತ್ಯಾದಿ

ಸತುವಿನಲ್ಲಿ (ಜಿಂಕ್) ಸಮೃದ್ಧವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ

ಮೊಟ್ಟೆ
ಕುಂಬಳಕಾಯಿ ಬೀಜಗಳು

ಹೆಚ್ಚು ಮಾಂಸಾಹಾರವನ್ನು ಸೇವಿಸಿ ಹಾಗೆಯೇ ಕೊಬ್ಬು ರಹಿತ ಮಾಂಸವನ್ನೇ ಸೇವಿಸಿ.

 

 

ಸ್ನಾನ ಮಾಡುವಾಗ ಹಿಮಾಲಯದ ಉಪ್ಪು ಅಥವಾ ಎಪ್ಸಮ್ ಸಾಲ್ಟ್ ಅನ್ನು ಬಿಸಿ ನೀರಿಗೆ ಎರಡು ಚಮಚ ಬೆರೆಸಿ ಸ್ನಾನ ಮಾಡಿ ಇದು ಸಹ ದೇಹದಲ್ಲಿ ಅನಗತ್ಯ ಲವಣ ,ಖನಿಜ ಅಂಶಗಳನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top