ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ಸಾಮಾನ್ಯ ಕನ್ನಡಿಗ..!

ಬಿಗ್’ಬಾಸ್ ಮನೆಯಲ್ಲಿ ಸಾಮಾನ್ಯ ಕನ್ನಡಿಗ..!

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಸಾಮಾನ್ಯ ಕನ್ನಡಿಗ ತಂಡ ಮಾಡಿದ್ದ ಹೋರಾಟವನ್ನ ಪ್ರದರ್ಶನ ಮಾಡಲಾಗಿದೆ.. ಅಷ್ಟಕ್ಕೂ ಇದು ನಡೆದಿರುವುದು ಈ ಬಾರಿಯ ಬಿಗ್ ಬಾಸ್’ನಲ್ಲಲ್ಲ ಬದಲಾಗಿ ಕಳೆದ ಬಾರಿಯ ಬಿಗ್ ಬಾಸ್ ಫಿನಾಲೆಯಲ್ಲಿ.

 

 

ನಾಲ್ಕನೇ ಸೀಸನ್ ಫಿನಾಲೆಯನ್ನು ತಲುಪಿದ್ದ ವೇಳೆ ನಾಡಿನ ಕಂಬಳ ಕ್ರೀಡೆಗೆ ನಿರ್ಬಂಧ ಹೇರಲಾಗಿತ್ತು ಆಗ ನಿರ್ಬಂಧದ ವಿರುದ್ಧ ಬೆಂಗಳೂರಿನಲ್ಲಿ ಸಾಮಾನ್ಯ ಕನ್ನಡಿಗ ಎಂಬ ಸಂಸ್ಥೆ ಪ್ರತಿಭಟನೆ ಹಮ್ಮಿಕೊಂಡಿತ್ತು ಮತ್ತು ಕರ್ನಾಟಕದಾದ್ಯಂತ ಕಂಬಳ ಪರವಾಗಿ ಹೋರಾಟ ನಡೆಯುತ್ತಿದ್ದವು. ಸಾಮಾನ್ಯಕನ್ನಡಿಗ ತಂಡವೇ ಮೊದಲಬಾರಿಗೆ ಈ ಆಂದೋಲನವನ್ನು ಬೆಂಗಳೂರಿನಲ್ಲಿ ಕೈಗೆತ್ತಿಕೊಂಡಿತ್ತು. ಅಷ್ಟೇ ಅಲ್ಲದೆ ಸಾವಿರಾರು ಜನ ಆನ್ಲೈನ್ ನಲ್ಲೂ ಸಾಮಾನ್ಯ ಕನ್ನಡಿಗ ತಂಡಕ್ಕೆ ಬೆಂಬಲ ಸೂಚಿಸಿದ್ದವು.

 

ನಾಲ್ಕನೇ ಸೀಸನ್ ಬಿಗ್ ಬಾಸ್ ಫಿನಾಲೆಯಲ್ಲೂ ಕೂಡ ಕಂಬಳ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ವಿಡಿಯೋವೊಂದನ್ನ ಬಿಗ್ ಬಾಸ್-4 ಫಿನಾಲೆ ಸ್ಪರ್ಧಿಗಳಿಗೆ ತೋರಿಸಲಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಕಂಬಳದ ಹೋರಾಟದ ಬಗ್ಗೆ ಶೀತಲ್ ಶೆಟ್ಟಿ ವಾರ್ತಾ ಶೈಲಿಯಲ್ಲಿ ಸ್ಪರ್ಧಿಗಳಿಗೆ ತಿಳಿಸಿದ್ದರು. ಆ ವಿಡಿಯೋವನ್ನು ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top