ಸಮಾಚಾರ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಹಿನ್ನಲೆಯುಳ್ಳ ಪೋಸ್ಟರ್ ಬಗ್ಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ !

ಸದಾ ಒಂದಲ್ಲ ಒಂದು ವಿಷಯದ ಬಗ್ಗೆ ಧನಿಯೆತ್ತುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು 25 ವರ್ಷಗಳು ಸಂದ ಹಿನ್ನಲೆಯಲ್ಲಿ
ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದವರು ನಾವು ಮರೆಯದಿರೋಣ ದ್ರೋಹದ 25 ವರ್ಷಗಳು ಎಂಬ ಪೋಸ್ಟರ್ಗಳನ್ನು ಮೈಸೂರಿನ ಕೆ.ಆರ್.ನಗರದ ಬೀದಿಗಳಲ್ಲಿ ಅಂಟಿಸಿದ್ದ ವಿಷಯದ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನೆ ಹಾಕಿದ್ದಾರೆ.

 

 

 

ಮೈಸೂರು ಜಿಲ್ಲೆಯ ಕೆ.ಆರ್. ನಗರದ ಬೀದಿ ಬೀದಿಗಳಲ್ಲಿ ಈ ರೀತಿ ಪೋಸ್ಟರ್ ಅಂಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರೂ ಇಲ್ಲವೇ? ಈದ್, ಟಿಪ್ಪು ಮೆರವಣಿಗೆಯಂತೆ ಇಂಥ ಪೋಸ್ಟರ್ಗಳಿಗೂ ಅವಕಾಶವಿದೆಯೇ? ಸಿದ್ದರಾಮಯ್ಯನವರ ಆಡಳಿತದಲ್ಲಿ ಮೈಸೂರು ಜಿಲ್ಲೆಯಲ್ಲಿ ಏನಾಗುತ್ತಿದೆ ನೋಡಿ?!

 

 

ಇದರ ಬಗ್ಗೆ ನೀವು ಮಾತಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top