ಕಿರುತೆರೆ

ಅಬ್ಬಾ..! ಗೊಂಬೆ ನಿವೇದಿತಾಳಿಗೆ ಇದುವರೆಗೂ ಎಷ್ಟು ಜನ ಪ್ರಪೋಸ್ ಮಾಡಿದ್ದಾರೆ ಅಂತ ಗೊತ್ತಾದ್ರೆ ಬೆರಗಾಗ್ತೀರಾ.

ಅಬ್ಬಾ..! ಗೊಂಬೆ ನಿವೇದಿತಾಳಿಗೆ ಇದುವರೆಗೂ ಎಷ್ಟು ಜನ ಪ್ರಪೋಸ್ ಮಾಡಿದ್ದಾರೆ ಅಂತ ಗೊತ್ತಾದ್ರೆ ಬೆರಗಾಗ್ತೀರಾ.

 

 

ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ. ಅಂಥವರಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಾರೆ!

 

 

ಒಂದು ಕಡೆ ಬಿಗ್ ಬಾಸ್ ಕಾರ್ಯಕ್ರಮ 50 ದಿನಗಳನ್ನು ಪೂರೈಸಿದ್ದು ಇನ್ನೊಂದು ಕಡೆ ಬಿಗ್ ಬಾಸ್ ಮನೆಯ ಒಂದೊಂದೇ ಪ್ರೇಮ ಕತೆಗಳು ಬಹಿರಂಗವಾಗುತ್ತಿವೆ. ದಿನಗಳು ಉರುಳುತ್ತಿದ್ದಂತೆ ಅನೇಕ ಕುತೂಹಲ ವಿಷಯಗಳು ಆಚೆ ಬರುತ್ತಿವೆ.ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎರಡನೇ ಸೀಸನ್ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಬಂದಿದ್ದರು. ದಿನವಿಡೀ ಅಕುಲ್ ಆದೇಶಗಳನ್ನು ಪಾಲಿಸುವಂತೆ ಬಿಗ್ ಬಾಸ್ ಸೂಚಿಸಿದ್ದರು.

 

 

ರಾತ್ರಿಯಾದ ಮೇಲೆ ಗಾರ್ಡನ್ ಏರಿಯಾದಲ್ಲಿ ಅಕುಲ್ ಅವರೇ ನಡೆಸಿಕೊಡುತ್ತಿದ್ದ ಸೂಪರ್ ಟಾಕ್ ಟೈಮ್ ಷೋ ಅಣಕನ್ನು ಸೃಷ್ಟಿ ಮಾಡಿ ಅದೇ ರೀತಿಯಲ್ಲೇ ಮನೆಯ ಎಲ್ಲ ಸದಸ್ಯರಿಗೂ ರ್ಯಾಪಿಡ್ ಫೈರ್ ರೌಂಡ್ ಆಡಿಸಲಾಯಿತು. ಇದರ ಪ್ರಕಾರ ಅಕುಲ್ ಯಾರಿಗೆ ಪ್ರಶ್ನೆಯನ್ನು ಕೇಳುತ್ತಾರೋ ಅವರು ತಕ್ಷಣ ಉತ್ತರ ನೀಡಬೇಕಾಗಿತ್ತು. ಎಲ್ಲರಂತೆ ಚಂದನ್ ಮತ್ತು ನಿವೇದಿತಾರನ್ನು ಹಾಟ್ ಸೀಟ್ ನಲ್ಲಿ ಕೂರಿಸಿ ಪ್ರಶ್ನೆಗಳನ್ನು ಅಕುಲ್ ಕೇಳಿದರು.

 

 

ನಿವೇದಿತಾಳಿಗೆ “ನಿಮಗೆ ಎಷ್ಟು ಜನ ಪ್ರೊಪೋಸ್ ಮಾಡಿದ್ದಾರೆ” ಎಂದು ಅಕುಲ್ ಪ್ರಶ್ನೆಕೇಳಿದರು. ಅದಕ್ಕೆ “ಇಲ್ಲಿವರೆಗೆ ನನಗೆ ತುಂಬಾ ಜನ ಪ್ರಪೋಸ್ ಮಾಡಿದ್ದಾರೆ, ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರೊಪೋಸಲ್ಸ್’ಗಳು ಬಂದಿವೆ. ಇವುಗಳ ಮಧ್ಯೆ ನಿಜವಾಗಿ, ಪ್ರಾಮಾಣಿಕವಾಗಿ ಪ್ರಪ್ರೋಸ್ ಮಾಡಿದವರ ಸಂಖ್ಯೆ 20 ಕ್ಕೂ ಜಾಸ್ತಿ ಇದೆ” ಎಂದು ನಿವೇದಿತಾ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top