ಸಮಾಚಾರ

ಮುಖ್ಯಮಂತ್ರಿಗಳು ಸ್ವಂತ ಮನೆ ಇಲ್ಲದ ಬಡವರಿಗೆ ಮನೆ ಕೊಡ್ತಾರಂತೆ ಆದ್ರೆ ಆ ಬಡವರ ಹತ್ರ ಮೊಬೈಲ್ ಇರಬೇಕಂತೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮುಖ್ಯಮಂತ್ರಿಗಳು ಸ್ವಂತ ಮನೆ ಇಲ್ಲದ ಬಡವರಿಗೆ ಮನೆ ಕೊಡ್ತಾರಂತೆ ಆದ್ರೆ ಆ ಬಡವರ ಹತ್ರ ಮೊಬೈಲ್ ಇರಬೇಕಂತೆ.

 

 

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮತದಾರರ ಮೇಲೆ ಕಣ್ಣಿಟ್ಟಿರುವ ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ಬಡವರಿಗೆ ಮನೆ ಭಾಗ್ಯ ನೀಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ಬಡತನರೇಖೆಗಗಿಂತ ಕೆಳಗಿರುವ ಕುಟುಂಬಗಳಿಗೆ (ಬಿಪಿಎಲ್) ಒಂದು ಲಕ್ಷ ಮನೆಗಳ ವಿತರಣೆ ಮಾಡಲು ಮುಂದಾಗಿದೆ. ಈ ಯೋಜನೆಗಾಗಿ ಬೆಂಗಳೂರು ನಗರ ಜಿಲ್ಲೆಯ 1,200 ಎಕರೆ ಜಮೀನಿನಲ್ಲಿ ಕೆಳ ಅಂತಸ್ತು ಹೊರತುಪಡಿಸಿ ಮೂರು ಮಹಡಿಯ ವಸತಿ ಗೃಹಗಳನ್ನು ನಿರ್ಮಿಸಿ, ಅರ್ಹ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

 

 

 

ಐದು ವರ್ಷಗಳಿಂತ ಹೆಚ್ಚು ಕಾಲ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಬಿಪಿಎಲ್ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳು ಬೆಂಗಳೂರಿನಲ್ಲಿ ಮನೆ ಅಥವಾ ನಿವೇಶನ ಹೊಂದಿರಬಾರದು. ಬಿಪಿಎಲ್‌ ಕುಟುಂಬವಾಗಿರಬೇಕು ಹಾಗೂ ನಗರದಲ್ಲಿ ಕನಿಷ್ಠ 5 ವರ್ಷಗಳಿಂದ ವಾಸಿಸುತ್ತಿರಬೇಕು ಮತ್ತು ವಾರ್ಷಿಕ ಆದಾಯ 87000ಕ್ಕಿಂತ ಜಾಸ್ತಿ ಇರಕೂಡದು.

 

 

ವಿಚಿತ್ರವೇನೆಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಈ ಯೋಜನೆಯ ಅಡಿಯಲ್ಲಿ ಮನೆಗಳನ್ನು ಪಡೆಯಬೇಕೆಂದರೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿರುವ ಮೊಬೈಲ್ ಆ್ಯಪ್‌ ನಲ್ಲಿ ಅರ್ಜಿ ಸಲ್ಲಿಸಬೇಕು. ತೀರಾ ಬಡವರ್ಗದ ಜನರ ಬಳಿ ಸ್ಮಾರ್ಟ್ ಫೋನ್’ಗಳು ಎಲ್ಲಿಂದ ಬರಬೇಕು. ತಿನ್ನೋದಕ್ಕೆ ಅನ್ನ ಇಲ್ಲ ಅಂದ್ರೂ ಮೊಬೈಲ್ ಇಟ್ಟುಕೊಳ್ಳಲೇಬೇಕಾದ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ತೀರಾ ಬಡವರು ಈ ಯೋಜನೆಯ ಬಗ್ಗೆ ಮನೆ ಸಿಗುತ್ತೆ ಅಂತ ಖುಷಿ ಪಡಬೇಕೋ ಅಥವಾ ಅರ್ಜಿ ಹಾಕಲು ಮೊಬೈಲ್ ಇಲ್ಲವೆಂದು ಸಂಕಟಪಡಬೇಕೋ ಅವರಿಗೇ ಗೊತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top