ಭವಿಷ್ಯ

ಡಿಸೆಂಬರ್ 06 : ನಿತ್ಯಭವಿಷ್ಯ ಮತ್ತೆ ಪಂಚಾಂಗ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬುಧವಾರ, ೦೬ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೩೨
ಸೂರ್ಯಾಸ್ತ : ೧೭:೪೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾರ್ಗಶಿರ
ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಪುನರ್ವಸು
ಯೋಗ : ಶುಕ್ಲ
ಪ್ರಥಮ ಕರಣ : ವಿಷ್ಟಿ
ಸೂರ್ಯ ರಾಶಿ : ವೃಶ್ಚಿಕ
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೧೯:೪೮ – ೨೧:೧೪

ರಾಹು ಕಾಲ: ೧೨:೧೦ – ೧೩:೩೫
ಗುಳಿಕ ಕಾಲ: ೧೦:೪೬ – ೧೨:೧೦
ಯಮಗಂಡ: ೦೭:೫೭ – ೦೯:೨೧

 

ಮೇಷ (Mesha)

ಸ್ನೇಹಿತರು ಮತ್ತು ಬಂಧುಗಳ ಜೊತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕವಾಗಿ ಸಂಕಷ್ಟದಿಂದ ಪಾರಾಗುವ ದಿನ. ನಿಮ್ಮ ಧೋರಣೆಯಲ್ಲೂ ಸಾಕಷ್ಟು ಬದಲಾವಣೆಗಳು ಕಂಡು ಬರುವುದು.

 

 

ವೃಷಭ (Vrushabha)

ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿರುವವರಿಗೆ ವಿಶೇಷ ಗೌರವ ಲಭಿಸುವುದು. ಕೆಲವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಜಾಸ್ತಿ ಆಗುವುದು. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿರಿ.

 

ಮಿಥುನ (Mithuna)

ಆಸ್ತಿ ವಿಚಾರದಲ್ಲಿ ಇದ್ದ ಸಮಸ್ಯೆಗಳು ಅಚ್ಚರಿ ಎಂಬಂತೆ ಬಗೆಹರಿಯುವುದು. ಈ ದಿನ ಕುಟುಂಬದ ಸದಸ್ಯರೊಡನೆ ಸಮಯ ಕಳೆಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

 

ಕರ್ಕ (Karka)

ಸಕಾರಾತ್ಮಕ ಚಿಂತನೆಯು ಯಶಸ್ಸನ್ನು ತಂದುಕೊಡುವುದು. ಊರು ಎಂದರೆ ಹೊಲಗೇರಿ ಇರುವಂತೆ ನಿಮ್ಮನ್ನು ಕಂಡರೆ ಆಗದವರು ಇದ್ದಾರೆ. ಈಬಗ್ಗೆ ಎಚ್ಚರ ಅಗತ್ಯ.

 

ಸಿಂಹ (Simha)

ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಹಿನ್ನಡೆ ತೋರುವುದು. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಬಹುದಿನಗಳ ನಂತರ ಹಳೆಯ ಸ್ನೇಹಿತನ ಭೇಟಿ ಆಗುವಿರಿ. ಕೌಟುಂಬಿಕವಾಗಿ ಸಂತಸ ತರುವ ದಿನ. ಆರೋಗ್ಯ ಉತ್ತಮ.

 

ಕನ್ಯಾರಾಶಿ (Kanya)

ಅನಗತ್ಯ ವಸ್ತುಗಳ ಖರೀದಿಗೆ ದುಂದುವೆಚ್ಚ ಮಾಡದಿರಿ. ನಿಮಗೆ ಬರಬೇಕಾಗಿದ್ದ ಹಣವು ಸಕಾಲದಲ್ಲಿ ಬರುವುದಿಲ್ಲ. ಹಾಗಾಗಿ ಈ ದಿನ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

 

ತುಲಾ (Tula)

ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ನೀವು ಕೆಲವೊಮ್ಮೆ ಧಾರಾಳತನವನ್ನು ಸಹ ತೋರಿಸಬೇಕಾಗುತ್ತದೆ. ಇದರಿಂದ ಸಾಮಾಜಿಕವಾಗಿ ನೀವು ಗೌರವಿಸಲ್ಪಡುವಿರಿ. ಉತ್ತಮ ಆರೋಗ್ಯ ಹಾಗೂ ಸಂಗಾತಿಯ ಬೆಂಬಲವಿದೆ.

 

ವೃಶ್ಚಿಕ (Vrushchika)

ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳದಿರಿ. ಆಶಾವಾದವೇ ಜೀವನ, ನಿರಾಶಾವಾದವೇ ಮರಣ, ಸಕಾರಾತ್ಮಕ ಚಿಂತನೆಯಿಂದ ಒಳಿತಾಗುವುದು. ಮಕ್ಕಳು ಉದ್ಯೋಗದಲ್ಲಿ ಪ್ರಗತಿ ಸಾಧಿಸುವುದರಿಂದ ಅವರ ಬಗ್ಗೆ ಹೆಮ್ಮೆ ಎನಿಸುವುದು.

 

ಧನು ರಾಶಿ (Dhanu)

ಕುಟುಂಬದಲ್ಲಿ ಶಾಂತಿಯ ವಾತಾವರಣ. ಸಾಮಾಜಿಕ ಮತ್ತು ರಾಜಕೀಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣವಾಗಿ ಕೈಗೂಡುವುದು. ಆರ್ಥಿಕ ಸ್ಥಿತಿಯಲ್ಲಿ ಅಲ್ಪ ಹಿನ್ನಡೆ ತೋರುವುದು.

 

ಮಕರ (Makara)

ಹೊಸ ಕಲ್ಪನೆ ಆಲೋಚನೆಗಳನ್ನು ಸದ್ಯದ ಮಟ್ಟಿಗೆ ಇತರರ ಮುಂದೆ ಹೇಳಿಕೊಳ್ಳದಿರುವುದು ಬೇಡ. ಬದಲಾಗಿ ಅವಕ್ಕೆ ಸ್ಪಷ್ಟರೂಪ ನೀಡಿರಿ. ಆ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ಬದಲಿಸುವುದು.

 

ಕುಂಭರಾಶಿ (Kumbha)

ನೀವಿಂದು ಹೆಚ್ಚು ಪ್ರಭಾವಶಾಲಿಯಾಗಿದ್ದೀರಿ. ನೀವು ಹಲವಾರು ಕ್ಲಿಷ್ಟ ಸಮಯಗಳನ್ನು ಮೆಟ್ಟಿ ನಿಂತಿರುವುದರಿಂದ ಈ ದಿನ ಹಮ್ಮಿಕೊಳ್ಳುವ ಎಲ್ಲಾ ಕೆಲಸಗಳು ಸರಾಗವಾಗಿ ಆಗುವುದು. ಬಂಧುಗಳು ನಿಮ್ಮ ನೆರವಿಗೆ ಬರುವರು.

 

ಮೀನರಾಶಿ (Meena)

ಯಾರನ್ನು ಅತಿಯಾಗಿ ನಂಬಿದಿರಿ. ನಂಬಿದ ವ್ಯಕ್ತಿಯಿಂದಲೇ ಇಂದು ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ. ಇಷ್ಟದೇವರನ್ನು ಭಜಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top