fbpx
ಕಿರುತೆರೆ

ಡಿ.9ರಿಂದ ಮತ್ತೆ ಸರಿಗಮಪ ಲಿಟ್ಲ್ ಚಾಂಪ್ಸ್.

ಡಿ.9ರಿಂದ ಮತ್ತೆ ಸರಿಗಮಪ ಲಿಟ್ಲ್ ಚಾಂಪ್ಸ್.

 

 

ಕನ್ನಡ ಕಿರುತೆರೆ ರಿಯಾಲಿಟಿ ಷೋಗಳಿಗೆ ಹೊಸ ರೂಪವನ್ನು ಕೊಟ್ಟ ಜೀ ಕನ್ನಡ ವಾಹಿನಿ, ಇದೀಗ ತನ್ನ ಜನಪ್ರಿಯ ಷೋಗಳಲ್ಲೊಂದಾದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್-೧೪ಅನ್ನು ಆರಂಭಿಸುತ್ತಿದೆ. ಈ ಹಿಂದೆ ಪ್ರಸಾರಗೊಂಡ ಎಲ್ಲಾ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್‌ಗಳು ಅದ್ಭುತ ಯಶಸ್ಸು ಕಂಡಿದ್ದು ಇದೀಗ ಹೊಸ ರೂಪದಲ್ಲಿ ಮತ್ತೊಮ್ಮೆ ಕನ್ನಡಿಗರ ಮುಂದೆ ಬರಲಿದೆ. ಈ ಹಿಂದಿನ ಸೀಜನ್‌ನಲ್ಲಿ ಅನ್ವಿತಾಶ್ರೀಧರ್ ವಿಜೇತರಾಗಿದ್ದರು.

ವಿಭಿನ್ನ ರಿಯಾಲಿಟಿ ಷೋಗಳನ್ನು ಪ್ರಸಾರ ಮಾಡುವ ಮೂಲಕ ಕನ್ನಡಿಗರ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಮುಂದಿನ ಸರಿಗಮಪ ಲಿಟ್ಲ್ ಚಾಂಪ್ಸ್‌ಗಾಗಿ ರಾಜ್ಯದ ೩೦ ಜಿಲ್ಲೆಗಳಲ್ಲಿಯೂ ಆಡಿಷನ್ ನಡೆಸಿ ಅವಕಾಶ ವಂಚಿತರಾದವರಿಗೆ ಅವಕಾಶ ನೀಡಿದೆ. ಈವರೆಗ ನಾಲ್ಕರಿಂದ ಐದು ಜಿಲ್ಲೆಗಳ ನಡೆಯುತ್ತಿದ್ದ ಆಡಿಷನ್ ಇದೇ ಮೊದಲಬಾರಿಗೆ ೩೦ ಜಿಲ್ಲೆಗಳಲ್ಲಿ ನಡೆದಿದೆ. ಈ ಹಿಂದೆ ಆಡಿಷನ್‌ಗೆ ಬರಲಾಗದೆ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದರು. ಆದರೆ ಈ ಬಾರಿ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಆಡಿಷನ್ ನಡೆಸುವ ಮೂಲಕ ಯಾವ ಪ್ರತಿಭೆಯೂ ಕೂಡ ಅವಕಾಶ ವಂಚಿತರಾಗದಂತೆ ನೋಡಿಕೊಂಡಿದೆ.

 

 

ಸರಿಗಮಪ ಲಿಟ್ಲ್ ಚಾಂಪ್ಸ್ ಈ ಬಾರಿಯ ಸೀಸನ್‌ನ್ನು ಪೋಷಕರಿಗೆ ಅರ್ಪಣೆ ಮಾಡಲಾಗುತ್ತಿದೆ. ತಮ್ಮ ಮಕ್ಕಳಿಗೆ ಸಂಗೀತದ ಮೇಲಿರುವ ಆಸಕ್ತಿಯನ್ನು ಮೊದಲು ಗುರುತಿಸಿ, ಅವರನ್ನು ಸಂಗೀತಾಭ್ಯಾಸದಲ್ಲಿ ತೊಡಗಿಸಿ, ಅವರ ಹಾಡುಗಳ ಮೊದಲ ಕೇಳುಗರಾಗಿ, ಅವರಿಗೆ ಉತ್ಸಾಹ, ಧೈರ್ಯ ತುಂಬಿ ಸಾಧಕರನ್ನಾಗಿ ತಯಾರು ಮಾಡುವಲ್ಲಿ ಪೋಷಕರ ಪಾತ್ರ ತುಂಬಾ ದೊಡ್ಡದು. ಮಕ್ಕಳ ಕನಸನ್ನು ತಮ್ಮ ಕನಸನ್ನಾಗಿಸಿ, ಅದರ ಯಶಸ್ಸಿಗೆ ಶ್ರಮಿಸುವ ಪೋಷಕರೇ ಸರಿಗಮಪದ ಯಶಸ್ವೀ ಪಯಣದ ಸ್ಫೂರ್ತಿ ಮತ್ತು ನಿಜವಾದ ಪ್ರೇರಣೆ.

ಎಂದಿನಂತೆ ಮೊದಲ ಸಂಚಿಕೆಯಲ್ಲಿ ಮೆಗಾ ಆಡಿಷನ್ ನಡೆಯುತ್ತದೆ. ಈ ಮೆಗಾ ಆಡಿಷನ್‌ನಲ್ಲಿ ೩೦ ಜನ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಯಾರು ತಮ್ಮ ಇಂಪಾದ ದನಿಯಿಂದ ತೀರ್ಪುಗಾರರ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆಸುತ್ತಾರೋ ಅವರು ಸೀಸನ್‌ನಲ್ಲಿ ಮುಂದುವರೆಯುತ್ತಾರೆ. ಈ ಬಾರಿಯ ಸರಿಗಮಪ ಲಿಟ್ಲ್ ಚಾಂಪ್ಸ್‌ನ ತೀರ್ಪುಗಾರರಾಗಿ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರ ಜೊತೆಗೆ ಮಹಾಗುರುಗಳಾಗಿ ಸ್ವರಮಾಂತ್ರಿಕ ಹಂಸಲೇಖ ಇರುತ್ತಾರೆ.

 

 

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಅನುಭವದ ಸಾರವನ್ನು ಸವಿಯುವ ಅವಕಾಶ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಕೂಡ ಲಭಿಸಲಿದೆ. ಲವಲವಿಕೆಯ ನಿರೂಪಣೆಗೆ ಹೆಸರಾದ ಅನುಶ್ರೀ ಅವರು ತಮ್ಮದೇ ಆದ ಶೈಲಿಯಲ್ಲಿ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಸರಿಗಮಪ ಮಹಾ ವೇದಿಕೆಯಲ್ಲಿ ಈಬಾರಿಯೂ ೧೫ ಜನ ಜ್ಯೂರಿ ಮೆಂಬರ್‌ಗಳಿರುತ್ತಾರೆ. ಪ್ರತಿಯೊಂದು ಸ್ಪರ್ಧಿಗೂ ಈ ೧೫ ಜನ ಜ್ಯೂರಿ ಮೆಂಬರ್ಸ್ ಸ್ಕೋರ್ ನೀಡುತ್ತಾರೆ. ಹಾಗೂ ಉಳಿದ ತೀರ್ಪುಗಾರರು ಹಿಡನ್ ಸ್ಕೋರನ್ನು ನೀಡುತ್ತಾರೆ. ಈ ಲಿಟಲ್ ಛಾಂಪ್ಸ್ ಸೀಸನ್ ೧೪ ಇದೇ ಡಿ. ೯ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7-30ಕ್ಕೆ ಪ್ರಸಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top